Advertisement

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

04:35 PM Dec 24, 2024 | Team Udayavani |

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ ಇತ್ತೀಚೆಗಿನ ಬ್ಲಾಕ್‌ ಬಸ್ಟರ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ದಿನ ನಿಗದಿಯಾಗಿದೆ.

Advertisement

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ (Shiva Rajkumar) ನಟನೆಯ ‘ಭೈರತಿ ರಣಗಲ್’ (Bhairathi Ranagal)  ಸಿನಿಮಾ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ಆ ಮೂಲಕ ʼಮಫ್ತಿʼ ಪ್ರೀಕ್ವೆಲ್‌ಗೂ ಪ್ರೇಕ್ಷಕರು ಜೈಕಾರ ಹಾಕಿದ್ದರು.

ನರ್ತನ್‌ ನಿರ್ದೇಶನದ ʼಭೈರತಿ ರಣಗಲ್‌ʼ ನ.15 ರಂದು ರಿಲೀಸ್‌ ಆಗಿತ್ತು.‌ ಕಪ್ಪು ಕೋಟ್‌ ತೊಟ್ಟು ವಕೀಲನಾಗಿ ಮತ್ತು ಮಾಸ್‌ ಹೀರೋ ಆಗಿ ಅಬ್ಬರಿಸಿದ ಎರಡು ಶೇಡ್ ನಲ್ಲಿ ಸೆಂಚುರಿ ಸ್ಟಾರ್‌ ಮಿಂಚಿದ್ದರು.

ಸಿನಿಮಾ ಥಿಯೇಟರ್‌ನಲ್ಲಿ ಹಿಟ್‌ ಆಗುವುದರ ಜತೆಗೆ ಬಾಕ್ಸಾಫೀಸ್‌ನಲ್ಲೂ ಸಮಾಧಾನ ತರುವ ಬ್ಯುಸಿನೆಸ್‌ ಮಾಡಿತ್ತು. ಅಂದಾಜಿನ ಪ್ರಕಾರ ಚಿತ್ರ 20 ಕೋಟಿ ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ.

Advertisement

ಶಿವರಾಜ್‌ ಕುಮಾರ್‌ ಅವರ ಮಾಸ್‌ ಲುಕ್‌ ನೋಡಿ ಫ್ಯಾನ್ಸ್‌ಗಳು ಫಿದಾ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ʼಭೈರತಿ ರಣಗಲ್‌ʼ ಬ್ಲಾಕ್‌ ಬಸ್ಟರ್‌ ಹಿಟ್‌ ತಂದುಕೊಟ್ಟಿತು. ಇದೀಗ ಸಿನಿಮಾ ರಿಲೀಸ್‌ ಆಗಿ 40 ದಿನಕ್ಕೆ ʼಭೈರತಿ ರಣಗಲ್‌ʼ ಓಟಿಟಿ ಅಖಾಡಕ್ಕೆ ಕಾಲಿಡಲಿದೆ.

ಮಾಸ್ ಲೀಡರ್ ಈಗ ಪ್ರೈಮ್ ಲೀಡರ್ ಆಗಲು ಸಿದ್ಧರಾಗಿದ್ದಾರೆ ಎಂದು ಓಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಲಾಗಿದೆ. ಡಿ.25 ಅಂದರೆ ನಾಳೆಯಿಂದಲೇ ʼಭೈರತಿ ರಣಗಲ್‌ʼ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.  ಆ ಮೂಲಕ ಕ್ರಿಸ್ಮಸ್‌ ಹಾಲಿಡೇಗೆ ಸಿನಿಮಂದಿಗೆ ಭರ್ಜರಿ ಮನರಂಜನೆ ಸಿಗಲಿದೆ.

ಸಿನಿಮಾದಲ್ಲಿ ದೇವರಾಜ್‌, ಅವಿನಾಶ್‌,ರಾಹುಲ್‌ ಭೋಸ್‌, ರುಕ್ಮಿಣಿ ವಸಂತ್ ಮುಂತಾದವರು ನಟಿಸಿದ್ದು,  ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್‌ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ನವೀನ್‌ ಕುಮಾರ್‌ ಛಾಯಾಗ್ರಹಣ, ಆಕಾಶ್‌ ಹಿರೇಮಠ ಸಂಕಲನ, ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್‌ ಸುಬ್ರಹ್ಮಣ್ಯ, ಚೇತನ್‌ ಡಿಸೋಜ ಸಾಹಸ ನಿರ್ದೇಶನ ಭೈರತಿ ರಣಗಲ್ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next