ಭದ್ರಾವತಿ: ಸೇವೆ ಎಂದರೆ ಸದ್ದಿಲ್ಲದೆ ಮಾಡುವ ಕೆಲಸವೆಂದು ತಿಳಿದು ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ಟಿ.ಎಚ್. ತೀರ್ಥಪ್ಪ ಹೇಳಿದರು.
ಶನಿವಾರ ಸಂಜೆ ನ್ಯೂಟೌನ್ ರೋಟರಿ ಕ್ಲಬ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದವಿ ಹಸ್ತಾಂತರ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಪದವಿ ಸ್ವೀಕರಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸಾಮಾಜಿಕ ಸೇವೆ ಸಲ್ಲಿಸಲು ದೊರಕುವ ಅವಕಾಶವನ್ನು ಕೊನೆಯ ಅವಕಾಶವೆಂದು ಭಾವಿಸಿ ಗರಿಷ್ಠ ಪ್ರಮಾಣದಲ್ಲಿ ಸಾಮಾಜಿಕ ಸೇವೆ ನಿರ್ವಹಿಸುವ ಮೂಲಕ ತಂದೆ, ತಾಯಿ ಹಾಗೂ ಸಮಾಜ ಮೆಚ್ಚುವ ರೀತಿ ಬದುಕಬೇಕು. ನಾವು ಮಾಡಿದ ಸೇವಾಕಾರ್ಯವನ್ನು ಮೆಚ್ಚಿ ನಾವು ಸತ್ತಾಗ ಸ್ಮಶಾನವೂ ಸಹ ನಮ್ಮ ಅಗಲಿಕೆಗೆ ಕಣ್ಣೀರು ಸುರಿಸುವಷ್ಟರ ಮಟ್ಟಿಗೆ ನಾವು ಬದುಕಿನಲ್ಲಿ ಕಾರ್ಯ ನಿರ್ವಹಿಸಿರಬೇಕು ಎಂದರು.
ನಿಕಟಪೂರ್ವ ರೋಟರಿ ಅಧ್ಯಕ್ಷ ಡಿ.ಕೆ.ರಾಘವೇಂದ್ರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಆದರ್ಶ ಕಳೆದ ಸಾಲಿನಲ್ಲಿ ಸಂಸ್ಥೆ ಕೈಗೊಂಡ ಕಾರ್ಯಗಳನ್ನು ವಾಚಿಸಿದರು. ರೊ| ಕೆ.ನಾಗರಾಜ್, ಕೆ.ಎಸ್. ಶೈಲೇಂದ್ರ, ಟಿ.ಎಸ್. ದುಶ್ಯಂತರಾಜ್, ಲತಾ ದುಶ್ಯಂತರಾಜ್ ಅತಿಥಿ ತಿಗಣ್ಯರ ಪರಿಚಯವನ್ನು ವಾಚಿಸಿದರು.
ರೋಟರಿ ಜಿಲ್ಲಾ ಗವರ್ನರ್ ರಾಮಚಂದ್ರಮೂರ್ತಿ ರೋಟರಿ ಕ್ಲಬ್ ಭದ್ರವತಿ ಶಾಖೆಯ ನೂತನ ಅಧ್ಯಕ್ಷರಾದ ತೀರ್ಥಯ್ಯ ಅವರಿಗೆ ಅಧ್ಯಕ್ಷ ಪದವಿ ಹಸ್ತಾಂತರ ಮಾಡಿದರು. ಕಾರ್ಯದರ್ಶಿಯಾಗಿ ಎಸ್. ಅಡವೀಶಯ್ಯ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಸಹಾಯಕ ಗವರ್ನರ್ ಎಂ. ಮುರಳಿ, ರೋಟರಿ ಕನೆಕ್ಟ್ ದ ವರ್ಲ್ಡ್ ಲೋಗೋ ಲಾಂಚನ ಪತಾಕೆಯನ್ನು ಬಿಡುಗಡೆ ಮಾಡಿದರು. ರೋಟರಿ ಜಿಲ್ಲಾ ಗವರ್ನರ್ ರಾಮಚಂದ್ರಮೂರ್ತಿ, ಜಿಲ್ಲಾ ಸಹಾಯಕ ಗವರ್ನರ್ ಎಂ. ಮುರಳಿ, ರೋಟರಿ ಜೋನಲ್ ಅಧಿಕಾರಿ ಶಿವಶಂಕರ್, ಆನ್ಸ್ ಕ್ಲಬ್ ಅಧ್ಯಕ್ಷರಾದ ಕುಸುಮಾ ತೀರ್ಥಯ್ಯ, ಕಾರ್ಯದರ್ಶಿಗಳಾದ ಲತಾ ದುಶ್ಯಂತರಾಜ್, ಜಾಹ್ನವಿ ವಾದಿರಾಜ್, ಮತ್ತಿತರರು ಇದ್ದರು. ರೊ| ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶುಭ, ಕು| ಶ್ರೇಯ ಪ್ರಾರ್ಥಿಸಿದರು.