Advertisement
ಮುಖ್ಯ ಅತಿಥಿಯಾಗಿ ಸ್ವಚ್ಛತಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಮೂಡಿಗೆರೆ ತಾಲ್ಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ಎ. ಐ. ವೈ. ಎಫ್ ಸಂಘಟನೆ ಸ್ವಾತಂತ್ರ್ಯ ನಂತರ ಭಾರತದಲ್ಲಿ ಯುವಜನತೆಗೆ ಉದ್ಯೋಗ, ರಾಷ್ಟ್ರ ಪ್ರೇಮ,ಕ್ರೀಡೆ ಸಾಮಾಜಿಕ,ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು ಅದರಲ್ಲಿ ಉದ್ಯೋಗಕ್ಕಾಗಿ ಭಗತ್ ಸಿಂಗ್ ಎಂಪ್ಲಾಯಿಮೆಂಟ್ ಗ್ಯಾರಂಟಿ ಆಕ್ಟ್ ಜಾರಿಗೆ ತರಲು ಸತತ ಹೋರಾಟ ನಡೆಸುತ್ತಿದೆ ಇವತ್ತು ಕಾಲ್ಪನಿಕ ದೇಶ ಭಕ್ತಿ ಮೆರೆಯುತ್ತಿದೆ ಭಾರತ್ ಮಾತಾಕಿ ಜೈ ಎಂದ ತಕ್ಷಣ ಮಹಾನ್ ದೇಶ ಪ್ರೇಮಿ ಎನಿಸುತ್ತಾರೆ ಆದರೆ ಯುವಜನತೆ ಈ ರೀತಿ ತನ್ನೂರಿನ ಸಮಸ್ಯೆಗೆ ತಾವೇ ಅರಿತು ಅದನ್ನು ತಮ್ಮ ಸ್ವ ಇಚ್ಛೆಯಿಂದ ಸ್ಪಂದಿಸಿ ಬಗೆಹರಿಸಿಕೊಂಡು ಮುನ್ನಡೆದರೆ ಅದೇ ನಿಜವಾದ ದೇಶಭಕ್ತಿ ಈ ದೇಶದ ಸಾರ್ವಜನಿಕ ಆಸ್ತಿ ,ರಸ್ತೆ,ಸರ್ಕಾರಿ ಕಟ್ಟಡ,ಸೇತುವೆ,ಎಲ್ಲವನ್ನೂ ನನ್ನದು ಎಂಬ ಭಾವನೆ ಜನರಲ್ಲಿ ಬರಬೇಕು ಅದನ್ನು ಎ. ಐ. ವೈ. ಎಫ್ ಸಂಘಟನೆ ತನ್ನ ಕಾರ್ಯಕರ್ತರಿಗೆ ಕಲಿಸುತ್ತದೆ ಹಾಗಾಗಿ ನಿಮ್ಮೆಲ್ಲರ ಸಂಪತ್ತಿನ ಬಗ್ಗೆ ನಿಮ್ಮ ಕಾಳಜಿ ಮುಂದುವರೆಯಲಿ ಎಂದರು ಕಾರ್ಯಕ್ರಮದ ನೇತೃತ್ವ ವನ್ನು ಎ. ಐ. ವೈ. ಎಫ್ ನ ಕೆಳಗೂರು ಶಾಖೆಯ ಅಧ್ಯಕ್ಷ ರಾಜೇಶ್ ಕಾರ್ಯದರ್ಶಿ ಸ್ವಾತಿಕ್,ಪ್ರಜ್ವಲ್,ಉಮೇಶ್, ಸುರೇಶ್,ಸಂದೀಪ್,ವಿಜೇತ್,ಸಂತೋಷ್,ಅಮರ್ ,ಚಂದ್ರು, ಸುದೀಪ್ ಇತರರು ನೇತೃತ್ವ ವಹಿಸಿದ್ದರು Advertisement
AIYF: ಕೆಳಗೂರಿನಲ್ಲಿ ಎಐವೈಫ್ ಸಂಘಟನೆಯಿಂದ ಭಗತ್ ಸಿಂಗ್ ಸ್ಮರಣಾರ್ಥ ಸ್ವಚ್ಚತಾ ಕಾರ್ಯ
07:54 PM Oct 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.