Advertisement

4 ದಶಕಗಳ ಬಳಿಕ ಕೋಡಿ ಬಿದ್ದ ಭದ್ರನ ಕೆರೆ

03:35 PM Oct 16, 2022 | Team Udayavani |

ಶಿಡ್ಲಘಟ್ಟ: ರಾಜ್ಯದ ಎಲ್ಲ ಗ್ರಾಮಗಳ ಪ್ರತಿ ಮನೆಮನೆಗೂ ಶುದ್ಧ ಕುಡಿವ ನೀರನ್ನು ನಲ್ಲಿಗಳ ಮೂಲಕ ಹರಿಸಲು ಸರಕಾರವು ಬದ್ಧವಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.

Advertisement

ತಾಲೂಕಿನಲ್ಲೇ ಅತಿ ವಿಸ್ತಾರವಾದ ಜಂಗಮ ಕೋಟೆ ಹೋಬಳಿ ಜೆ.ವೆಂಕಟಾಪುರ- ಹೊಸ ಪೇಟೆ ಬಳಿಯ ಭದ್ರನಕೆರೆ ಕೋಡಿ ಹಿನ್ನೆಲೆ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿ, ಜಲ ಜೀವನ್‌ ಮಿಷನ್‌ ಮತ್ತು ಅಟಲ್‌ ಭೂ ಜಲ ಯೋಜನೆಯಡಿ ಅನುದಾನವನ್ನು ಹಂತ- ಹಂತವಾಗಿ ಬಿಡುಗಡೆ ಮಾಡುತ್ತಿದೆ ಎಂದರು.

2100 ಎಕರೆಯಷ್ಟು ವಿಸ್ತೀರ್ಣವಾಗಿರುವ,15 ಗ್ರಾಮಗಳ ಅಚ್ಚುಕಟ್ಟನ್ನು ಹೊಂದಿರುವತಾಲೂಕಿನಲ್ಲಿಯೆ ಅತಿ ದೊಡ್ಡದಾದ ಭದ್ರನ ಕೆರೆ 43 ವರ್ಷಗಳ ನಂತರ ಕೋಡಿ ಹರಿದಿದ್ದು ಶಿಡ್ಲಘಟ್ಟ ತಾಲೂಕು ಆಡಳಿತ, ಹೊಸಪೇಟೆ, ಜೆ.ವೆಂಕಟಾಪುರ ಗ್ರಾಪಂ ಹಾಗೂ ಹಸಿರು ಸೇನೆ ರೈತ ಸಂಘದಿಂದ ಬಾಗಿನ ಅರ್ಪಿಸಿದರು.

ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ಮಾಜಿ ಶಾಸಕ ಎಂ.ರಾಜಣ್ಣ, ಕೆಎಂಎಫ್‌ ನಿರ್ದೇಶಕ ಆರ್‌.ಶ್ರೀನಿವಾಸ್‌, ಹೊಸಪೇಟೆ ಗ್ರಾಪಂ ಅಧ್ಯಕ್ಷ ಎಚ್. ಎಂ. ಮಂಜುನಾಥ್‌ ಗೌಡ ಜಂಗಮಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಎಂ.ಮುನಿಯಪ್ಪ, ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್‌,ಗುಡಿಹಳ್ಳಿ ಕೆಂಪಣ್ಣ,ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಭಕ್ತರಹಳ್ಳಿ ಮಧು,ಸುಗಟೂರು ದೇವರಾಜ್‌, ಜೆ.ವೆಂಕಟಾಪುರ ಪರಮೇಶ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next