Advertisement

Sandalwood: ಶಿವರಾಜ್‌ ಕುಮಾರ್ ‌ʼಭೈರತಿ ರಣಗಲ್‌ʼ ರಿಲೀಸ್‌ಗೆ ಡೇಟ್‌ ಫಿಕ್ಸ್

08:14 AM Aug 27, 2024 | Team Udayavani |

ಶಿವರಾಜ್‌ಕುಮಾರ್‌ (Shiva Rajkumar) ನಟನೆಯ “ಭೈರತಿ ರಣಗಲ್‌'(Bhairathi Ranagal)ಚಿತ್ರದ ಬಿಡುಗಡೆ ಯಾಕೋ ಮುಂದೆ ಹೋಗುತ್ತಲೇ ಇದೆ. ಆರಂಭದಲ್ಲಿ ಈ ಚಿತ್ರ ಆ.15ರಂದು ಬಿಡುಗಡೆ ಎಂದು ಘೋಷಿಸಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯಾಗದೇ ಇದ್ದಾಗ ಚಿತ್ರತಂಡ ಟೀಸರ್‌ ಬಿಟ್ಟು ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಎಂದಿತ್ತು.

Advertisement

ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಈಗ ಮತ್ತೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಬಾರಿ ನೇರವಾಗಿ ನವೆಂಬರ್‌ಗೆ ಹೋಗಿದೆ. ಚಿತ್ರ ನ.15ರಂದು ತೆರೆಕಾಣಲಿದೆ.

ಈ ಬಾರಿ ಮತ್ತೆ ಮುಂದಕ್ಕೆ ಹೋಗಲ್ಲ ಎಂಬ ವಿಶ್ವಾಸದ ಜೊತೆಗೆ ಸ್ಟಾರ್‌ ಸಿನಿಮಾವೊಂದು ಈ ತರಹದ ಪದೇ ಪದೇ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಬಾರದು ಎಂಬ ಆಶಯ ಕೂಡಾ ಅಭಿಮಾನಿಗಳದ್ದು.

ಇನ್ನು, ನರ್ತನ್‌ ನಿರ್ದೇಶನದ ಈ ಸಿನಿಮಾವನ್ನು ಶಿವರಾಜ್‌ ಕುಮಾರ್‌ ಅವರೇ ನಿರ್ಮಿಸುತ್ತಿ ದ್ದಾರೆ. ಇದು “ಮಫ್ತಿ’ ಸಿನಿಮಾ ಪ್ರೀಕ್ವೆಲ್‌ ಎನ್ನಲಾಗಿದ್ದು, ಟೀಸರ್‌ ಆ್ಯಕ್ಷನ್‌ನಿಂದ ಕೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next