Advertisement

Betting: ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ- ಕಪಿಲ್‌, ಹುಮಾಗೆ ಸಮನ್ಸ್‌

11:44 PM Oct 05, 2023 | Team Udayavani |

ಹೊಸದಿಲ್ಲಿ/ಮುಂಬೈ: ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಪ್ರಕರಣದಲ್ಲಿ ಕಿರುತೆರೆ ನಿರೂಪಕ ಕಪಿಲ್‌ ಶರ್ಮಾ, ಬಾಲಿವುಡ್‌ ನಟಿಯರಾದ ಹುಮಾ ಖುರೇಷಿ, ಹಿನಾ ಖಾನ್‌ ಅವರಿಗೆ ಕೂಡ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದರೆ ಅವರಿಗೆ ಯಾವ ದಿನಕ್ಕೆ ವಿಚಾರಣೆಗೆ ಆಗಮಿಸಬೇಕು ಎಂಬ ಬಗ್ಗೆ ಸೂಚನೆ ನೀಡಲಾಗಿಲ್ಲ.

Advertisement

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅವರಿಗೆ ಶನಿವಾರ ರಾಯ್ಪುರ ಕಚೇರಿಗೆ ವಿಚಾರಣೆ ಬರುವಂತೆ ಈಗಾಗಲೇ ಸಮನ್ಸ್‌ ನೀಡಲಾಗಿದೆ. ಪ್ರಕರಣದಲ್ಲಿ ಒಟ್ಟು
14-15 ಮಂದಿ ನಟ-ನಟಿಯರಿಗೆ ತನಿಖೆಯ ಬಿಸಿ ತಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next