Advertisement

ಆ ಐವತ್ತು ಜನ ಫೀಲ್ಡರ್ಸ್‌ ನಡುವೆ…

09:52 AM Dec 04, 2019 | Team Udayavani |

ಕ್ರಿಕೆಟ್‌. ನಾನು ಚಿಕ್ಕ ವಯಸ್ಸಿನಿಂದಲೂ ಮರೆಯದ ಆಟ ಎಂದರೆ ಇದೇ. ಜೀವನದಲ್ಲಿ ಕ್ರಿಕೆಟರ್‌ ಆಗಬೇಕು ಅನ್ನೋ ಹುಚ್ಚೇನೂ ಇರಲಿಲ್ಲ. ಆದರೆ, ಸಹಜವಾಗಿ ಎಲ್ಲರಿಗೂ ಇರುವಂತೆ ಆಡುವ ಆಸೆ ನನ್ನಲ್ಲೂ ಇತ್ತು.ಯಾವುದೇ ಹಬ್ಬ ಬರಲಿ, ಗೆಳೆಯರೆಲ್ಲ ಒಂದಾಗುತ್ತಿದ್ದೆವು. ಇದಕ್ಕೂ ಕಾರಣ ಕ್ರಿಕೆಟ್ಟೇ ! ನಮ್ಮ ಆಸಕ್ತಿ ನೋಡಿಯೋ ಏನೋ, ಆಗಾಗ ಊರಲ್ಲಿ ಪಂದ್ಯಗಳನ್ನುಏರ್ಪಡಿಸುತ್ತಿದ್ದರು.

Advertisement

ನಮ್ಮ ಟೀಮ್‌ ಹೆಸರು ಉರಗ ಬಾಯ್ಸ್ ಇದ್ರಲ್ಲಿ ಎಲ್ಲಾರೂ ಸೀದಾಸಾದಾ ಕ್ರಿಕೆಟ್‌ಆಟಗಾರರೇ. ನಮ್ಮ ಜೊತೆ ಹಿರಿಯ ಆಟಗಾರರೂ ಕೂಡಸೇರುತ್ತಿದ್ದರು. ಅವರೆಲ್ಲ ಚೆಂಡು ಹಿಡಿದು ಲಗೋರಿ ಆಡಿದವರು. ಆದರೂ, ಕ್ರಿಕೆಟ್‌ ಮೇಲೆ ಆಸಕ್ತಿ ಬಹಳನೇ ಇತ್ತು. ಮೊನ್ನೆ ದೀಪಾವಳಿ ದಿವಸ ಕ್ರಿಕೆಟ್‌ ಆಡೋಣ ಅಂತ ನಮ್ಮ ಉರಗನಹಳ್ಳಿ ಯುವಕರು ತೀರ್ಮಾನಿಸಿದರು. ಹಬ್ಬ ಎಂದರೆ ಗೆಳೆಯರು ಒಂಥರಾ ಫ್ರೀ ಬರ್ಡ್ಸ್‌ ಇದ್ದಂಗೆ. ಹಬ್ಬ ಇದ್ದುದರಿಂದ ಐಪಿಎಲ್‌ ಮ್ಯಾಚ್‌ ಥರ ಪಂದ್ಯಾವಳಿಗೆ ರೆಡಿಯಾಗಿದ್ದವು.

ನಮ್ಮ ಕ್ರಿಕೆಟ್‌ ಉತ್ಸಾಹ ಪುಟಿಯಲು ಇದಕ್ಕಿಂತ ಬೇರೆ ಕಾರಣ ಬೇಕೆ? ಅಂದು ಊರಿನ ಯುವಕರು ಮಾತ್ರ ಅಲ್ಲ. ಊರು ಬಿಟ್ಟು ಬೆಂಗಳೂರಿಗೆ ಹೋಗಿರುವವರೆಲ್ಲ ಹಬ್ಬದ ನೆಪದಲ್ಲಿ ಬಂದಿದ್ದರು. ಎಲ್ಲರೂ ನಮ್ಮ ಮಾಮೂಲಿ ಶಾಲಾ ಆವರಣದಲ್ಲಿ ಸೇರಿದೆವು. ಮೊದಲು ಇದ್ದ 16 ಜನರಲ್ಲೇ ಎರಡು ಟೀಮ್‌ ಮಾಡಿಕೊಂಡು ಆಟ ಶುರುಮಾಡಿದೆವು. 8 ಒವರ್‌ಗಳ ಮ್ಯಾಚ್‌ನಲ್ಲಿ ಎಲ್ಲರಿಗೂ ಬೌಲಿಂಗ್‌, ಬ್ಯಾಟಿಂಗ್‌ ಸಿಗುತ್ತಿತ್ತು. ಆದರೆ, ಸಮಯ ಕಳೆಯುತ್ತಾಕಳೆಯುತ್ತಾ.. ಈ ಹಿರಿಯ ಆಟಗಾರರು ಜಾಸ್ತಿಯಾದರು. ನಾವು ನಮ್ಮ ಪಾಡಿಗೆ ಆಡುತ್ತಿದ್ದಾಗ.. ನಾವೂ ಬರ್ತೀವಿನಾವು ಬರ್ತೀವಿಅಂತಾ ನಮ್ಮ ಲಗೋರಿ ಸೀನಿಯರ್‌ಗಳು ಫೀಲ್ಡ್ ಗೆ ಇಳಿದೇ ಬಿಟ್ಟರು.

