ಬಾಗ್ಧಾದ್: ಇರಾಕ್ ರಾಜಧಾನಿ ಬಾಗ್ಧಾದ್‌ನ ಕೇಂದ್ರ ಭಾಗದಲ್ಲಿ ಗುರುವಾರ ಸಂಭವಿಸಿದ ಎರಡು ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿದೆ. ಇದರಿಂದಾಗಿ 30 ಮಂದಿ ಅಸುನೀಗಿ, 110 ಮಂದಿ ಗಾಯಗೊಂಡಿದ್ದಾರೆ.
Advertisement
ಈ ಅಂಶವನ್ನು ಸರಕಾರಿ ಮಾಧ್ಯಮಗಳೇ ಖಚಿತಪಡಿಸಿವೆ. ಮೂರು ವರ್ಷಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ಬಾಂಬ್ ದಾಳಿ ಇದಾಗಿದೆ.
ತಯರಾನ್ ಸ್ಕ್ವೇರ್ ಎಂಬಲ್ಲಿರುವ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸಿದ ಬಾಂಬ್ ಧರಿಸಿದ್ದ ವ್ಯಕ್ತಿ ಜನರ ಮಧ್ಯಕ್ಕೆ ನುಗ್ಗಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಶೀಘ್ರದಲ್ಲಿಯೇ ಚುನಾವಣೆಗಳು ನಡೆಯಲಿರುವಂತೆಯೇ ಈ ಘಟನೆ ನಡೆದಿದೆ.