Advertisement

ಮಠಗಳು ಬಿಸಿನೆಸ್‌ ಸೆಂಟರ್‌ಗಳಾಗದಿರಲಿ

04:32 PM Jul 17, 2019 | Naveen |

ಭದ್ರಾವತಿ: ಮನುಷ್ಯನು ಅಧಿಕಾರ, ಹಣ, ಆಸ್ತಿಯಿಂದ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಧರ್ಮ ಸೇವೆ ಮಾಡುವುದರಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಹುಬ್ಬಳ್ಳಿ ಮೂರು ಸಾವಿರ ಮಹಾಸಂಸ್ಥಾನ ಮಠದ ಪ|ಪೂ| ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ಹೇಳಿದರು.

Advertisement

ಗೋಣಿಬೀಡು ಶೀಲಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಶನ್‌ ಆಯೋಜಿಸಿದ್ದ 3 ದಿನಗಳ ಅನುಭಾವ ಸಾಹಿತ್ಯ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಏಕಾಗ್ರತೆ ಮತ್ತು ಶ್ರದ್ಧೆ ಮನುಷ್ಯನ ಭವಿಷ್ಯತ್ತಿನ ಆವಿಷ್ಕಾರ ಮಾಡುತ್ತದೆ. ಶೀಲಸಂಪಾದನಾ ಮಠಕ್ಕೆ ತಪಸ್ಸು ಮಾಡುವ ಶ್ರೀಗಳು ಸಿಕ್ಕಿರುವುದು ಇಲ್ಲಿನ ಜನರ ಭಾಗ್ಯ ಎಂದರು. ಮಠಗಳು ಯಾವಾಗಲೂ ಬಿಸಿನೆಸ್‌ ಸೆಂಟರ್‌ಗಳಾಗಬಾರದು. ಸ್ಪಿರಿಚುಯಲ್ ಸೆಂಟರ್‌ಗಳಾಗಬೇಕು. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸೇರಿದಂತೆ ರಿಯಲ್ ಎಸ್ಟೇಟ್ ದಂಧೆಗಳೂ ಕೂಡ ಕೆಲವು ಮಠಗಳಿಂದ ನಡೆಯುತ್ತಿದೆ. ನಿತ್ಯ ಧ್ಯಾನ ಧಾರ್ಮಿಕ ಕಾರ್ಯಗಳು ನಡೆಯುವಂತಾಗಬೇಕು. ಏಕಾಗ್ರತೆಯ ಸಂಕೇತವಾಗಿರುವ ತಪಸ್ಸು ನಮ್ಮ ಮನಸ್ಸು, ದೇಹದ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಮಾಡುತ್ತದೆ. ಇಂದು ಯಾವ ಸ್ವಾಮಿಗಳೂ ಕೂಡ ತಪ್ಪಸ್ಸು ಮಾಡಲು ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು.

ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ ವಸತಿಗಳನ್ನು ಕಲ್ಪಿಸಿಕೊಡುವ ಮೂಲಕ ಸರ್ಕಾರ ಮಾಡುವ ಕೆಲಸಗಳನ್ನು ಮಠಗಳು ಮಾಡುತ್ತಿವೆ. ಜಗತ್ತಿನ ಸಮಸ್ಯೆಗಳನ್ನು ಗೆಲ್ಲಲು ಧ್ಯಾನಕ್ಕಿಂತ ದೊಡ್ಡ ಅಸ್ತ್ರ ಮತ್ತೂಂದಿಲ್ಲ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಡಾ| ಸೋಮಶೇಖರ್‌ ಮಾತನಾಡಿ, ಬಸವಣ್ಣನವರು ಕೊಟ್ಟಂತಹ ವಚನಗಳು ನಮ್ಮ ಬದುಕಿಗೆ ನೀಡಿದ ಸಂವಿಧಾನವಾಗಿದ್ದು ಈ ಸಂವಿಧಾನವನ್ನು ತಿದ್ದುಪಡಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Advertisement

ಶಿಕಾರಿಪುರ ಶಿವಯೋಗಾಶ್ರಮದ ರೇವಣಸಿದ್ದಮಹಾಸ್ವಾಮಿ, ಕೆ. ಬಿದರೆ ದೊಡ್ಡಮಠದ ಪ್ರಭುಕುಮಾರಸ್ವಾಮಿ, ಗೋಣಿಬೀಡು ಶೀಲಸಂಪಾದನಾ ಮಠದ ಸಿದ್ದಲಿಂಗಸ್ವಾಮಿ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್‌, ನಿವೃತ್ತ ಐಎಎಸ್‌ ಅಧಿಕಾರಿ ದಯಾಶಂಕರ್‌, ಸಿದ್ದಲಿಂಗಯ್ಯ, ಡಾ| ಹಿರೇಮs್, ಧರ್ಮಪ್ರಸಾದ್‌, ವೇ| ವಿಘ್ನೕಶ್ವರಯ್ಯ, ನಾಗೇಶ್‌ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next