ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು ಅದರಂತೆ ಜಲಾಶಯ ಬಹುತೇಕ ಭರ್ತಿಯಾದ ಕಾರಣ ಕ್ರಸ್ಟ್ ಗೇಟ್ ಮೂಲಕ ಭದ್ರಾ ನದಿಗೆ ನೀರು ಬಿಡಲಾಯಿತು.
ಜಲಾಶಯ ಬಹುತೇಕ ಭರ್ತಿ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ನಾಲ್ಕು ಗೇಟ್ ಗಳ ಮೂಲಕ ಅಧಿಕಾರಿಗಳು ಭದ್ರಾ ನದಿಗೆ ನೀರನ್ನು ಬಿಡಲಾಯಿತು. 10 ರಿಂದ 12 ಕ್ಯೂಸೆಕ್ ನೀರು ಬಿಡುಗಡೆ.
ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು, ಒಳ ಹರಿವಿನ ಪ್ರಮಾಣ ಸಾವಿರ ಕ್ಯೂಸೆಕ್ 20 ಸಾವಿರ, 10 ರಿಂದ 12 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುವುದು ಎಂದ ಜಲಾಶಯದ ಅಧಿಕಾರಿಗಳು ಹೇಳಿದ್ದರು. ಭದ್ರಾ ನದಿ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಳಿದ್ದ ಅಧಿಕಾರಿಗಳು.
ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ಕಳೆದ ವಾರವೇ ನಿಷೇಧ ಮಾಡಲಾಗಿತ್ತು.