Advertisement

ಕಡ್ಡಾಯ ಶಾಶ್ವತ ಕುಟುಂಬ ಯೋಜನೆಯಿಂದ ಭಾಗ್ಯಲಕ್ಷ್ಮೀ ರಿಲೀಫ್‌!

07:00 AM Apr 05, 2018 | |

ಸುಳ್ಯ: ಬಿಪಿಎಲ್‌ ಕುಟುಂಬಗಳ ಬಾಲೆಯರಿಗೆ ಬಹು ಪ್ರಯೋಜನಕಾರಿಯಾದ “ಭಾಗ್ಯಲಕ್ಷ್ಮೀ’ ಯೋಜನೆಯಲ್ಲಿ ಮಹತ್ವದ ಎರಡು ಬದಲಾವಣೆಗಳನ್ನು ತರಲಾಗಿದೆ. ಇದುವರೆಗೆ ಇದ್ದ, ಎರಡನೇ ಹೆಣ್ಣು ಮಗುವಿನ ನೋಂದಾವಣೆ ಸಂದರ್ಭ ದಲ್ಲಿ “ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಮಾಣ ಪತ್ರ ಕಡ್ಡಾಯ’ ಎಂಬ ಷರತ್ತನ್ನು ರದ್ದುಪಡಿಸಲಾಗಿದೆ ಹಾಗೂ ನೋಂದಣಿಯ ಅವಧಿಯನ್ನು ಮಗು ಜನಿಸಿದ ಎರಡು ವರ್ಷಗಳ ತನಕ ವಿಸ್ತರಿಸಲಾಗಿದೆ.

Advertisement

2006-07ರಲ್ಲಿ ಹೆಣ್ಣುಮಕ್ಕಳ ಪ್ರಗತಿ ಮತ್ತು ಉತ್ತೇಜನಕ್ಕಾಗಿ ಭಾಗ್ಯಲಕ್ಷ್ಮೀ ಎಂಬ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮೊದಲ ಎರಡು ಹೆಣ್ಣುಮಕ್ಕಳ ಹೆಸರಿನಲ್ಲಿ ಸರಕಾರ ಹಣ ಠೇವಣಿ ಇರಿಸಿ, ಆಕೆಗೆ 18 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಆಕೆಯ ಖಾತೆಗೆ ಬಡ್ಡಿ ಸಹಿತ ವರ್ಗಾಯಿಸುವ ಯೋಜನೆ ಇದಾಗಿದೆ. ಇದರಡಿ ನೋಂದಣಿ ಮಾಡಿಸಿಕೊಳ್ಳಲು ಜನನ ಪ್ರಮಾಣ ಪತ್ರ ಕಡ್ಡಾಯ, ಶಾಶ್ವತ ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಪ್ರಮಾಣ ಪತ್ರ ಕಡ್ಡಾಯ ಎಂಬ ಷರತ್ತುಗಳನ್ನು ವಿಧಿಸ ಲಾಗಿತ್ತು. ಕಳೆದ ಹತ್ತು ವರ್ಷದಲ್ಲಿ ರಾಜ್ಯದ ಲಕ್ಷಕ್ಕೂ ಮಿಕ್ಕಿದ ಕುಟುಂಬಗಳು ಈ ಯೋಜನೆ ಯಲ್ಲಿ ನೋಂದಣಿ ಮಾಡಿಕೊಂಡಿವೆ.

ಕಡ್ಡಾಯ ಷರತ್ತಿಗೆ ವಿನಾಯಿತಿ
ಭಾಗಲಕ್ಷ್ಮೀ ಯೋಜನೆಯ ಷರತ್ತುಗಳ ಅನ್ವಯ ಕುಟುಂಬದ ಎರಡನೇ ಹೆಣ್ಣುಮಗು ವನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆ ಪದ್ಧತಿಯನ್ನು ಅಳ ವಡಿಸಿ ಕೊಂಡಿರುವ ಬಗ್ಗೆ ಪ್ರಮಾಣಪತ್ರದ ದೃಢೀಕೃತ ಪ್ರತಿಯನ್ನು ಮಗು ಜನಿಸಿದ ಒಂದು ವರ್ಷದೊಳಗೆ ಸಲ್ಲಿಸುವುದು ಕಡ್ಡಾಯ ವಾಗಿತ್ತು.

