Advertisement

ಬೇಡಿಕೆ ಈಡೇರಿಕೆಗೆ ಶಿಕ್ಷಕರ ಆಗ್ರಹ

04:21 PM Jul 31, 2019 | Team Udayavani |

ಭದ್ರಾವತಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘವು ತಹಶೀಲ್ದಾರ್‌ ಸೋಮಶೇಖರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಪ್ರತ್ಯೇಕ ವೇತನ ಶ್ರೇಣಿ ಇದ್ದು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿಯಿಂದ ವಂಚಿತರಾಗಿದ್ದಾರೆ. ಸುಮಾರು 15 ರಿಂದ 30 ವರ್ಷದ ಆರ್ಥಿಕ ಬಡ್ತಿ ಸೌಲಭ್ಯ ಕಲ್ಪಿಸದಿರುವುದರಿಂದ ವಂಚನೆಗೊಳ್ಳಪಡುವಂತಾಗಿದೆ. ಸರಕಾರ ಮಧ್ಯ ಪ್ರವೇಶಿಸಿ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿದರು.

ಶಾಲೆಗಳಿಗೆ ಕಂಪ್ಯೂಟರ್‌ ನೀಡುವ ಸರ್ಕಾರ ಅದರ ಬಳಕೆಗೆ ಅಗತ್ಯ ಡಾಟಾ ಅಪರೇಟರ್‌ಗಳನ್ನು ನಿಯೋಜಿಸದೆ ಶಿಕ್ಷಕರೇ ಆ ಕೆಲಸವನ್ನು ನಿರ್ವಹಿಸುವ ಪರಿಸ್ಥಿತಿ ಇದೆ. ಅದೇ ರೀತಿ ಜನಸಂಖ್ಯೆ ಗಣತಿ, ದಾಸೋಹ, ಚುನಾವಣಾ ಕಾರ್ಯ ಎಲ್ಲದಕ್ಕೂ ಶಿಕ್ಷಕರನ್ನೇ ಬಳಸಿಕೊಂಡು ಕೆಲಸ ಮಾಡಿಸುವ ಸರ್ಕಾರ ಶಿಕ್ಷಕರಿಗೆ ಒದಗಿಸಬೇಕಾದ ಸೌಲಭ್ಯಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳದಿರುವುದರಿಂದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರು ಈ ರೀಓತಿ ಮನವಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಪಂ ವ್ಯಾಪ್ತಿಗೆ ಒಳಪಡುವ ಶಾಲೆಗೊಂದು ಸೈಬರ್‌ ಕೇಂದ್ರಗಳನ್ನು ತೆರೆದು ಅದರ ನಿರ್ವಾಹಣೆಗೆ ಸಿಬ್ಬಂದಿ ನೇಮಕಗೊಳಿಸುವುದು, ಶಾಲೆಗಳಿಗೆ ‘ಡಿ’ ದರ್ಜೆ ನೌಕರರನ್ನು ನೇಮಕ ಮಾಡುವುದು. ಮುಖ್ಯೋಪಾಧ್ಯರನ್ನು ಕಾಮಗಾರಿ ಮತ್ತು ಅನ್ಯ ಕಾರ್ಯಗಳಿಂದ ಮುಕ್ತಿಗೊಳಿಸಬೇಕೆಂದು ಶಿಕ್ಷಕರು ಸಂಘ ಒತ್ತಾಯಿಸಿ ತಹಶೀಲ್ದಾರ್‌ ಸೋಮಶೇಖರ್‌ ಅವರಿಗೆ ಮನವಿ ಸಲ್ಲಿಸಿತು.

ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್‌.ಕೃಷ್ಣಪ್ಪ ನೇತೃತ್ವ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್‌.ಬಸವರಾಜ್‌, ಪ್ರಧಾನ ಕಾರ್ಯದರ್ಶಿ ರಂಗನಾಥ ಪ್ರಸಾದ್‌, ಖಜಾಂಚಿ ರಾಜಪ್ಪ, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಿ,ಜಯಪ್ಪ, ತಾಲೂಕು ಅಧ್ಯಕ್ಷ ಜುಂಜಾನಾಯ್ಕ, ಪದಾಧಿಕಾರಿಗಳಾದ ಎಸ್‌.ಉಮಾ, ಕೋಗಲೂರು ತಿಪ್ಪೇಸ್ವಾಮಿ, ಇ.ಶಿವರುದ್ರಯ್ಯ, ಕಾಮಾಕ್ಷಮ್ಮ, ಎಚ್.ಮೋಹನ್‌ ಕುಮಾರ್‌, ವಿರೂಪಾಕ್ಷಪ್ಪ ಹಿರೇಮಠ ಸೇರಿದಂತೆ 50 ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.

Advertisement

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಸೋಮಶೇಖರ್‌ ಶಿಕ್ಷಕರ ಬೇಡಿಕೆಗೆ ನೀಡಿರುವ ಮನವಿಯನ್ನು ಸಂಬಂಧಿತ ಮೇಲಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next