Advertisement
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡಬೇಕು. ಇದರಿಂದ ಮಧ್ಯಕರ್ನಾಟಕದ ಸುಮಾರು 2.25 ಲಕ್ಷ ಹೆಕ್ಟೇರ್ ಪ್ರದೇಶವನ್ನು ಹನಿ ನೀರಾವರಿಗೆ ಒಳಪಡಿಸಬಹುದು. ಅಂತರ್ಜಲ ಹೆಚ್ಚಳ ಸೇರಿದಂತೆ ಅನೇಕ ಉಪಯೋಗಗಳು ಈ ಯೋಜನೆಯಿಂದ ಆಗುತ್ತದೆ ಎಂಬ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಕುಡಿಯುವ ನೀರನ್ನು ಒದಗಿಸಬಹುದು. ಈ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ಸೂಚಿಸಿದೆ. ಪರಿಸರ ಇಲಾಖೆಯ ಅನುಮತಿ ಬಾಕಿಯಿದ್ದು, ಅನುಮತಿ ಕೊಡಿಸಿ. ಪ್ರಸ್ತಾವಿತ ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ ನೀರು ಹಂಚಿಕೆಯಾಗಬೇಕು. 147.932 ಟಿಎಂಸಿ ನೀರಿನಲ್ಲಿ ಕರ್ನಾಟಕಕ್ಕೆ 15.89 ಟಿಎಂಸಿ ನೀರು ಎಂದು ಅಂದಾಜಿಸಲಾಗಿದೆ. ಈ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿದ್ದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕಾವೇರಿ ವಿವಾದ ತಪ್ಪಿಸಲು 4.75 ಟಿಎಂಸಿ ನೀರು, ಸುಮಾರು 400 ಮೆ.ವಾ. ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಅನುಮತಿ ನೀಡಬೇಕು. ಕೇಂದ್ರ ಜಲ ಆಯೋಗವು (ಸಿಡಬುÉಸಿ) 2024ರ ಫೆ. 1ರಂದು ಕೇಂದ್ರ ಜಲ ನಿರ್ವಹಣಾ ಆಯೋಗಕ್ಕೆ (ಸಿಡಬುÉಎಂಎ) ಮೇಕೆದಾಟು ವಿಚಾರವಾಗಿ ಸಾಧಕ-ಬಾಧಕಗಳ ಪಟ್ಟಿ ಮಾಡಿ ಎಂದೂ ಸೂಚಿಸಿತ್ತು. ಇದರಿಂದ ತಮಿಳುನಾಡಿಗೆ ತೊಂದರೆ ಇಲ್ಲವೆಂಬುದನ್ನು ಹೇಳಿದ್ದೇವೆಂದು ಡಿಕೆಶಿ ಹೇಳಿದರು.
Related Articles
ಕೃಷ್ಣ ನದಿ ನೀರಿನ ವಿವಾದದ ವಿಚಾರದಲ್ಲಿ 2ನೇ ನ್ಯಾಯಾಧೀಕರಣ ಕರ್ನಾಟಕಕ್ಕೆ 173 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಇದರಲ್ಲಿ 130 ಟಿಎಂಸಿ ನೀರು 3ನೇ ಹಂತಕ್ಕೆ ಹಂಚಿಕೆ ಮಾಡಲಾಗಿದೆ. ನಮ್ಮ ಪಾಲಿನ ನೀರಿನ ಬಳಕೆಗೆ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬೇಕು ಇದಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾಗಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
Advertisement