ಕತೆಯನ್ನು ಹೃದಯದೊಳಗೆ ಇಳಿಸಿಕೊಳ್ಳುತ್ತಾ, ಹಿಂದೂಸ್ತಾನಿ ಸಂಗೀತದ ಎಲ್ಲ ಸುಮುಧರ ರಾಗಗಳನ್ನೂ, ಆಲಾಪಗಳನ್ನೂ ಸವಿಯುವ ಎರಡೆರಡು ಸುಖ ನಿಮ್ಮದಾಗಬೇಕಾದರೆ, “ಮಂದ್ರ’ ನಾಟಕಕ್ಕಿಂತ ಬೇರೊಂದು ಆಯ್ಕೆ ಇಲ್ಲ. ಸಂಪೂರ್ಣ ಸಂಗೀತಸತ್ವದ “ಮಂದ್ರ’ ಎಸ್.ಎಲ್. ಭೈರಪ್ಪನವರ ಬೃಹತ್ ಕಾದಂಬರಿ. ಸಂಗೀತಕಾರ ಪಂಡಿತ್ ಮೋಹನ್‌ಲಾಲ್ ಬದುಕಿನ ಏಳು- ಬೀಳು, ಆರೋಹಣಗಳನ್ನೇ ಧ್ವನಿಯಾಗಿಸಿಕೊಂಡಿದೆ.
ಸಂಗೀತದ ಶಿಖರ ಮುಟ್ಟಿ, ವೈಯಕ್ತಿಕ ಬದುಕಿನಲ್ಲಿ ಪಾತಾಳಕ್ಕೆ ಇಳಿಯುವ ಮೋಹನ್‌ಲಾಲ್‌ನದ್ದು ಇಲ್ಲಿ ಅತಿವಿಶಿಷ್ಟ ಪಾತ್ರ. ತನ್ನ ಖ್ಯಾತಿಯ ಆಕರ್ಷಣೆಯಿಂದಲೇ ಅಕ್ರಮ ಸಂಬಂಧಗಳನ್ನು ಹೊಂದುತ್ತಾ, ಕೊನೆಗೆ ಅವನ ಕಾಮದ ವ್ಯಕ್ತಿತ್ವದೆದುರು ಸಂಗೀತದ ಪ್ರತಿಭೆಯೇ ಸೋತು, ಪತ್ನಿಯ ಮುಂದೆ ಶರಣಾಗತಿಯಾದಂತೆ ನಿಲ್ಲುವ ಮೋಹನ್‌ಲಾಲ್, ಪ್ರೇಕ್ಷಕರನ್ನು ಇನ್ನಿಲ್ಲದಂತೆ ಕಾಡುತ್ತಾನೆ.
ಈ ನಾಟಕವನ್ನು ಕಲಾಗಂಗೋತ್ರಿ ಪ್ರಸ್ತುತಪಡಿಸುತ್ತಿದ್ದು, ಡಾ.ಬಿ.ವಿ. ರಾಜಾರಾಮ್ ನಿರ್ದೇಶಿಸಿದ್ದಾರೆ. 600 ಪುಟಗಳ ಬೃಹತ್ ಕಾದಂಬರಿ ಎರಡೂವರೆ ಗಂಟೆ, ಪ್ರೇಕ್ಷಕನನ್ನು ಮಂತ್ರಮುಗ್ಧವಾಗಿಸುತ್ತದೆ. ಹಣ್ಣು ಹಣ್ಣು ಮುದುಕ ಮೋಹನ್‌ಲಾಲ್‌ನ ಕಣ್ಣೊಳಗಿಂದ ಒಂದೊಂದೇ ಪಾತ್ರಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಈ ನಾಟಕವನ್ನು ನೋಡುವ ಸದಾವಕಾಶ ಕೈತಪ್ಪಿದರೆ, ಅತ್ಯಮೂಲ್ಯ ಸಂಗತಿಯನ್ನು ಕಳಕೊಂಡ ಭಾವ ಹುಟ್ಟದೇ ಇರದು.
ಎಲ್ಲಿ?: ಜು.12, ಗುರುವಾರ, ರಾ.7.30
ಯಾವಾಗ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.