Advertisement

ಭಜಂತ್ರಿ ಸಮಾಜ ಏಳ್ಗೆಗೆ ಶ್ರಮಿಸುವೆ: ಮನಗೂಳಿ

11:06 AM Oct 26, 2018 | |

ಸಿಂದಗಿ: ಭಜಂತ್ರಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತೋಟಗಾರಿಕೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿದರು.

Advertisement

ಗುರುವಾರ ವಿದ್ಯಾನಗರದ 4ನೇ ಕ್ರಾಸ್‌ ನಲ್ಲಿರುವ ಭಜಂತ್ರಿ ಲೇಔಟ್‌ನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ರಾಂಪುರ ಪಿ.ಎ., ಎಸ್‌ ಸಿಪಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗುವ ಭಜಂತ್ರಿ (ಕೊರಮ) ಸಮಾಜದ ಗುರು ಶರಣ ನೂಲಿ ಚಂದಯ್ಯನವರ ಸಮುದಾಯ ಭವನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಭಜಂತ್ರಿ ಸಮಾಜ ಕಾಯಕ ಜೀವಿಗಳು. ಎಲ್ಲ ಶುಭ ಕಾರ್ಯಕ್ರಮಗಳಿಗೆ ಭಜಂತ್ರಿ ಸಮುದಾಯ ಪ್ರಮುಖರಾಗಿರುತ್ತಾರೆ. 

ಎಲ್ಲ ಸಮುದಾಯದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುವ ಸಮುದಾಯವಾಗಿದೆ. ಈ ಸಮುದಾಯಕ್ಕೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನೂಲಿ ಚಂದಯ್ಯನವರ ಸಮುದಾಯ ಭವನ ಕಟ್ಟಡ ಗುಣಮಟ್ಟದಿಂದ ಮತ್ತು ಶೀಘ್ರದಲ್ಲಿ ಪೂರ್ಣಗೊಳ್ಳಬೇಕು. ಸರಕಾರದಿಂದ ಈಗಾಗಲೇ 50 ಲಕ್ಷ ಅನುದಾನ ನೀಡಲಾಗಿದ್ದು, ಇನ್ನೂ ಹೆಚ್ಚಿಗೆ ಬೇಕಾದಲ್ಲಿ ಅನುದಾನ ಬಿಡುಗಡೆ ಮಾಡುತ್ತೇನೆ ಎಂದರು.

ನೀವು ನನಗೆ ಮತ ನೀಡಿದ ಫಲವಾಗಿ ನಾನು ಮಂತ್ರಿಯಾಗಿದ್ದೇನೆ. ಈ ಮಂತ್ರಿ ಸ್ಥಾನ ನನ್ನ ಮನೆತನಕ್ಕೆ ಮತ್ತು ಮಕ್ಕಳಿಗಲ್ಲ. ಏನೇ ಇದ್ದರು ಜನರ ಸೇವೆಗಾಗಿ. ಆನರ ಅಭಿವೃದ್ಧಿಗಾಗಿದೆ. ಆದ್ದರಿಂದ ಸಮುದಾಯದ ಅಭಿವೃದ್ಧಿಗಾಗಿ ಹೇಳಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

Advertisement

ಸಮಾಜದ ಹಿರಿಯ ಎಸ್‌.ಬಿ. ಭಜಂತ್ರಿ ಮಾತನಾಡಿ, ನೂಲಿ ಚಂದಯ್ಯನವರ ಸಮುದಾಯ ಭವನ ಕಟ್ಟಡದ ಸರಕಾರ ನೀಡಿದ ಅನುದಾನ ಸಾಲದು, ಹೆಚ್ಚಿನ ಅನುದಾನ ನೀಡಬೇಕು. ಪರಿಶಿಷ್ಟ ಜಾತಿಯಲ್ಲಿ ಬರುವ ನಮ್ಮ ಸಮುದಾಯ ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಆದ್ದರಿಂದ ಸರಕಾರಿ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ನಮ್ಮ ಸಮುದಾಯಕ್ಕೂ ಪ್ರಾಧಾನ್ಯತೆ ನೀಡಬೇಕು ಎಂದರು.

ಇದೇ ಸಂದರ್ಬಧಲ್ಲಿ ಭಜಂತ್ರಿ (ಕೊರಮ) ಸಮಾಜದ ಅಭಿವೃದ್ಧಿಗೆ ಬೇಕಾದ ಬೇಡಿಕೆಗಳ ಈಡೇರಿಕೆಗೆ ಸಮುದಾಯದ ಮುಖಂಡರು ತೋಟಗಾರಿಕೆ ಸಚಿವರಿಗೆ ಮನವಿ ಸಲ್ಲಿಸಿದರು. ಭೂಸೇನಾ ಅಭಿಯಂತರ ಗಂಗಾಧರ ಮಾತನಾಡಿ, ನೂಲಿ ಚಂದಯ್ಯನವರ ಸಮುದಾಯ ಭವನ ಕಟ್ಟಡದ ನಿರ್ಮಾಣ ಮಾಡುವಲ್ಲಿ ಸಮುದಾಯದ ಜನರ ಸಹಕಾರ ಅಗತ್ಯ ಎಂದರು. ಶಿವಮೂರ್ತಯ್ಯ ಮಠಪತಿ, ಭೀಮಣ್ಣ ಇಂಚಗೇರಿ, ಮೋಹನದಾಸ ಭಜಂತ್ರಿ, ಅಧ್ಯಕ್ಷತೆ ವಹಿಸಿದ ಸಮಾಜದ ಅಧ್ಯಕ್ಷ ನರಸಪ್ಪ ಭಜಂತ್ರಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next