ಶಿವಮೊಗ್ಗ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯವು ಪೂರ್ಣ ಮಟ್ಟ ತಲುಪಿದ್ದು ಸೋಮವಾರ ಮಧ್ಯಾಹ್ನ ಹೆಚ್ಚುವರಿ ನೀರನ್ನು ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ ಹೊರಬಿಡಲಾಯಿತು.
186 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಸೋಮವಾರ ಬೆಳಗ್ಗೆ 185.7 ಅಡಿ ನೀರಿತ್ತು. ಚಿಕ್ಕಮಗಳೂರು ಭಾಗದಲ್ಲಿ ಮಳೆ ಮುಂದುವರೆದಿರುವುದರಿಂದ ಒಳಹರಿವು 8653 ಕ್ಯೂಸೆಕ್ಸ್ ಇದ್ದು ಕ್ರಸ್ಟ್ ಗೇಟ್ ಮೂಲಕ 1750 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಯಿತು.
ಭಾನುವಾರ ರಾತ್ರಿಯಿಂದಲೇ 1200 ಕ್ಯೂಸೆಕ್ಸ್ ನೀರನ್ನು ಜಲ ವಿದ್ಯುತ್‌ಗಾರದಿಂದ ಬಿಡಲಾಗುತ್ತಿದೆ. ಇದಲ್ಲದೇ ಎಡದಂಡೆ ನಾಲೆಗೆ 100 ಕ್ಯೂಸೆಕ್ಸ್, ಬಲದಂಡೆ ನಾಲೆಗೆ 917 ಕ್ಯೂಸೆಕ್ಸ್, ಅಪ್ಪರ್ ಭದ್ರಾ ಕಾಲುವೆಗೆ 700 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಗರಿಷ್ಠ 71.535 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸ್ತುತ 71.012 ಟಿಎಂಸಿ ನೀರಿದೆ.
ಇದನ್ನೂ ಓದಿ: ಜಲಪಾತ ವೀಕ್ಷಣೆಗೆ ಹೊರಟಿದ್ದ ದಂಪತಿ ಅಪಘಾತದಲ್ಲಿ ಸಾವು