Advertisement

ಭೈರತಿ ರಣಗಲ್‌ ಗೆಟಪ್‌ನಲ್ಲಿ ಮತ್ತೆ ಶಿವಣ್ಣ

03:10 PM Feb 19, 2023 | Team Udayavani |

2017ರಲ್ಲಿ ತೆರೆಕಂಡ ಶಿವರಾಜಕುಮಾರ್‌ ಮತ್ತು ಶ್ರೀಮುರಳಿ ಕಾಂಬಿನೇಶನ್‌ನಲ್ಲಿ ತೆರೆಕಂಡ “ಮಫ್ತಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟಕ್ಕೆ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಅಷ್ಟೇ ಅಲ್ಲದೆ ಕ್ರೈಂ-ಥ್ರಿಲ್ಲರ್‌ “ಮಫ್ತಿ’ ಸಿನಿಮಾದಲ್ಲಿ ಶಿವರಾಜಕುಮಾರ್‌ ಕಾಣಿಸಿಕೊಂಡಿದ್ದ “ಭೈರತಿ ರಣಗಲ್‌’ ಪಾತ್ರ ಕೂಡ ಅಭಿಮಾನಿಗಳಿಗೆ ತುಂಬ ಇಷ್ಟವಾಗಿತ್ತು. ಇದರ ಬೆನ್ನಲ್ಲೇ, “ಭೈರತಿ ರಣಗಲ್‌’ ಎಂಬ ಟೈಟಲ್‌ ಕೂಡ ರಿಜಿಸ್ಟರ್‌ ಆಗಿತ್ತು. ಆದರೆ, ಇಷ್ಟೆಲ್ಲ ಆಗಿ ಐದಾರು ವರ್ಷಗಳೇ ಕಳೆದಿದ್ದರೂ, “ಭೈರತಿ ರಣಗಲ್‌’ ಸಿನಿಮಾದ ಬಗ್ಗೆ ಯಾವುದೇ ಹೊಸ ಅಪ್ಡೇಟ್‌ ಹೊರಬಂದಿರಲಿಲ್ಲ.

Advertisement

ಮತ್ತೂಂದೆಡೆ ನಟ ಶಿವರಾಜಕುಮಾರ್‌ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಅಭಿನಯಿಸುತ್ತ ಬಿಝಿಯಾದರೆ, ನಿರ್ದೇಶಕ ನರ್ತನ್‌, ಯಶ್‌ ಅವರ ಮುಂದಿನ ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಹೀಗಾಗಿ ಶಿವಣ್ಣ ಮತ್ತು ನರ್ತನ್‌ ಕಾಂಬಿನೇಶನ್‌ನಲ್ಲಿ “ಭೈರತಿ ರಣಗಲ್‌’ ಸಿನಿಮಾ ತೆರೆಗೆ ಬರಲಿದೆ ಎಂಬ ಸುದ್ದಿ ಕೂಡ ಅಲ್ಲಿಗೇ ತಣ್ಣಗಾಗಿತ್ತು. ಆದರೆ ಈ ಶಿವರಾತ್ರಿ ಹಬ್ಬದಂದು ಈ ಸುದ್ದಿ ಖಾತ್ರಿಯಾಗಿದೆ.

ಹೌದು, ಸುಮಾರು ಐದಾರು ವರ್ಷಗಳಿಂದಲೂ ಕೇಳಿ ಬರುತ್ತಿದ್ದ “ಭೈರತಿ ರಣಗಲ್‌’ ಸಿನಿಮಾ ತೆರೆಗೆ ಬರುವ ಸುದ್ದಿಯನ್ನು ಸ್ವತಃ ನಿರ್ಮಾಣ ಸಂಸ್ಥೆ “ಗೀತಾ ಪಿಕ್ಚರ್’ ಅಧಿಕೃತವಾಗಿ ಖಚಿತಪಡಿಸಿದೆ. “ವೇದ’ ಸಿನಿಮಾದ ನಂತರ ಗೀತಾ ಶಿವರಾಜಕುಮಾರ್‌ “ಭೈರತಿ ರಣಗಲ್‌’ ಸಿನಿಮಾವನ್ನು ನಿರ್ಮಿಸುತ್ತಿದ್ದು, ನರ್ತನ್‌ ಈ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಕಳೆದ ವರ್ಷ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶಿವಣ್ಣ ಅಭಿನಯದ “ವೇದ’ ಸಿನಿಮಾವನ್ನು ಅನೌನ್ಸ್‌ ಮಾಡಿದ್ದ ನಿರ್ಮಾಪಕಿ ಗೀತಾ ಶಿವರಾಜಕುಮಾರ್‌, ಈ ಬಾರಿ ಶಿವರಾತ್ರಿ ಹಬ್ಬದಂದು “ಭೈರತಿ ರಣಗಲ್‌’ ಅನ್ನು ತಮ್ಮ ನಿರ್ಮಾಣ ಸಂಸ್ಥೆಯ ಎರಡನೇ ಸಿನಿಮಾವಾಗಿ ಅನೌನ್ಸ್‌ ಮಾಡಿದ್ದಾರೆ.

ಸದ್ಯ ಶಿವರಾತ್ರಿ ಹಬ್ಬದ ಪ್ರಯುಕ್ತ “ಭೈರತಿ ರಣಗಲ್‌’ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, “ಮಫ್ತಿ’ ಸಿನಿಮಾದ ಗೆಟಪ್‌ನಲ್ಲೇ ಈ ಸಿನಿಮಾದಲ್ಲೂ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಅಂದಹಾಗೆ, ಶೀಘ್ರದಲ್ಲಿಯೇ “ಭೈರತಿ ರಣಗಲ್‌’ ಸಿನಿಮಾ ಸೆಟ್ಟೇರಲಿದ್ದು, ಸಿನಿಮಾದ ಇತರ ಕಲಾವಿದರು, ತಂತ್ರಜ್ಞರು ಮತ್ತಿತರ ಮಾಹಿತಿಗಳು ಈ ವಾರಾಂತ್ಯದಲ್ಲಿ ಹೊರಬೀಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next