ಆದರೆ ತಾಯಿಯ ಆರೋಗ್ಯ ಹಾಗೂ ಇನ್ನಿತರ ಸಮಸ್ಯೆ ಗಳಿಂದ ಫಲಾನು ಭವಿ ಪೋಷಕ ರಿಗೆ ಈ ದಾಖಲೆ ಯನ್ನು ಮಗುವಿಗೆ ಒಂದು ವರ್ಷ ಪೂರ್ಣ ಗೊಳ್ಳುವ ಮೊದಲೇ ನೀಡಲು ಸಮಸ್ಯೆ ಉಂಟಾಗು ತ್ತದೆ. ಇದರಿಂದಾಗಿ ಅರ್ಹ ಹೆಣ್ಣು ಮಕ್ಕಳು ಯೋಜನೆಯ ಸೌಲಭ್ಯದಿಂದ ವಂಚಿತರಾಗು ತ್ತಾರೆ ಎಂದು ಕೆಲವು ಪೋಷಕರು ಷರತ್ತು ಸಡಿಲಿಸುವಂತೆ ಆಗ್ರಹಿಸಿದ್ದರು. ಹೀಗಾಗಿ ಫೆಬ್ರವರಿಯಲ್ಲಿ ನಿಯಮ ಸರಳೀಕರಣ ಪ್ರಕ್ರಿಯೆಗೆ ಆದ್ಯತೆ ನೀಡಿ, ಶಾಶ್ವತ ಕುಟುಂಬ ಯೋಜನೆ ಶಸ್ತ್ರಕ್ರಿಯೆ ಮಾಡಿಸಿಕೊಂಡಿರುವ ಪ್ರಮಾಣ ಪತ್ರ ಕಡ್ಡಾಯ ಷರತ್ತು ಕೈಬಿಡಲಾದ ಹೊಸ ಸುತ್ತೋಲೆ ಹೊರಡಿಸಲಾಗಿತ್ತು.

ಎರಡು ವರ್ಷಗಳಿಗೆ ವಿಸ್ತರಣೆ
2016ರ ಆಗಸ್ಟ್‌ನಿಂದ 2017ರ ಮಾರ್ಚ್‌ ತನಕದ ಅವಧಿಯಲ್ಲಿ ಆಡಳಿತಾತ್ಮಕ ಸಮಸ್ಯೆ ಯಿಂದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಪಡಿತರ ಚೀಟಿ ವಿತರಣೆ ಯಲ್ಲಿನ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಲಾಗಿತ್ತು. ಇದರಿಂದ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬವಾಗಿತ್ತು. ಈ ಅವಧಿಯಲ್ಲಿ ಜನಿಸಿದ ಮಕ್ಕಳ  ಹಿತದೃಷ್ಟಿ ಯಿಂದ ನೋಂದಣಿ ಅವಧಿ
ಯನ್ನು ಸಡಿಲಿಸ ಲಾಗಿದ್ದು, ನೋಂದಣಿ ಅವಧಿ ಒಂದು ವರ್ಷದಿಂದ ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ.

Advertisement

ಬಡತನ ರೇಖೆಗಿಂತ ಕೆಳಗಿರುವ, ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ ಜನಿಸಿದ ಮೊದಲ 2 ಹೆಣ್ಣುಮಕ್ಕಳಿಗೆ ಯೋಜನೆಯ ಸೌಲಭ್ಯ ಕಲ್ಪಿಸುವುದು ಪ್ರಮುಖ ಆದ್ಯತೆ ಆಗಿದೆ. ವಿಸ್ತರಿತ ಅವಧಿಯು ಭವಿಷ್ಯದಲ್ಲಿ ಜನಿಸುವ ಮೊದಲ ಎರಡು ಹೆಣ್ಣುಮಕ್ಕಳಿಗೂ ಅನ್ವಯ ಆಗಲಿದೆ.

