Advertisement
ಎರಡು ದಿನಗಳ ಪ್ರದರ್ಶನದಲ್ಲಿ ಮೊದಲ ದಿನದ ಪ್ರದರ್ಶನ ಯಶಸ್ವಿಗೊಂಡಿದ್ದು ಕೊರೊನಾ ಹಿನ್ನೆಲೆಯಲ್ಲಿ ಸರಿ ಸುಮಾರು ಒಂದೂವರೆ ವರ್ಷ ದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತ ಗೊಂಡು ಖಾಲಿ ಖಾಲಿ ಎಂಬಂತಾಗಿದ್ದ ರವೀಂದ್ರ ಕಲಾಕ್ಷೇತ್ರಕ್ಕೆ “ಪರ್ವ-ವಿರಾಟ ದರ್ಶನ’ ನಾಟಕ ಪ್ರದರ್ಶನ ಕಳೆ ತಂದುಕೊಟ್ಟಿದೆ. ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್‌ಗಳಲ್ಲಿ 500 ರೂ. ಮತ್ತು 250 ರೂ. ವಿಧಗಳಿದ್ದು, ಎಲ್ಲಾ ಟಿಕೆಟ್‌ಗಳು ಖರೀದಿಯಾಗಿತ್ತು.
Related Articles
Advertisement
ಬೆಂಗಳೂರಿನಲ್ಲಿ ಬಹಳ ದಿನಗಳಿಂದ ನಾಟಕ ಅಭಿರುಚಿ ಇರುವಂತವರು “ಪರ್ವ‘ ಒಂದು ಕೆಲಸದ ಒತ್ತಡದಲ್ಲಿ ಬ್ರೇಕ್ ಕೊಟ್ಟಂತಾಗಿದೆ. ಕಾಯ್ದಿರಿಸಿದ ಎಲ್ಲಾ ಟಿಕೆಟ್ಗಳನ್ನು ಖರೀದಿಸಿ, ನಾಟಕ ವೀಕ್ಷಣೆಗೆ ಬಂದಿದ್ದಾರೆ. ಇನ್ನೂ ಟಿಕೆಟ್ಗಳ ಬೇಡಿಗೆ ಹೆಚ್ಚಾಗುತ್ತಿದೆ. ಇದೊಂದು ರಂಗಾಯಣ ತಂಡಕ್ಕೆ ಯಶಸ್ವಿ ತಂದುಕೊಟ್ಟಿದೆ ಎನ್ನಬಹುದು. – ಅರಸೀಕೆರೆ ಯೋಗಾನಂದ, ರಂಗಾಯಣ ಸಂಸ್ಥೆ ಸದಸ್ಯ
ಪರ್ವ ಕಾದಂಬರಿಯ ಉತ್ಕೃಷ್ಟತೆಯನ್ನು ಈ ನಾಟಕದ ಪ್ರದರ್ಶನ ಹೆಚ್ಚಿಸಿದೆ. ದುರ್ಯೋಧನ, ಧೃತರಾಷ್ಟ್ರ, ಸಂಜಯ ಸೇರಿದಂತೆ ಪ್ರತಿಯೊಬ್ಬರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಮಕ್ಕಳಿಂದ ಹಿಡಿದು ಎಲ್ಲರೂ ನೋಡಬಹುದಾದ ರಂಗ ಪ್ರದರ್ಶನ ಇದಾಗಿದೆ. – ಗೋಪಾಲಕೃಷ್ಣ ಮೂರ್ತಿ, ಗಿರಿನಗರ ನಿವಾಸಿ
ಇದೊಂದು ಅತ್ಯಪೂರ್ವ ಪ್ರಯೋಗವಾಗಿದ್ದು, ಕಥೆಯ ವಿಸ್ತಾರ ಮತ್ತು ಕಥೆಯಲ್ಲಿ ಚರ್ಚಿತವಾಗುವಂತಹ ಧರ್ಮಸೂಕ್ಷ್ಮಗಳನ್ನು ತೆರೆದಿಡುವಂತಹ ನಾಟಕವಾಗಿದ್ದು, ಇದೊಂದು ವಿನೂತನವಾಗಿದೆ. – ಶಿವಲಿಂಗಯ್ಯ, ಬನಶಂಕರಿ ನಿವಾಸಿ
ನಾನು ಪರ್ವ ಕಾದಂಬರಿಯನ್ನು ಓದಿದ್ದೆ. ನಾಟಕ ನೋಡುವ ಕುತೂಹಲದಿಂದ ಬಂದಿದ್ದೆ. ಯಾವುದೇ ಯಾವುದೇ ಚ್ಯುತಿ ಬರದಂತೆ ಕಾದಂಬರಿಯ ಮಾಧ್ಯಮವನ್ನು ನಾಟಕದಲ್ಲಿ ಸಾಕಷ್ಟು ಅಳವಡಿಸಿಕೊಂಡಿದ್ದಾರೆ. ಮನಸ್ಸಿಗೆ ಸಮಾಧಾನಕರವಾಗಿದೆ. –ಗಿರೀಶ್ ವಿರಾಜ್ಕರ್, ಬೆಂಗಳೂರು ನಿವಾಸಿ