Advertisement

ಭದ್ರಾವತಿ: ಉಚಿತ ಆ್ಯಂಬುಲೆನ್ಸ್‌ ಸೇವೆ ಕಾರ್ಯಾರಂಭ

06:31 PM Oct 20, 2021 | Team Udayavani |

ಭದ್ರಾವತಿ: ಹಳೇನಗರದ ಅನ್ವರ್‌ ಕಾಲೋನಿಯ ಉಸ್ಮಾನಿಯ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಸಾರ್ವಜನಿಕರ ಆರೋಗ್ಯ ಸೇವೆಗಾಗಿ ನೂತನ ಉಚಿತ ಆ್ಯಂಬುಲೆನ್ಸ್‌ ಕಾರ್ಯಾರಂಭಕ್ಕೆ ಮಂಗಳವಾರ ಶಾಸಕ ಬಿ.ಕೆ. ಸಂಗಮೇಶ್ವರ್‌ ಚಾಲನೆ ನೀಡಿದರು. ಟ್ರಸ್ಟ್‌ ವತಿಯಿಂದ ಹಲವಾರು ವರ್ಷಗಳಿಂದ ಉಚಿತವಾಗಿ ಕಲ್ಪಿಸಿಕೊಡಲಾಗಿದ್ದ ಆ್ಯಂಬುಲೆನ್ಸ್‌ ಹಳೆಯದಾಗಿದ್ದು, ಬಳಕೆಗೆ ಉಪಯೋಗಕ್ಕೆ ಬಾರದ ಕಾರಣ ಪುನಃ ಹೊಸ ಆ್ಯಂಬುಲೆನ್ಸ್‌ ಖರೀದಿಸಿ ಪ್ರವಾದಿ ಮಹಮ್ಮದ್‌ ಪೈಗಂಬರರ ಜನ್ಮದಿನದ ಅಂಗವಾಗಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.

Advertisement

ಧರ್ಮಗುರುಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ರಾಜ್‌ಕುಮಾರ್‌, ಉಪಾಧ್ಯಕ್ಷ ಚನ್ನಪ್ಪ, ನಗರಸಭಾ ಸದಸ್ಯ ಆರ್‌. ಶ್ರೇಯಸ್‌, ನಗರ ವೃತ್ತ ಸಿಪಿಐ ರಾಘವೇಂದ್ರ ಕಾಂಡಿಕೆ, ಟ್ರಸ್ಟ್‌ ಪದಾಧಿ ಕಾರಿಗಳಾದ ಹಬಿಬುಲ್ಲಾ ಖಾನ್‌, ಮೆಹಬೂಬ್‌ ಪಾಷ, ಜೆಬಿಟಿ ಬಾಬು, ನೂರುಲ್ಲಾ ಷರೀಫ್‌, ಮುಸ್ವೀರ್‌ ಬಾಷಾ, ಅಬ್ದುಲ್‌ ವಹೀದ್‌, ಮೊಹಮದ್‌ ಅನ್ಸರ್‌ ಪಾಷಾ, ಸೈಯದ್‌ ಸಮೀವುಲ್ಲಾ, ಎಸ್‌.ಎಂ. ಮುಜೀಬ್‌ಉಲ್ಲಾ, ನೂರ್‌ ಅಹಮದ್‌, ಮೊಹಮದ್‌ ಖಲಂದರ್‌, ಮೊಹಮದ್‌ ಜಾಕೀರ್‌, ಸೈಯದ್‌ ಅಸ್ಲಂ, ಸಿ.ಎಂ ಖಾದರ್‌, ಪ್ರಕಾಶ್‌ರಾವ್‌ ಮತ್ತಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next