ಪಡಿತರ ಚೀಟಿ ವಿಳಂಬ x ವರ್ಷದೊಳಗೆ ನೋಂದಣಿ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣುಮಗುವಿಗೆ ಮಾತ್ರ ಭಾಗ್ಯಲಕ್ಷ್ಮೀ ಸೌಲಭ್ಯ ಪಡೆಯಲು ಅರ್ಹತೆ ಇದೆ. ಹಾಗಾಗಿ ನೋಂದಣಿ ಸಂದರ್ಭದಲ್ಲಿ ಹೆತ್ತವರು ಪಡಿತರ ಚೀಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿತ್ತು. ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಅರ್ಹತೆ ಇದ್ದರೂ ಸೇರ್ಪಡೆಗೆ ಅವಕಾಶ ಇರಲಿಲ್ಲ. ಆಗಸ್ಟ್‌ 2016ರಿಂದ ಮಾರ್ಚ್‌ 2017ರ ಅವಧಿಯಲ್ಲಿ ಪಡಿತರ ಚೀಟಿ ವಿತರಣೆಯ ವಿಳಂಬದಿಂದಾಗಿ ಅರ್ಜಿ ಸಲ್ಲಿಸಿದ ಹಲವು ಕುಟುಂಬಗಳಿಗೆ ಪಡಿತರ ಚೀಟಿ ದೊರೆತಿರಲಿಲ್ಲ. ವರ್ಷ ಕಳೆದರೂ ಇನ್ನೂ ಕೆಲ ಕುಟುಂಬಗಳಿಗೆ ಪಡಿತರ ಚೀಟಿ ಬಂದಿಲ್ಲ. ಈ ಅವಧಿಯಲ್ಲಿ  ಜನಿಸಿದ ಅರ್ಹ ಮಕ್ಕಳು ಪಡಿತರ ಚೀಟಿ ಇಲ್ಲದ ಕಾರಣ ಸೌಲಭ್ಯದಿಂದ ವಂಚಿತರಾಗಿದ್ದರು. ಒಂದು ವರ್ಷ ದಾಟಿದ ಮೇಲೆ ಪಡಿತರ ಚೀಟಿ ಸಿಕ್ಕರೂ ಮಗು ಹುಟ್ಟಿದ ಒಂದು ವರ್ಷದೊಳಗೆ ನೋಂದಾವಣೆ ಆಗಬೇಕು ಎಂಬ ಷರತ್ತಿನಿಂದಾಗಿ ಸೇರ್ಪಡೆ ಸಾಧ್ಯವಾಗಿರಲಿಲ್ಲ. ರಾಜ್ಯದಲ್ಲಿ ಸಾವಿರಾರು ಮಕ್ಕಳು ಪಡಿತರ ಚೀಟಿ ವಿತರಣೆಯ ವಿಳಂಬದಿಂದ ಸೌಲಭ್ಯ ವಂಚಿತರಾದ ಕಾರಣದಿಂದ ಈ ಅವಧಿಯಲ್ಲಿ ಜನಿಸಿ ಒಂದು ವರ್ಷ ಪೂರ್ಣಗೊಂಡಿರುವ ಮಕ್ಕಳಿಗೂ ಭಾಗ್ಯಲಕ್ಷ್ಮೀ ಸೌಲಭ್ಯ ದೊರೆಯಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು.

ರೈಟ್‌ ಟು ಹೆಲ್ತ್‌
ಖಾಸಗಿತನದ ಹಕ್ಕು, ಆರೋಗ್ಯ ಹಕ್ಕಿನ ಅನ್ವಯ ಶಾಶ್ವತ ಕುಟುಂಬ ಯೋಜನೆ ಪದ್ಧತಿಗೆ ಒಳ ಪಡುವುದು, ಒಳಪಡದೇ ಇರು   ವುದು ಅವ ರವರ ವೈಯಕ್ತಿಕ ನಿರ್ಧಾರ. ಅದನ್ನು ಪ್ರಶ್ನಿ ಸಲು ಸಾಧ್ಯವಿಲ್ಲ. ಇದು ಆಯಾ ವ್ಯಕ್ತಿಯ ಸಂವಿಧಾನಾತ್ಮಕ ಹಕ್ಕು. ಭಾಗ್ಯಲಕ್ಷ್ಮೀ ಯೋಜನೆ ಯಲ್ಲಿ ಎರಡನೇ ಹೆಣ್ಣು ಮಗುವಿನ ನೋಂದಣಿ ಸಂದರ್ಭದಲ್ಲಿ ಷರತ್ತು ವಿಧಿಸಿ ಅದನ್ನು ಉಲ್ಲಂಘಿ ಸಿದರೆ ಸೌಲಭ್ಯ ಹಿಂಪಡೆ ಯುವ ಹಕ್ಕು ಕಾದಿರಿಸಲಾಗಿದೆ ಎಂಬ ಬಾಂಡ್‌ ಅನ್ನು ತೆಗೆದು  ಕೊಂಡರೆ ಯೋಜನೆ ದುರುಪ ಯೋಗ ವಾಗುವುದು ತಪ್ಪಲಿದೆ, ಜನಸಂಖ್ಯೆ ನಿಯಂತ್ರಣಕ್ಕೂ ಪೂರಕವಾಗಲಿದೆ.
ಜಗದೀಶ್‌ ಕೆ. ನ್ಯಾಯವಾದಿ, ಮಂಗಳೂರು

ಅನುಕೂಲವಾಗಿದೆ
ಎರಡನೇ ಮಗು ಆದ ಒಂದು ವರ್ಷದೊಳಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಕೆಲವು ಬಾರಿ ತಾಯಿಯ ಆರೋಗ್ಯ ಅಡ್ಡಿ ಉಂಟು ಮಾಡುತ್ತದೆ. ಹಾಗಾಗಿ ಎರಡನೇ ಹೆಣ್ಣು ಮಗುವಿನ ಹಿತದೃಷ್ಟಿಯಿಂದ ಷರತ್ತು ಕೈ ಬಿಟ್ಟಿರುವುದು ಮತ್ತು ನೋಂದಣಿ ಅವಧಿ ವಿಸ್ತರಿಸಿರುವುದು ಉತ್ತಮ ಸಂಗತಿ.
– ಶಶಿಕಲಾ ಕೆ., ಸುಳ್ಯ (ಹೆಣ್ಣುಮಗುವಿನ ತಾಯಿ)

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next