ಎಷ್ಟೇ ಆದರೂ, ಸೀನಿಯರ್‌ಗಳು. ಅವರನ್ನು ಹರ್ಟ್‌ ಮಾಡಬಾರದು ಅಂತ ಆಡೋಕೆ ಕರೆದುಕೊಂಡೆವು ನಾನು ಟೀಮ್‌ ಕ್ಯಾಪ್ಟನ್‌ ಆಗಿದ್ದೆ. ಗೆಲ್ಲಲು ಐದು ರನ್‌ಗಳ ಅವಶ್ಯಕತೆ ಇತ್ತು. ಅಷ್ಟರಲ್ಲಿ,ನಮ್ಮ ತಂಡದ ಸೂಪರ್‌ ಬ್ಯಾಟ್ಸ್‌ ಮನ್‌ ಮಂಜು ಔಟಾದ. ನಂತರ ನಾನು ಕ್ರೀಸ್‌ಗೆ ಇಳಿದೆ. ಬೌಂಡರಿನ ಯಾವ್‌ ಕಡೆ ಹೊಡೆಯೋದು ಅಂತಾ ಕೊಹ್ಲಿ ಥರ ನಾನು ತಿರುಗಿ, ತಿರುಗಿ ನೋಡಿದಾಗ ಅಲ್ಲಿ ಕಂಡಿದ್ದೇ ಬೇರೆ.

ಮ್ಯಾಚ್‌ನಲ್ಲಿ 11 ಜನ ಫೀಲ್ಡರ್ಸ್‌ ಬದಲು ಆವತ್ತು ಐವತ್ತು ಜನ ಇರೋದಾ! ಫೀಲ್ಡ್ ನಲ್ಲಿದ್ದ ಸೈನ್ಯವನ್ನ ನೋಡಿ, ನಾನೇ ಬೆರಗಾದೆ. ಏಕೆಂದರೆ, ಅಲ್ಲಿ ಬೌಂಡರಿ ಹೊಡೆಯೋದು ಇರಲಿ, ಒಂದು ರನ್‌ ಹೊಡೆಯೋಕು ಪರದಾಡುವಂತಾಯ್ತು.

Advertisement

ಸಿಂಗಲ್‌ ರನ್‌ ಹೊಡೆಯುತ್ತಲೇ ಮೂರು ರನ್‌ ಕಲೆ ಹಾಕುತ್ತಿರುವಾಗ, ಹೆಂಗೊ ಒಂದು ವೈಡ್‌ ಆಗಿ ಮ್ಯಾಚ್‌ ಡ್ರಾ ಆಗೋಯ್ತು. ಎಲ್ಲರೂ ಸೋಲಿಂದ ಪಾರಾದೆವಲ್ಲಾ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಸಂಜೆ ವೇಳೆ ಎಲ್ಲರೂ ಹೊರಡುವ ಸಮಯವಾಯ್ತು. ಅಷ್ಟರಲ್ಲಿ, ಐವತ್ತು ಜನರೂ ಮೈದಾನದಲ್ಲಿ ಕೂಗುತ್ತಿದ್ದ ಸುದ್ದಿ ಇಡೀ ಊರಿಗೆ ಹಬ್ಬಿತ್ತು. ಊರ ಹಿರಿಯರೊಬ್ಬರು, ಆ ಐವತ್ತು ಫೀಲ್ಡರ್ಸ್‌ ನೋಡಿ, ಏನಪ್ಪ…? ಲಗೋರಿ ಚೆನ್ನಾಗಾಡಿದ್ರಅಂತ ನನ್ನನ್ನು ಕೇಳಿದರು. ಏಕೆಂದರೆ, ಹಳೆ ಟೀಮ್‌ ನೋಡಿ ಕ್ರಿಕೆಟ್‌ ಬದಲು ಲಗೋರಿ ಆಡಿರಬೇಕು ಅಂತ ಆ ಹಿರಿಯರು ಅಂದುಕೊಂಡಿದ್ದರು. ನಾನು ನಗುತ್ತಾಹೌದು ಅಜ್ಜ.. ಎಲ್ಲಿಯೂ ನೋಡದ, ಕೇಳದ ಆ ಐಪಿಎಲ್‌ ಮ್ಯಾಚ್‌ ಇದು. ತುಂಬಚೆನ್ನಾಗಿತ್ತು ಅಂದೆ. ಅದಕ್ಕೆ ಅವರು ಶಬ್ಟಾಸ್‌ ಕಂದ ಅಂದರು. ಈ ಗಲೂ ಕೂಡ ಕ್ರಿಕೆಟ್‌ ನೋಡಿದಾಗೆಲ್ಲ ನಾಲ್ಕು ರನ್ನು ತಡೆಯಲು ಇದ್ದ ಐವತ್ತು ಜನರ ಸೇನೆಯೇ ನೆನಪಾಗುತ್ತದೆ.

 

. ಪ್ರಶಾಂತ್‌ ಕುಮಾರ್‌. ಉರಗನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next