Advertisement

Cheap!; ಕಡಿಮೆ ದುಡ್ಡಿಗೆ ಉತ್ತಮ ಮದ್ಯ: ಮದ್ಯಪ್ರಿಯರಿಗೆ ಆಶ್ವಾಸನೆ ನೀಡಿದ ಟಿಡಿಪಿ

12:32 AM Apr 08, 2024 | Team Udayavani |

ಅಮರಾವತಿ: ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಮದ್ಯವನ್ನು ಕಡಿಮೆ ಬೆಲೆಗೆ ನೀಡಲಾಗುವುದು ಎಂದು ಆಂಧ್ರಪ್ರದೇಶದ ವಿಪಕ್ಷ ಟಿಡಿಪಿ ಭರವಸೆ ನೀಡಿದೆ.

Advertisement

ರಾಜ್ಯದಲ್ಲಿ ಬೆಲೆ ಏರಿಕೆ ಯಿಂದ ಸಮಸ್ಯೆ ಉಂಟಾಗಿದೆ. ಅಬಕಾರಿ ವಲಯ ದಿಂದ ರಾಜ್ಯ ಸರಕಾರ 2022-23ರಲ್ಲಿ 24,000 ಕೋಟಿ ರೂ. ಆದಾಯ ಪಡೆದುಕೊಂಡಿದೆ. ರಾಜ್ಯ ದಲ್ಲಿ ಕನಿಷ್ಠ ಗುಣಮಟ್ಟದ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಇದರ ಬೆಲೆ ಹೆಚ್ಚಾಗಿದೆ. ಹೀಗಾಗಿ ಮುಂದಿನ ಬಾರಿ ಟಿಡಿಪಿ ಅಧಿಕಾರಕ್ಕೆ ಬಂದರೆ ಮದ್ಯದ ಬೆಲೆಯನ್ನು ಇಳಿಕೆ ಮಾಡಲಾಗು ತ್ತದೆ ಎಂದು ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಕೇವಲ ಮದ್ಯವಷ್ಟೇ ಅಲ್ಲ, ಅಧಿಕಾರಕ್ಕೆ ಬಂದ 40 ದಿನಗಳಲ್ಲಿ ಎಲ್ಲ ಬೆಲೆಗಳನ್ನು ಇಳಿಸಲಾ ಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next