Advertisement

ಸಿದ್ದರಾಮಯ್ಯರಿಂದ ಸಂವಿಧಾನಕ್ಕೆ ದ್ರೋಹ

08:39 AM Sep 02, 2017 | Team Udayavani |

ಚಿತ್ರದುರ್ಗ: ಇಂದು ರಾಜ್ಯಕ್ಕೆ ಕರಾಳ ದಿನ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನಕ್ಕೆ ಬೆಂಕಿ ಹಚ್ಚಿ ಸುಡುವುದೊಂದೇ ಬಾಕಿ ಇದೆ. ಸಂವಿಧಾನಕ್ಕೆ ಅಪಚಾರ ಎಸಗುವ ಉಳಿದೆಲ್ಲವನ್ನೂ ಮಾಡಿದ್ದಾರೆ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ  ಆರ್‌.ಬಿ.ತಿಮ್ಮಾಪುರ ಬಾಗಲಕೋಟೆ ಜಿಲೆಯ ಅತ್ತೂರು ವಿಳಾಸ ನೀಡಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. 

Advertisement

ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಮತ ಚಲಾಯಿಸಲು ಹೆಸರು ಸೇರಿಸಿಕೊಂಡಿದ್ದಾರೆ. ಟಿಎ, ಡಿಎಗಾಗಿ ಊರಿನ ಹಾಗೂ ಮತ ಚಲಾಯಿಸಲು ಬೆಂಗಳೂರು ವಿಳಾಸ ನೀಡುವುದು ವಿಪರ್ಯಾಸ. ಇಂತಹ ಸುಳ್ಳು ಹೇಳುವವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಿಜೆಪಿ ಹೋರಾಟಕ್ಕೆ ಜಯ
ಬೆಂಗಳೂರು: ಬಿಜೆಪಿ ಹೋರಾಟಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ ಅವರು ರಮಾನಾಥ್‌ ರೈ ಅವರಿಗೆ ಗೃಹಖಾತೆ ನೀಡಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಈ ವಿಚಾರವನ್ನು ಇಲ್ಲಿಗೆ ನಾವು ಬಿಡುವುದಿಲ್ಲ. ನಮ್ಮ 
ಹೋರಾಟದ ಫ‌ಲವಾಗಿಯೇ ಅವರಿಗೆ ಗೃಹಖಾತೆ ಕೊಟ್ಟಿಲ್ಲ. ಮಂಗಳೂರು ಚಲೋ ಕಾರ್ಯಕ್ರಮ ನಿಗದಿಯಂತೆ ನಡೆಯಲಿದ್ದು, ರಮಾನಾಥ್‌ ರೈ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು. ರಾಮಲಿಂಗಾರೆಡ್ಡಿಯವರಿಗೆ ಗೃಹಖಾತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ಇರುವ ಸಚಿವರಲ್ಲಿ ರಾಮಲಿಂಗಾರೆಡ್ಡಿ ಉತ್ತಮರಾಗಿದ್ದಾರೆ. ಅವರು ಹೇಗೆ ಕೆಲಸ ಮಾಡುತ್ತಾರೆ, ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ ಎನ್ನುವುದನ್ನು ಕಾದು ನೋಡೋಣ ಎಂದರು.

ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಸಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಆರ್‌.ಬಿ.ತಿಮ್ಮಾಪುರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ಖಂಡನೀಯ. ಇದು ಕಾಂಗ್ರೆಸ್ಸಿನ ನೈತಿಕ ದಿವಾಳಿತನಕ್ಕೆ ಪುರಾವೆ. 
ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next