Advertisement

ಶ್ರೀಕೃಷ್ಣ ಮಠದಲ್ಲಿ ಭಾಗೀರಥಿ ಜಯಂತಿ

02:23 AM Jun 13, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಬುಧವಾರ ಭಾಗೀರಥಿ ಜಯಂತಿ ಹಾಗೂ ಪ್ರಸಕ್ತ ಸಾಲಿನ ಕೊನೆಯ ಬ್ರಹ್ಮರಥೋತ್ಸವ ಸೇವೆ ನಡೆಯಿತು. ಮಧ್ವ ಸರೋವರದಲ್ಲಿನ ಭಾಗೀರಥಿ (ಗಂಗಾದೇವಿ) ಗುಡಿಯಲ್ಲಿ ಪ್ರತಿವರ್ಷ ಭಾಗೀರಥಿ ಜಯಂತಿ ಆಚರಿಸಲಾಗುತ್ತದೆ. ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಗಂಗೆಗೆ ಆರತಿಯೆತ್ತಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಗಳು ಉಪಸ್ಥಿತರಿದ್ದರು.

Advertisement

ಉತ್ಸವ ಮೂರ್ತಿ ಗರ್ಭಗುಡಿಗೆ
ಉಡುಪಿ ಕೃಷ್ಣನಿಗೆ ಮಳೆಗಾಲವನ್ನು ಹೊರತುಪಡಿಸಿ ಪ್ರತಿದಿನವೂ ರಥೋತ್ಸವ ನಡೆಯುತ್ತದೆ. ಮಳೆಗಾಲದಲ್ಲಿ ಕೃಷ್ಣನ ಉತ್ಸವ ಮೂರ್ತಿಯನ್ನು ಗರ್ಭಗುಡಿಗೆ ಸೇರಿಸ ಲಾಗುತ್ತದೆ. ಅದನ್ನು 5 ತಿಂಗಳ ಅನಂತರ ಉತ್ಥಾನ ದ್ವಾದಶಿಯಂದು ಹೊರಗೆ ತಂದು ನಿತ್ಯೋತ್ಸವ ಆರಂಭಿಸಲಾಗುತ್ತದೆ.

ವಿಶೇಷ ತೊಟ್ಟಿಲು ಸೇವೆ
ಮಧ್ವಸರೋವರದ ದಕ್ಷಿಣ ಮೂಲೆ ಯಲ್ಲಿರುವ ಭಾಗೀರಥಿ ಗುಡಿ ಯಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ ನಡೆಸಲಾ ಯಿತು. ಸಂಜೆ ರಥಬೀದಿಯಲ್ಲಿ ವರ್ಷದ ಕೊನೆಯ ಬ್ರಹ್ಮರಥೋತ್ಸವ ನಡೆಸಿ, ಕೃಷ್ಣನ ಉತ್ಸವಮೂರ್ತಿ ಭಾಗೀರಥಿ ಗುಡಿಗೆ ತಂದು ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆಗಳನ್ನು ನಡೆಸಲಾ ಯಿತು. ಮಳೆಗಾಗಿ ಪೂಜೆ, ಪ್ರಾರ್ಥನೆ ನಡೆ ಯುತ್ತಿರುವ ವೇಳೆ ಕಾಕತಾಳಿ ಯವೋ ಎಂಬಂತೆ ಹೊರಗೆ ಮಳೆ ಸುರಿದಿದೆ.

ಈ ವರ್ಷ ಮಳೆಗಾಲ ವಿಳಂಬವಾಗಿದೆ. ಇದರಿಂದಾಗಿ ನಾಡಿಗೆ ತೀವ್ರ ನೀರಿನ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗೀರಥಿ ಸನ್ನಿಧಿಯಲ್ಲಿ ಸಮೃದ್ಧ ಮಳೆ ಬೆಳೆಗಾಗಿ ಪ್ರಾರ್ಥಿಸಲಾಗಿದೆ.
 ವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ , ಪಲಿಮಾರು ಮಠ

Advertisement

Udayavani is now on Telegram. Click here to join our channel and stay updated with the latest news.

Next