Advertisement
ತಾಲೂಕಿನ ಕಾರ್ಗಲ್ ಸಮೀಪದ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರು ಬೆಡ್ ಲೆವೆಲ್ ಮಟ್ಟ ತಲುಪಿದ್ದರಿಂದ ಕೆಪಿಸಿಯಿಂದ ಬುಧವಾರ ಶರಾವತಿಗೆ ಬಾಗಿನ ಸಮರ್ಪಿಸಿ ಅವರು ಮಾತನಾಡಿ, ಶರಾವತಿ ನದಿ ಪಾತ್ರದ ಹಿನ್ನೀರಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವಿನ ಮಟ್ಟ ದಿನೇ ದಿನೇ ಏರಿಕೆಯಾಗುತ್ತಿದೆ. ಅತ್ಯಂತ ಕನಿಷ್ಠ ಮಟ್ಟವಾದ 1,749 ಅಡಿಗೆ ಇಳಿದಿದ್ದ ಜಲಾಶಯದ ನೀರಿನ ಸಂಗ್ರಹ ಈ ಬಾರಿ ಆತಂಕವನ್ನು ಸೃಷ್ಟಿಸಿತ್ತು. ಆದರೆ, 2 ಮಳೆ ಋತುಗಳು ಎಲ್ಲ ಊಹೆಗಳನ್ನು ಮೀರಿ 59 ಅಡಿಗಳಷ್ಟು ನೀರನ್ನು ಜಲಾಶಯಕ್ಕೆ ಪೂರೈಸಿವೆ ಎಂದು ಹೇಳಿದರು.
Related Articles
Advertisement
ಜಲಾಶಯ ಶೇ. 77 ರಷ್ಟು ಭರ್ತಿ ಆದ ಹಿನ್ನೆಲೆಯಲ್ಲಿ 6 ನೇ ರೇಡಿಯಲ್ ಗೇಟ್‌ನ ಮೂಲಕ ಪ್ರಾಯೋಗಿಕವಾಗಿ ಅಣೆಕಟ್ಟಿನ ನೀರನ್ನು ಅಲ್ಪ ಸಮಯ ಹೊರಹಾಯಿಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಲಿಂಗನಮಕ್ಕಿ ಗೇಟ್ಸ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ ಹೆಗಡೆ, ಜಲಾಶಯದ ಸುರಕ್ಷತೆಯಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಿರುವ 11 ರೇಡಿಯಲ್ ಗೇಟ್ ಮತ್ತು ಸ್ಲ್ಯೂಸ್ ಗೇಟ್‌ಗಳನ್ನು ಮಳೆಗಾಲದ ಆರಂಭಕ್ಕೂ 2 ತಿಂಗಳ ಮುಂಚಿತವಾಗಿ ಸುಸ್ಥಿತಿಯಲ್ಲಿಡಲಾಗಿದೆ. 2000 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನಿಂತಿರುವ ನೀರಿನ ಒತ್ತಡವನ್ನು ತಡೆದು ಜಲಸಂಗ್ರಹ ಮಾಡುವ ರೇಡಿಯಲ್ ಗೇಟ್‌ಗಳು, ಪ್ರವಾಹದ ಮುನ್ಸೂಚನೆ ದೊರೆತಾಗ ನಿಮಿಷಾರ್ಧದಲ್ಲಿ ಹೆಚ್ಚುವರಿ ನೀರನ್ನು ಹೊರಹಾಯಿಸಲು ಸಿದ್ಧಗೊಳಿಸಲಾಗಿದೆ. ಅನುಭವಿ ಉದ್ಯೋಗಿಗಳು ಮತ್ತು ಎಂಜಿನಿಯರ್‌ಗಳ ತಂಡ ದಿನದ 24 ಗಂಟೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಪಾಲಕ ಎಂಜಿನಿಯರ್ ಆರ್. ಶಿವಕುಮಾರ್, ನಿಗಮದ ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಸಿ.ಗಿರೀಶ್, ದಿನೇಶ್‌ಕುಮಾರ್, ಎಂಜಿನಿಯರ್‌ಗಳಾದ ವಾಸುದೇವ ಮೂರ್ತಿ, ಇ. ರಾಜು, ಭದ್ರತಾ ಅಧಿಕಾರಿ ಶರಣಪ್ಪ, ಸಯ್ಯದ್, ಮಲ್ಲಿಕಾರ್ಜುನಸ್ವಾಮಿ, ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳಾದ ವೀರೇಂದ್ರ, ಲಿಂಗರಾಜು, ಜೆ. ಕೇಶವೇಗೌಡ, ಕಬಾಳಯ್ಯ ಸೇರಿ ಅನೇಕ ಮುಖಂಡರು ಇದ್ದರು.