Advertisement

ಭಾರತ ಆಧ್ಯಾತ್ಮಿಕತೆಯ ಪವಿತ್ರ ಭೂಮಿ

05:57 PM Mar 14, 2020 | Naveen |

ಭದ್ರಾವತಿ: ವಿಶ್ವದಲ್ಲಿಯೇ ಭಾರತ ಆಧ್ಯಾತ್ಮಿಕ,ಧರ್ಮ, ಸಂಸ್ಕೃತಿಯನ್ನು ಒಳಗೊಂಡ ಅತ್ಯಂತ ಪವಿತ್ರವಾದ ದೇಶ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠ ಮತ್ತು ಶ್ರೀ ಭವಾನಿ ಪೀಠದ ಶ್ರೀಗಳಾದ ಮಂಜುನಾಥ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ನಗರದ ಶ್ರೀಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ರಾಷ್ಟ್ರೀಯಹಬ್ಬಗಳ ಆಚರಣಾ ಸಮಿತಿ ಮತ್ತು ಛತ್ರಪತಿ ಶಿವಾಜಿ ಸೇವಾ ಸಂಘ ಸಂಯುಕ್ತವಾಗಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಅವರ 393ನೇ ಜಯಂತಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಈ ದೇಶದ ಮಣ್ಣಿನ ಕಣ- ಕಣದಲ್ಲಿಯೂ ಭಗವಂತನ ಸನ್ನಿಧಾನವಿದೆ. ಇಂತಹ ಪವತ್ರವಾದ ಭಾರತದಲ್ಲಿ ಜನಿಸಲು ದೇವತೆಗಳು ಸಹ ಬಯಸುತ್ತಾರೆ. ಇಂತಹ ಭಾರತಭೂಮಿ ಆದಿಗುರು ಶಂಕರಾಚಾರ್ಯ, ಮಧ್ವಾಚಾರ್ಯರೂ ಸೇರಿದಂತೆ ಅಸಂಖ್ಯಾತ ಋಷಿಮುನಿಗಳನ್ನು, ಸಾಧು- ಸಂತರನ್ನು ನೀಡಿದೆ.

ಅದೇ ರೀತಿ ಶಿವಾಜಿ ಮಹಾರಾಜರಂತಹ ಧರ್ಮನಿಷ್ಠ, ದೇಶಪ್ರೇಮಿಯನ್ನೂ ಸಹ ನೀಡಿದೆ. ಶಿವಾಜಿ ಮಹಾರಾಜರು ಕೇವಲ ಒಬ್ಬ ರಾಜನಾಗಿರದೆ ಸರ್ವಜೀವ ಜಂತುಗಳ ಹಿತವನ್ನು ರಕ್ಷಿಸುವ ಧರ್ಮನಿಷ್ಠ ರಾಜನಾಗಿದ್ದುದರಿಂದಲೇ ಇಂದಿಗೂ ಅವರ ಸ್ಮರಣೆ ಮಾಡುತ್ತೇವೆ ಎಂದರು.

ಶಿವಾಜಿ ಮಹಾರಾಜರು ಕೇವಲ ಒಂದು ಧರ್ಮ, ಜಾತಿಗೆ ಸೀಮಿತವಾಗಿ ಬದುಕಿದ ನಾಯಕರಲ್ಲ ಎಂಬುದು ಅವರ ಚರಿತ್ರೆಯನ್ನು ಓದಿದಾಗ ತಿಳಿಯುತ್ತದೆ. ಅವರ ತಂಡದಲ್ಲಿ 66 ಸಾವಿರ ಮುಸ್ಲಿಂ ಜನಾಂಗದ ಜನರೂ ಇದ್ದರು ಎಂಬುದನ್ನು ನೋಡಿದಾಗ ಅವರ ಹೃದಯ ವೈಶಾಲ್ಯತೆಯ ಅರಿವಾಗುತ್ತದೆ.

