ಭರತನಾಟ್ಯ ಪಟು ಮತ್ತು ಮುಂಬೈನಲ್ಲಿ ಅಭಿನಯ ತರಬೇತಿ ಪಡೆದಿರುವ ಗೌರಿಬಿದ ನೂರಿನ ರೋಷನ್ ಎಂ. ರಾವ್ ಈಗ “ಭೈರ್ಯ ಕೆಎ-07′ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಇತ್ತೀಚೆಗೆ “ಭೈರ್ಯ ಕೆಎ-07′ ಮೋಶನ್ ಪೋಸ್ಟರ್ ಬಿಡುಗಡೆ ಯಾಗಿತ್ತು. ಈಗ ಚಿತ್ರತಂಡ ಚಿತ್ರೀಕರಣಕ್ಕೆ ಅಣಿಯಾಗಿದೆ. ಹೆಚ್‌ಎಂಟಿಯಲ್ಲಿ ಭರ್ಜರಿ ಸೆಟ್ ಹಾಕಲಾಗಿದೆ. ಬಾಗಲಕೋಟೆಯ ಷರೀಫ ಬೇಗಂ ನದಾಫ್, ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
“ಭೈರ್ಯ ಕೆಎ-07′ ಎಂಬುದು ಸಿನಿಮಾದಲ್ಲಿ ನಾಯಕನಿಗಿರುವ ಹೆಸರು. ಅದನ್ನೇ ಸಿನಿಮಾದ ಟೈಟಲ್ ಆಗಿಟ್ಟು ಕೊಂಡಿದ್ದೇವೆ. ಬೆಂಗಳೂರಿನ ಭೂಗತ ಲೋಕ ಇಲ್ಲಿನ ಡಾನ್‌ಗಳ ಕುರಿತಂತೆ ಸಾಕಷ್ಟು ಸಿನಿಮಾ ಗಳು ಬಂದಿವೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಚಿಂತಾಮಣಿ, ಶಿಡ್ಲಘಟ್ಟವನ್ನು ಜನರು ಮರೆತು ಹೋಗಿ ರುವ ಭೂಗತ ಲೋಕದ ವಿಷಯ ಈ ಸಿನಿಮಾದಲ್ಲಿದೆ.
ರಾಜೀವ್ ಚಂದ್ರಕಾಂತ್ ಈ ಸಿನಿಮಾದ ನಿರ್ದೇ ಶಕರು. “ಭೈರ್ಯ ಕೆಎ-07′ ಸಿನಿಮಾ ವನ್ನು ಬೆಂಗಳೂರು, ಕೋಲಾರ, ಕೆಜಿಎಫ್ ಕಡೆಗಳಲ್ಲಿ 60 ದಿನ ಚಿತ್ರೀಕರಣ ನಡೆಸಲಾಗಿದೆ.