Advertisement

ಗುತ್ತಿಗೆ ಕಾರ್ಮಿಕರನ್ನು ಹೊರ ಹಾಕಿದಕ್ಕೆ ಖಂಡನೆ

01:00 PM Oct 25, 2019 | Team Udayavani |

ಭದ್ರಾವತಿ: ವಿಐಎಸ್‌ಎಲ್‌ ಕಾರ್ಖಾನೆಯ 105 ಜನ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ಹೊರ ಹಾಕಿರುವುದನ್ನು ಖಂಡಿಸಿ ಕಾರ್ಖಾನೆ ಮುಖ್ಯದ್ವಾರದ ಮುಂಭಾಗ ವಿಐಎಸ್‌ಎಲ್‌ ಗುತ್ತಿಗೆ ಕಾರ್ಮಿಕ ಸಂಘದವರು ಕಾರ್ಖಾನೆಯ ಕಾರ್ಮಿಕರ ಸಂಘದ ಬೆಂಬಲದೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಎಫ್‌ಎಸ್‌ ಹಾಗೂ ಎಚ್‌ಟಿಎಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 105 ಗುತ್ತಿಗೆ ಕಾರ್ಮಿಕರಿಗೆ ಕಳೆದ 6 ತಿಂಗಳಿನಿಂದ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ವಿಐಎಸ್‌ಎಲ್‌ ಆಡಳಿತ ಮಂಡಳಿ ಪುಣೆ ಮೂಲದ ಪ್ರಗತಿ ಮೆಟಲ್ಸ್‌ ಅವರಿಗೆ ಜಾಬ್‌ ನೀಡಿದ್ದ ಟೆಂಡರ್‌ ಅವ ಧಿ ಮುಗಿದಿದ್ದರೂ ಸಹ ಅವರ ಟೆಂಡರ್‌ ನವೀಕರಣ ಮಾಡದೆ ಗುತ್ತಿಗೆ ಕಾರ್ಮಿಕರಿಗೆ 13 ದಿನಗಳ ಕೆಲಸವನ್ನೂ ನೀಡದೆ ಇರುವುದರಿಂದ 105 ಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ 105 ಗುತ್ತಿಗೆ ಕಾರ್ಮಿಕರಿಗೆ ಎಫ್‌ಎಸ್‌ ಹಾಗೂ ಎಚ್‌ ಟಿಎಸ್‌ ವಿಭಾಗದಲ್ಲಿ ಕೆಲಸ ಕೆಲಸ ನೀಡುವವರೆಗೂ ಕಾರ್ಖಾನೆಯ ಎಲ್ಲಾ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗದೆ ಕಾರ್ಖಾನೆ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾನಿರತರು ಹೇಳಿದರು.

ಎಫ್‌ಎಸ್‌ ಹಾಗೂ ಎಚ್‌ಟಿಎಸ್‌ ಗುತ್ತಿಗೆ ಕಾರ್ಮಿಕರಿಗೆ ಕೂಡಲೇ ಕೆಲಸ ನೀಡಬೇಕು. ಕಾರ್ಖಾನೆಯ ಎಲ್ಲಾ ಇಲಾಖೆಗಳ ಅವಧಿ ಮುಗಿಯುವ ಮುನ್ನವೇ ಗುತ್ತಿಗೆ ಪದ್ಧತಿ ಪ್ರಕ್ರಿಯೆ ಆರಂಭಿಸಬೇಕು. ಮುಷ್ಕರ ನಡೆಸುವ ದಿನಗಳ ಕೆಲಸವನ್ನು ಮುಂದಿನ ತಿಂಗಳುಗಳಲ್ಲಿ ಒದಗಿಸಿ ಇಎಸ್‌ಐ ಹಾಗೂ ಹಾಜರಾತಿಗೆ ತೊಂದರೆಯಾಗದಂತೆ ಆಡಳತ ಮಂಡಳಿ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್‌, ವಿಐಎಸ್‌ಎಲ್‌ ಹಾಗೂ ಸೈಲ್‌ ಆಡಳಿತ ಮಂಡಳಿ ಕಳೆದ 3 ವರ್ಷಗಳಿಂದಲೂ ಉತ್ಪಾದನೆ ಇಲ್ಲ ಎನ್ನುವ ನೆಪದಲ್ಲಿ ಅನ್ಯಾಯ ಮಾಡುತ್ತಾ ಬಂದಿದೆ. ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಆಡಳಿತ ಮಂಡಳಿ ಎಫ್‌ಎಸ್‌ ಹಾಗೂ ಎಚ್‌ಟಿಎಸ್‌ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವುದು ಖಂಡನೀಯ. ನಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರ ನಿರಂತರವಾಗಿ ನಡೆಯುತ್ತದೆ ಎಂದರು.

ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿದ ಕಾಯಂ ನೌಕರರ ಸಂಘದ ಅಧ್ಯಕ್ಷ ಜೆ. ಜಗದೀಶ್‌ ಮಾತನಾಡಿ, ಯಾವುದೇ ಕಾರ್ಮಿಕರಿಗಾಗುವ ಅನ್ಯಾಯ ಎಲ್ಲಾ ವರ್ಗದ ಕಾರ್ಮಿಕರಿಗೂ ಅನ್ವಯಿಸುತ್ತದೆ. ಈಗ ಕಾರ್ಮಿಕ ಸಂಘಟನೆಗಳು ಬಲಗೊಂಡಿವೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದು ಎಂದರು.

Advertisement

ಪ್ರತಿಭಟನೆಯಲ್ಲಿ ಕಾಯಂ ಕಾರ್ಮಿಕರ ಸಂಘ ಹಾಗೂ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾ ಧಿಕಾರಿಗಳು ಹಾಗೂ ಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next