ಬೆಟ್ಟಂಪಾಡಿ : ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತಡ್ಕ ಉಡ್ಡಂಗಳ ಬಳಿಯ ಆಪ್ನಾ ಕರಾವಳಿ ಪರಿಸರದಲ್ಲಿ ಬುಧವಾರ ಸಂಜೆ ನಡೆದ ಘಟನೆಯಿಂದ ಆಟವಾಡುತ್ತಾ ಕುಣಿಯುತ್ತಿದ್ದ ಮಕ್ಕಳ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಉಡ್ಡಂಗಳ ನಿವಾಸಿ ರವಿ ಕುಲಾಲ್ ದಂಪತಿಗಳ ಪುತ್ರ ಜಿತೇಶ್ ಮತ್ತು ಸಹೋದರ ಹರೀಶ್ ಕುಲಾಲ್ ಅವರ ಪುತ್ರಿಯರಾದ ವಿಶ್ಮಿತಾ ಮತ್ತು ಚೈತ್ರಾ ಅವರು ಮಿತ್ತಡ್ಕ ಶಾಲೆಯ ವಿದ್ಯಾರ್ಥಿಗಳು. ಪರೀಕ್ಷೆ ಮುಗಿದ ಕಾರಣ ಶಾಲೆಗೆ ಹೋಗುವುದಿಲ್ಲ. ಅಕ್ಕ ತಂಗಿಯರ ಜತೆ ಮನೆಯಲ್ಲಿ ಆಟವಾಡುತ್ತೇನೆ ಎಂದು ಅಮ್ಮನಲ್ಲಿ ಹೇಳಿದ್ದಾನೆ. ಅಮ್ಮ ರೆಂಜದಲ್ಲಿರುವ ಅಡಿಕೆ ಗಾರ್ಬಲ್‌ನಲ್ಲಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುವಾಗ ಅಲ್ಲಿಲ್ಲಿ ಮಕ್ಕಳು ಆಟವಾಡಿದ ವಸ್ತುಗಳು ಮನೆಯ ಸುತ್ತ ಬಿದ್ದದನ್ನು ನೋಡಿ ಮಕ್ಕಳು ಕಾಣದಿದ್ದಾಗ ಸುತ್ತಮುತ್ತ ಹುಡುಕಿದರೂ ಸಿಗದಿದ್ದಾಗ ಮನೆಯ ಹಿಂಬದಿಯಲ್ಲಿರುವ ಪಂಚಾಯತ್ ಟ್ಯಾಂಕ್ ಬಳಿ ಹೋದಾಗ ಮಕ್ಕಳ ಚಪ್ಪಲಿ ಕಂಡು ಟ್ಯಾಂಕಿನಲ್ಲಿ ಇಣುಕಿ ನೋಡಿದಾಗ ಪುತ್ರ ನೀರಿನ ಮೇಲೆ ತೇಲುವುಡು ದೃಶ್ಯ ನೋಡಿ ದಂಗಾಗಿ ಹೋಗಿದ್ದಾರೆ.
ಟ್ಯಾಂಕಿನಲ್ಲಿರುವ ನೀರನ್ನು ಖಾಲಿ ಮಾಡಿದಾಗ ಉಳಿದ ಅಕ್ಕ ತಂಗಿಯರ ಮೃತದೇಹ ಕಂಡು ಬಂತು. ಈ ಘಟನೆಯಿಂದ ಎರಡು ಮನೆಯಲ್ಲಿ ಶ್ಮಶಾನ ಮೌನ ಆವರಿಸಿದ್ದು, ದು:ಖತಪ್ತ ಕುಟುಂಬಕ್ಕೆ ಎಷ್ಟು ಸಾಂತ್ವನ ಹೇಳಿದರೂ, ಹೋದ ಜೀವ ಬರಲು ಸಾಧ್ಯವಿಲ್ಲ ಎನ್ನುವುದು ಸತ್ಯ. ಜಿತೇಶ್ ಸವಾರಿ ಮಾಡುತ್ತಿರುವ ಬೈಸಿಕಲ್ ಮನೆ ಮುಂದೆ ಅನಾಥವಾಗಿದೆ.
ಹರೀಶ್ ಕುಲಾಲ್ ಮನೆಯಲ್ಲಿ ನೀರಸ ಮೌನ ಆವರಿಸಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಮಿತ್ತಡ್ಕ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಲಿಯುತ್ತಿರುವ 3 ವಿದ್ಯಾರ್ಥಿ ಗಳು ಪ್ರತಿ
ಭಾನ್ವಿತರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದರು. ಜಿತೇಶ್ ಮತ್ತು ವಿಸ್ಮಿತಾ 7ನೇ ತರಗತಿ ಓದುತ್ತಿದ್ದು, ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಜೀತೇಶ್ ಚುರುಕಾಗಿದ್ದು, ಶಿಕ್ಷಕರು ಹೇಳಿದ ಪಾಠವನ್ನು ಬೇಗನೆ ಮನನ ಮಾಡಿ ಕೊಳ್ಳುತ್ತಿದ್ದ. ಇದರಿಂದ ಶಿಕ್ಷಕರಿಗೆ ಅಲ್ಲದೇ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದ. ಪ್ರಹಸನ, ಆಶುಭಾಷಣ, ಆಶುಭಾಷಣ, ಕ್ಲೇ ಮಾಡೆಲಿಂಗ್‌ನಲ್ಲಿ ಆತ ಎತ್ತಿದ ಕೈ. ಮನೆಯಲ್ಲಿ ಅಕ್ಕ-ತಂಗಿಯರ ಜತೆ ಅಡುಗೆ ಮಾಡಿ ಆಟವಾಡುತ್ತಿದ್ದರು.
ವಿಸ್ಮಿತಾಳು ಪ್ರತಿಭಾ ಕಾರಂಜಿಯ ನಾಟಕದಲ್ಲಿ ಕಂಸನ ಪಾತ್ರ ವನ್ನು ಆಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಳು. ಮೃತ ಮಕ್ಕಳ ಗೌರವಾರ್ಥ ಮಿತ್ತಡ್ಕ ಶಾಲೆಗೆ ಎ. 4ರಂದು ರಜೆ ಘೋಷಿಸಲಾಗಿತ್ತು. ಬೆಳಗ್ಗೆ
ಮೌನ ಪ್ರಾರ್ಥನೆ ಸಲ್ಲಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.