Advertisement

ಭಜನೆ, ಯಕ್ಷಗಾನಕ್ಕೆ  ಪೊಲೀಸರಿಂದ ಅಡ್ಡಿಯಾಗದು: ಆಯುಕ್ತರ ಭರವಸೆ

12:30 AM Mar 07, 2019 | Team Udayavani |

ಕಾವೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಜನೆ, ಯಕ್ಷಗಾನ ಆಗುತ್ತಿದ್ದ ಸಂದರ್ಭ ಕಾವೂರು ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಆರ್‌. ನಾಯಕ್‌ ಅವರು ಏಕಾಏಕಿ ಆಗಮಿಸಿ ಭಜನೆ ನಿಲ್ಲಿಸಿದ, ಯಕ್ಷಗಾ ನದ ಸೌಂಡ್‌ ಸಿಸ್ಟಮ್‌ ಶಬ್ದ ತಗ್ಗಿಸಲು ತಾಕೀತು ಮಾಡಿದ ಘಟನೆ ಕುರಿತಂತೆ ಶಾಸಕ ಡಾ| ಭರತ್‌ ಶೆಟ್ಟಿ ನೇತೃತ್ವದಲ್ಲಿ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಜತೆ ಚರ್ಚಿಸಿತು.

Advertisement

ಘಟನೆ ಕುರಿತಂತೆ ಶಾಸಕರು ಮಾಹಿತಿ ನೀಡಿ ಶ್ರದ್ಧಾ ಕೇಂದ್ರದ ಭಕ್ತರಿಗೆ ಘಟನೆಯಿಂದ ನೋವಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ ಸ್ಥಳೀಯರಿಗೆ ಗ್ರಾಮದ ದೇವಾಲಯ. ಹೀಗಾಗಿ ಇದು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರ ವಾಗಿದ್ದು, ವಿವಿಧ ಕಾರ್ಯಕ್ರಮ ನಡೆಯುತ್ತದೆ. ಸೋಮವಾರ ನಡೆದ ಘಟನೆ ಮರುಕಳಿಸದಂತೆ ನೋಡಿ ಕೊಳ್ಳಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಮನವಿ ಮಾಡಿದರು.

ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಇಂತಹ ಸಮಸ್ಯೆ ಭವಿಷ್ಯದಲ್ಲಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಕಾವೂರು ಘಟನೆ ನನ್ನ ಗಮನಕ್ಕೆ ಬಂದಿರಲಿಲ್ಲ. ಇತರೆಡೆ ಧಾರ್ಮಿಕ ಕಾರ್ಯಕ್ರಮ, ಯಕ್ಷಗಾನ, ನೇಮ ನಿರಾತಂಕವಾಗಿ ನಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯು ಕ್ತರು ಭರವಸೆ ನೀಡಿದರು.

ವ್ಯವಸ್ಥಾಪನ ಸಮಿತಿ ರಾಮಣ್ಣ ಶೆಟ್ಟಿ ಮುಗಿಪು, ಪ್ರಧಾನ ಅರ್ಚಕ ಶ್ರೀನಿವಾಸ ಭಟ್‌, ಕಾರ್ಪೊರೇಟರ್‌ ದೀಪಕ್‌ ಪೂಜಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್‌ ರೈ, ಸದಾಶಿವ ಶೆಟ್ಟಿ, ಮೋಹನ್‌ ಪ್ರಭು, ತುಕಾರಾಂ ಸನಿಲ್‌, ಸುಧಾಕರ್‌, ಹರಿಶ್ಚಂದ್ರ, ಭರತ್‌ ಕಾವೂರು ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next