ಕುಣಿಗಲ್: ತಾಲೂಕಿನ ಕೊತ್ತಗೆರೆ ಹೋಬಳಿ ಭಕ್ತರಹಗಳ್ಳಿ ಗ್ರಾಪಂನಲ್ಲಿ ನಡೆದಿರುವ ಭ್ರಷ್ಟಾಚಾರ ಖಂಡಿಸಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಗ್ರಾಪಂ ಸದಸ್ಯ ಕಿಶೋರ್‌ಗೌಡ, ಗ್ರಾಮದ ಮುಖಂಡ ಶ್ಯಾನೇಗೌಡ ಅವರ ನೇತೃತ್ವದಲ್ಲಿ ಒತ್ತಾಯಿಸಿದರು.
ಗ್ರಾಪಂ ಸದಸ್ಯ ಕಿಶೋರ್‌ಗೌಡ ಮಾತನಾಡಿ, ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕಾಗಿರುವ ಗ್ರಾಪಂ ಕೆಲ ಸದಸ್ಯರು ಸರ್ಕಾರದ ಅನುದಾನ ದುರ್ಬಳಕ್ಕೆ ಮಾಡಿಕೊಂಡು ತಾವು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಆರೋಪಿಸಿದರು. 14ನೇ ಹಣ ಕಾಸು ಯೋಜನಡಿಯಲ್ಲಿ ಕಳೆದ ಮೂರು ಅವಧಿಯಿಂದ ಗ್ರಾಪಂಗೆ 60 ಲಕ್ಷ ರೂ. ಬಿಡುಗಡೆಯಾಗಿದೆ, ಈ ಪೈಕಿ ಬೆಸ್ಕಾಂಗೆ ಶೇ. 25, ಎಸ್ಸಿ, ಎಸ್ಟಿಗೆ ಶೇ.25 ರಷ್ಟು ಹಣ ಮೀಸಲಿಡಲಾಗಿದೆ. ಆದರೆ ಬೆಸ್ಕಾಂಗೆ ಮೀಸಲಿಟ್ಟ ಹಣದಲ್ಲಿ ಸುಮಾರು 20 ಲಕ್ಷ ರೂ. ಖರ್ಚಾಗಿದೆ, ಆದರೆ ಗ್ರಾಮಗಳ ವಿದ್ಯುತ್ ಕಂಬಗಳಿಗೆ ಸಮರ್ಪಕವಾಗಿ ವಿದ್ಯುತ್ ದೀಪ ಅಳವಡಿಸಿಲ್ಲ ಎಂದು ದೂರಿದರು.
ನಕಲಿ ಬಿಲ್: ಕೆಲ ಪ್ರಭಾವಿ ಸದಸ್ಯರು ಗ್ರಾಪಂ ಪಿಡಿಒ ಹರೀದ್ರಗೋಪಾಲ್ ಅವರನ್ನು ಬೆದರಿಸಿ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಪಂಪ್ ಮೋಟರ್ ಹಾಗೂ ವಿದ್ಯುತ್ ದೀಪಖರೀದಿಸಲಾಗಿದೆ ಎಂದು ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತ ರೂ. ದುರ್ಬಳಕೆ ಮಾಡಿಕೊಂಡು, ಆ ಹಣದಲ್ಲಿ ಪ್ರಭಾವಿ ಸದಸ್ಯರು ತಮ್ಮ ಮನೆಗಳಿಗೆ ಯುಪಿಎಸ್‌ಅಳವಡಿಸಿಕೊಂಡಿದ್ದಾರೆ, ಭಕ್ತರಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂದು ಎರಡು ಲಕ್ಷ ರೂ. ಹಾಗೂ 35 ಸಾವಿರ ರೂ. ವೆಚ್ಚದಲ್ಲಿ ಭಕ್ತರಹಳ್ಳಿ ಕೆರೆ ಕೋಡಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ಡ್ರಾ ಮಾಡಲಾಗಿದೆ, ಆದರೆ ಅಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ,ಗೋಮಾಳ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಎನ್‌ಎಂಆರ್ ತೆಗೆಯಲಾಗಿದೆ, ಆದರೆ ಅಲ್ಲಿ ರಸ್ತೆಯೇ ನಿರ್ಮಾಣವಾಗಿಲ್ಲ, ಸುಮಾರು 20 ಲಕ್ಷ ರೂ. ದುರ್ಬಳಕೆ= ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಅವ್ಯವಹಾರ ಅಕ್ರಮಗಳಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಾ ಅವರ ಪತಿಬಿ.ಡಿ.ಕುಮಾರ್ ಅವರ ಕೈವಾಡ ಇರುವುದು ಕೇಳಿ ಬರುತ್ತಿದೆ ಎಂದು ಕಿಶೋರ್‌ಗೌಡ ಗಂಭೀರ ಆರೋಪ ಮಾಡಿದರು. ಪಂಪು ಮೋಟರ್, ಲೈಟ್ ಖರೀದಿ, ವರ್ಗ ಒಂದು, 14ನೇ ಹಣಕಾಸು, ನರೇಗಾ ಯೋಜನೆಯಲ್ಲಿ ನಡೆದಿರುವಅವ್ಯವಹಾರದ ಸಂಬಂಧ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀನಿವಾಸ್, ನವೀನ್, ಮಂಜುಳಾ, ಮಧು, ನಾಗಭೈರೇಗೌಡ, ಬಾಬು ಪ್ರಕಾಶ್, ಕಿರಣ್ ನವೀನ್ ಇದ್ದರು.