Advertisement

Betting: ಕ್ರಿಕೆಟ್‌ ಬೆಟ್ಟಿಂಗ್‌-ನಾಲ್ವರ ಬಂಧನ

11:04 PM Apr 09, 2023 | Team Udayavani |

ಕೋಟ: ಸಾಲಿಗ್ರಾಮ ಚಿತ್ರಪಾಡಿ ಬಳಿ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ನಾಲ್ವರನ್ನು ಕೋಟ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿರುವ ಘಟನೆ ಎ. 8ರಂದು ನಡೆದಿದೆ.

Advertisement

ಸಿದ್ದಾಪುರದ ತೇಜಸ್‌, ಮರವಂತೆಯ ಕರ್ತವ್ಯ ಶೆಟ್ಟಿ, ನಾಡ ಗುಡ್ಡೆಯಂಗಡಿಯ ಸುದರ್ಶನ ಶೆಟ್ಟಿ ಮತ್ತು ಪವನ್‌ ಶೆಟ್ಟಿ ಬಂಧಿತರು.
ಸಾಲಿಗ್ರಾಮ ಚಿತ್ರಪಾಡಿ ಸಮೀಪ ನಾಲ್ಕೈದು ಜನರು ಸೇರಿಕೊಂಡು ಮೊಬೈಲ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಟ ನಡೆಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಎರಡು ಕಾರು, 10 ಮೊಬೈಲ್‌ ಮತ್ತು 26 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next