Advertisement

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

02:26 AM Apr 30, 2024 | Team Udayavani |

ಮುಂಬಯಿ: ಮಹದೇವ್‌ ಬೆಟ್ಟಿಂಗ್‌ ಆ್ಯಪ್‌ ಪ್ರಕರಣದಲ್ಲಿ ಸೆರೆಯಾಗುವ ಮುನ್ನ ನಟ ಸಾಹಿಲ್‌ ಖಾನ್‌ ಹುಬ್ಬಳ್ಳಿಗೆ ಬಂದಿದ್ದರು. 4 ದಿನದಲ್ಲಿ 6 ರಾಜ್ಯ ಗಳಿಗೆ ಪ್ರಯಾಣಿಸಿದ್ದರು ಎಂದು ಮೂಲಗಳು ತಿಳಿಸಿವೆ. ಎ.25ರಂದು ಮಹಾ ರಾಷ್ಟ್ರ ತೊರೆದಿರುವ ಸಾಹಿಲ್‌ 4 ದಿನದಲ್ಲಿ 1,800 ಕಿ.ಮೀ. ಸಂಚರಿಸಿದ್ದಾರೆ.

Advertisement

ಮೊದಲು ಗೋವಾಗೆ ತೆರಳಿ ಬಳಿಕ ಅಲ್ಲಿಂದ ಕರ್ನಾಟಕಕ್ಕೆ ಹೋಗಿ ದ್ದಾರೆ. ಅಲ್ಲಿ ಹುಬ್ಬಳ್ಳಿಗೆ ಭೇಟಿ ನೀಡಿ, ಅಲ್ಲಿಂದ ಖಾಸಗಿ ಕಾರ್‌ ಒಂದರಲ್ಲಿ ಹೈದರಾಬಾದ್‌ ತಲುಪಿ ದ್ದಾರೆ. ಹೈದ ರಾಬಾದ್‌ನಲ್ಲಿ ಸಾಹಿಲ್‌ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆಯೇ ಛತ್ತೀಸ್‌ಗಢಕ್ಕೆ ತೆರಳಿದ್ದ. ಅಲ್ಲಿಯೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next