Advertisement

ಧರ್ಮಮಾರ್ಗಕ್ಕೆ ಕಂಟಕರಾಗಿ ನಡೆದುಕೊಳ್ಳುತ್ತಿದ್ದವರ ವಿರುದ್ಧವಾಗಿ ಮಾತ್ರ ಶಿವಾಜಿ ಕತ್ತಿ ಹಿಡಿದು ಹೋರಾಡಿದವರೇ ಹೊರತು ಸ್ವಾರ್ಥಕ್ಕೆ ಹೋರಾಡಿದವರಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್‌, ಜನಿಸಿದವರೆಲ್ಲರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವುದಿಲ್ಲ. ನಾಡು, ನುಡಿ, ದೇಶ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಮಹಾ ಪುರುಷರ ಜಯಂತಿಯನ್ನು ಮಾತ್ರ ನಾವು ಆಚರಿಸುತ್ತೇವೆ. ಜೀವನದಲ್ಲಿ ಅಂತಹ ಮಹಾಪುರುಷರ ಆದರ್ಶಗಳನ್ನು ರೂಢಿಸಿಕೊಂಡು ಬಾಳಿದಾಗ ಜಯಂತಿ ಆಚರಣೆ ಸಾರ್ಥಕವಾಗುತ್ತದೆ. ಶಿವಾಜಿ ಮಹಾರಾಜರ ಆದರ್ಶವನ್ನು ಯುವಪೀಳಿಗೆ ಅನುಸರಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಶಿವಾಜಿ ಮಹಾರಾಜರು ಕೇವಲ ಮರಾಠ ಜಾತಿ, ಜನಾಂಗಕ್ಕೆ ಸೇರಿದ ವ್ಯಕ್ತಿಯಲ್ಲ. ಇಡೀ ಹಿಂದೂ ಸಮಾಜಕ್ಕೆ ಪ್ರೇರಣಾಶಕ್ತಿ ಆಗಿ ಬದುಕಿದವರು. ಅವರ ಹೆಸರನ್ನು ಕೇಳಿದರೆ ಸಾಕು ಮೈ ನವಿರೇಳುತ್ತದೆ ಎಂದರು.

ತಾಲೂಕು ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಯಶವಂತರಾವ್‌ ಘೋರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಹಶೀಲ್ದಾರ್‌ ಸೋಮಶೇಖರ್‌,ಜಿಪಂ ಮಾಜಿ ಸದಸ್ಯ ಎಸ್‌. ಕುಮಾರ್‌, ಜಿಪಂ ಸದಸ್ಯರಾದ ಮಣಿಶೇಖರ್‌, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್‌, ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯಾನಾಯ್ಕ, ಸದಸ್ಯರಾದ ಪ್ರೇಂಕುಮಾರ್‌, ತಿಪ್ಪೇಶ್‌ರಾವ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸಂಪತ್‌ ಕುಮಾರ್‌, ಎಪಿಎಂಸಿ ನಿರ್ದೇಶಕ ಡಾ| ನಾಗೇಶ್‌ರಾವ್‌, ಸಂಘದ ಉಪಾಧ್ಯಕ್ಷ ಸಚಿನ್‌ ಎಸ್‌. ಸಿಂಧೆ, ವಿಶ್ವನಾಥ ರಾವ್‌ ಮತ್ತಿತರರು ಇದ್ದರು.

ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ರಂಗಪ್ಪ ವೃತ್ತದಿಂದ ಆರಂಭವಾದ ಛತ್ರಪತಿ ಶಿವಾಜಿ ಭಾವಚಿತ್ರ ಹಾಗೂ ವಿಗ್ರಹದ ಮೆರವಣಿಗೆಗೆ ಶಾಸಕ ಬಿ.ಕೆ. ಸಂಗಮೇಶ್‌ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಭದ್ರಾವತಿ: ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ನಿಮಿತ್ತ ಮೆರವಣಿಗೆ ನಡೆಯಿತು. ಜನಾಕರ್ಷಣೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next