Advertisement

ಭೈರಲಿಂಗಯ್ಯ, ಶಿವಸ್ವಾಮಿ ನಾಮಪತ್ರ ಸಲ್ಲಿಕೆ

01:53 PM Jun 02, 2019 | Team Udayavani |

ರಾಮನಗರ: 2019-2024ರ ಅವಧಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಡಳಿಯ ಚುನಾವಣೆಗೆ ಪ್ರೌಢಶಿಕ್ಷಣ ಇಲಾಖೆ ವಿಭಾಗದಿಂದ ಹಾಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್‌.ಕೆ.ಭೈರಲಿಂಗಯ್ಯ ಶನಿವಾರ ನಾಮಪತ್ರ ಸಲ್ಲಿಸಿದರು. ಇವರೊಂದಿಗೆ ಶಿವಸ್ವಾಮಿ ಸಹ ನಾಮಪತ್ರ ಸಲ್ಲಿಸಿದರು.

Advertisement

ನಗರದ ಸ್ಫೂರ್ತಿ ಭವನದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌.ಕೆ.ಭೈರಲಿಂಗಯ್ಯ, ಪ್ರೌಢಶಿಕ್ಷಣ ಇಲಾಖೆ ವಿಭಾಗಕ್ಕೆ ಎರಡು ಸ್ಥಾನಗಳು ಮೀಸಲಿದ್ದು, ತಾವು ಮತ್ತು ಶಿವಸ್ವಾಮಿ ಕಣಕ್ಕಿಳಿದಿದ್ದೇನೆ. ನಾಮಪತ್ರ ಸಲ್ಲಿಕೆ ವೇಳೆ ತಾಲೂಕಿನ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ವೃಂದದವರು ಖುದ್ದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮಗೆ ಬೆಂಬಲ ವ್ಯಕ್ತಪಡಿಸಿರುವುದು ಸಂತಸ ತಂದಿದೆ ಎಂದರು.

ಕಳೆದ ಸಾಲಿನಲ್ಲಿ ಪ್ರೌಢಶಿಕ್ಷಣ ಇಲಾಖೆ ವಿಭಾಗದಿಂದ ಆಯ್ಕೆಯಾಗಿ, ಎಲ್ಲ ಇಲಾಖೆಗಳ ನಿರ್ದೇಶಕರ ಸಹಕಾರದಿಂದ ಸಂಘದ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿರುವ ತೃಪ್ತಿ ತಮಗಿದೆ. ಮತ್ತೂಮ್ಮೆ ತಮ್ಮನ್ನು ಆಯ್ಕೆ ಮಾಡಿ ಸಂಘಟನೆಯ ಬಲ ಹೆಚ್ಚಿ ಸಲು ಅವಕಾಶ ಮಾಡಿಕೊಡಬೇಕು. ಸಂಘಟನೆ ಯಲ್ಲಿ ಸೇವೆ ಬಹಳ ಪ್ರಮುಖವಾಗಿದೆ. ಸಂಘದ ಮುಖಾಂತರ ಸಮಾಜಮುಖೀ ಸೇವೆಯನ್ನು ಮಾಡಿರುವುದಾಗಿ, ರಾಮನಗರ ಜಿಲ್ಲಾ ಸ.ನೌ.ಸಂಘ ತಮ್ಮ ಕಾರ್ಯಕ್ರಮಗಳಿಂದಲೇ ರಾಜ್ಯ ಸಂಘದ ಗಮನ ಸೆಳೆದಿದೆ ಎಂದರು. ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಸರ್ಕಾರಿ ನೌಕರರ ಸಂಘ ಕ್ರಿಯಾ ಶೀಲವಾಗಿ ಸಂಘಟನೆಯ ಜೊತೆಗೆ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ಮಾಡಿ ರಾಜ್ಯದಲ್ಲಿ ಮಾದರಿ ಸಂಘವನ್ನಾಗಿ ಕೊಂಡೊಯ್ಯವಲ್ಲಿ ಆರ್‌.ಕೆ.ಭೈರಲಿಂಗಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದರು. ಪ್ರಸಕ್ತ ಚುನಾವಣೆಯಲ್ಲೂ ಪ್ರೌಢಶಿಕ್ಷಣ ಇಲಾಖೆ ಅವರ ಬೆಂಬಲಕ್ಕೆ ನಿಂತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next