Advertisement

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

07:45 AM Apr 18, 2024 | Kavyashree |

ಶಿವಮೊಗ್ಗ: ರೈಲ್ವೆ ಹಳಿಗಳು ಏರುಪೇರಾಗಿ ಬೆಂಗಳೂರಿನಿಂದ ಬಂದ ಮೈಸೂರು -ಬೆಂಗಳೂರು ತಾಳಗೊಪ್ಪ ರೈಲು ಭದ್ರಾವತಿ ನಿಲ್ದಾಣದಲ್ಲಿ ನಿಂತಿದ್ದು, ಇತ್ತ ಶಿವಮೊಗ್ಗದಿಂದ – ಬೆಂಗಳೂರು ಹೊರಟಿರುವ ಜನಶತಾಬ್ದಿ ರೈಲು ಶಿವಮೊಗ್ಗದಲ್ಲೇ ನಿಂತಿರುವ ಘಟನೆ ನಡೆದಿದ್ದು, ಪ್ರಯಾಣಿಕರು ಕಂಗಾಲಾಗಿದ್ದಾರೆ.

Advertisement

ಬುಧವಾರ ರಾತ್ರಿ ಭದ್ರಾವತಿ ರೈಲ್ವೆ ಅಂಡರ್‌ಪಾಸ್‌ ಬಳಿ ದೊಡ್ಡ ವಾಹನವೊಂದು ಹೋಗುವಾಗ ರೈಲ್ವೆ ಹಳಿ ಸುರಕ್ಷತೆಗಾಗಿ ಹಾಕಿದ್ದ 4 ಮೀಟರ್‌ ಎತ್ತರದ ಬ್ಯಾರಿಕೇಡ್‌ ಅನ್ನು ಮುರಿದಿದೆ. ಡಿಕ್ಕಿ ರಭಸಕ್ಕೆ ರೈಲ್ವೆ ಹಳಿಗಳು ಒಂದು ಅಡಿಯಷ್ಟು ಏರುಪೇರಾಗಿತ್ತು.

ವಿಷಯ ತಿಳಿದ ರೈಲ್ವೆ ಇಲಾಖೆ ಸಿಬ್ಬಂದಿ ಮಧ್ಯ ರಾತ್ರಿಯಿಂದ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಮೈಸೂರು – ಬೆಂಗಳೂರು – ಶಿವಮೊಗ್ಗ ರೈಲು 4.30ಕ್ಕೆ ಭದ್ರಾವತಿ ನಿಲ್ದಾಣಕ್ಕೆ ಬಂದಿದ್ದು ಅಲ್ಲೇ ನಿಂತಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ರೈಲು ಶಿವಮೊಗ್ಗ ನಿಲ್ದಾಣದಲ್ಲೇ ಇದೆ.

ವಾಹನವೊಂದರ ಎಡವಟ್ಟಿನಿಂದ ಸಾವಿರಾರು ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಹಿಡಿಶಾಪ ಹಾಕುತ್ತಿದ್ದಾರೆ.

ಬೆಂಗಳೂರಿನಿಂದ ಬಂದ ತಾಳಗೊಪ್ಪ ರೈಲು 7 ಗಂಟೆಗೆ ಶಿವಮೊಗ್ಗಕ್ಕೆ ತಲುಪಿದೆ‌ . ಬೆಂಗಳೂರು ಹೊರಟಿರುವ ಜನಶತಾಬ್ದಿ 7.05 ಕ್ಕೆ ಬೆಂಗಳೂರಿಗೆ ಹೊರಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next