Advertisement

ಭದ್ರಾವತಿ: ದುಷ್ಕರ್ಮಿಗಳಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ

10:54 AM Sep 10, 2019 | Team Udayavani |

ಭದ್ರಾವತಿ : ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಯುವಕರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಭದ್ರಾವತಿಯ ಭದ್ರಾ ಕಾಲೋನಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

Advertisement

ಭದ್ರಾ ಕಾಲೋನಿ ನಿವಾಸಿಗಳಾದ ಮಣಿ ಹಾಗೂ ವಿದ್ಯಾರಾಜ್ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕರು.

ಇಬ್ಬರ ಸ್ಥಿತಿಯು ಗಂಭೀರವಾಗಿದ್ದು ಇಬ್ಬರನ್ನೂ ಶಿವಮೊಗ್ಗದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಹಲ್ಲೆ ಯಾವ ವಿಚಾರಕ್ಕೆ ನಡೆಸಲಾಗಿದೆ, ಹಲ್ಲೆ ನಡೆಸಿದವರು ಯಾರು ಎಂದು ತಿಳಿದುಬಂದಿಲ್ಲ.

ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next