Advertisement

ವೀಳ್ಯದೆಲೆ ವಿಶೇಷ

09:51 PM Jul 02, 2019 | mahesh |

ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆಗೆ ಬಹಳ ಪ್ರಮುಖ ಸ್ಥಾನವಿದೆ. ಊಟದ ನಂತರ ವೀಳ್ಯದೆಲೆ, ಅಡಿಕೆ, ಸುಣ್ಣ ಸೇವಿಸುವುದು, ಅತಿಥಿಗಳಿಗೆ ತಾಂಬೂಲ ನೀಡುವುದು, ಯುದ್ಧದ ಸಂದರ್ಭದಲ್ಲಿ ನೀಡುವ ರಣವೀಳ್ಯ, ಶುಭ ಸಮಾರಂಭಗಳಲ್ಲಿ ನೀಡುವ ತಾಂಬೂಲ… ಹೀಗೆ ಸಾವಿರಾರು ವರ್ಷಗಳಿಂದ ವೀಳ್ಯದೆಲೆ ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಊಟದ ನಂತರ ಸೇವಿಸುವ ಈ ವೀಳ್ಯದೆಲೆಯಿಂದ ರುಚಿಕಟ್ಟಾದ ಪದಾರ್ಥಗಳನ್ನೂ ತಯಾರಿಸಬಹುದು.

Advertisement

1. ವೀಳ್ಯದೆಲೆ ಲಡ್ಡು
ಬೇಕಾಗುವ ಸಾಮಗ್ರಿ: ವೀಳ್ಯದೆಲೆ- 5, ಗುಲ್ಕನ್‌- 2 ಚಮಚ, ತುಪ್ಪ – 2 ಚಮಚ, ಏಲಕ್ಕಿ ಪುಡಿ- 1 ಚಮಚ, ಕಂಡೆನ್‌ಸ್ಡ್ ಮಿಲ್ಕ್- 2 ಕಪ್‌, ತೆಂಗಿನ ತುರಿ- 1 ಕಪ್‌, ಡ್ರೈ ಫ‌ೂÅಟ್ಸ್‌ ಪುಡಿ- 2 ಚಮಚ, ತುರಿದ ಕೊಬ್ಬರಿ.

ಮಾಡುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಗುಲ್ಕನ್‌, ಡ್ರೆ„ಫ‌ೂÅಟ್ಸ್‌ಗಳನ್ನು ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ ತೆಗೆದಿಟ್ಟುಕೊಳ್ಳಿ. ವೀಳ್ಯದೆಲೆಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಈಗ ಆ ದಪ್ಪ ತಳದ ಪಾತ್ರೆಗೆ ಕಂಡೆನ್‌ಸ್ಡ್ ಮಿಲ್ಕ್ ಹಾಕಿ ತೆಂಗಿತುರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಬಿಡದೇ ಕೈಯಾಡಿಸುತ್ತಿರಿ. ನಂತರ ಇದಕ್ಕೆ ಹೆಚ್ಚಿದ ವೀಳ್ಯದೆಲೆ, ಏಲಕ್ಕಿ ಪುಡಿ ಸೇರಿಸಿ ಕೂಡಿಸಿ, ಒಂದೆರಡು ನಿುಷಗಳಲ್ಲಿ ಮಿಶ್ರಣವು ತಳ ಬಿಡುತ್ತಾ ಬಂದಾಗ ಕೆಳಗಿಳಿಸಿ. ಕೈಗೆ ತುಪ್ಪ ಸವರಿಕೊಂಡು ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿ, ತುರಿದ ಕೊಬ್ಬರಿಯಲ್ಲಿ ಉರುಳಿಸಿದರೆ ಲಡ್ಡು ರೆಡಿ.

3. ವೀಳ್ಯದೆಲೆ ಸಾರು
ಬೇಕಾಗುವ ಸಾಮಗ್ರಿ: ವೀಳ್ಯದೆಲೆ- 3, ಅರಿಶಿನ- 1/4 ಚಮಚ, ಜೀರಿಗೆ ಪುಡಿ- 1/2 ಚಮಚ, ಟೊಮೇಟೊ- 4, ಕಾಳುಮೆಣಸಿನಪುಡಿ- 1/4 ಚಮಚ, ಹುಣಸೆಹಣ್ಣು- ಲಿಂಬೆ ಗಾತ್ರದ್ದು, ರುಚಿಗೆ ಉಪ್ಪು, ತುಪ್ಪ- 1 ಚಮಚ, ಸಾಸಿವೆ, ಇಂಗು-1/2 ಚಮಚ.

ಮಾಡುವ ವಿಧಾನ: ಹುಣಸೆ ಹಣ್ಣನ್ನು ಮೊದಲು ನೀರಿನಲ್ಲಿ ನೆನೆಸಿಕೊಂಡು ರಸ ತೆಗೆದಿಟ್ಟುಕೊಳ್ಳಿ, ಒಂದು ಪಾತ್ರೆಗೆ ತುಪ್ಪ, ಸಾಸಿವೆ, ಅರಿಶಿನ, ಮೆಣಸಿನಪುಡಿ, ಜೀರಿಗೆಪುಡಿ ಹಾಕಿ ಸ್ವಲ್ಪ ಹುರಿಯಿರಿ. ಇದಕ್ಕೆ ಹೆಚ್ಚಿದ ಟೊಮೇಟೊ ಹಾಕಿ ಫ್ರೆ„ ಮಾಡಿ. ಈಗ ಹುಣಸೆ ರಸ, ಉಪ್ಪು, ಕರಿಬೇವು ಹಾಕಿ ಕುದಿಸಿ. ಒಂದು ಕುದಿ ಬಂದ ನಂತರ ಹೆಚ್ಚಿಟ್ಟ ವೀಳ್ಯದೆಲೆ ಹಾಕಿ ಕುದಿಸಿದರೆ ರುಚಿಯಾದ ಸಾರು ತಯಾರಾಗುತ್ತೆ.

Advertisement

4. ವೀಳ್ಯದೆಲೆ ಪಕೋಡ
ಬೇಕಾಗುವ ಸಾಮಗ್ರಿ: ವೀಳ್ಯದೆಲೆ- 10, ಕಡಲೆ ಹಿಟ್ಟು- 1 ಕಪ್‌, ಅಡಿಗೆ ಸೋಡ- ಚಿಟಿಕೆ, ಓಂ ಕಾಳು- ಅರ್ಧ ಚಮಚ, ರುಚಿಗೆ ಉಪ್ಪು, ಕರಿಯಲು ಎಣ್ಣೆ. ಅರಿಶಿನ- ಚಿಟಿಕೆ.

ಮಾಡುವ ವಿಧಾನ: ವೀಳ್ಯದೆಲೆಯನ್ನು ಚೆನ್ನಾಗಿ ತೊಳೆಯಿರಿ. ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು, ಅರಿಶಿನ, ಸೋಡ, ಉಪ್ಪು, ಓಂಕಾಳಿನ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಒಂದೊಂದೇ ವೀಳ್ಯದೆಲೆಯನ್ನು ಹಿಟ್ಟಿನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.

4. ವೀಳ್ಯದೆಲೆ ಪಾನೀಯ
ಬೇಕಾಗುವ ಸಾಮಗ್ರಿ: ವೀಳ್ಯದೆಲೆ- 5, ಕೊತ್ತಂಬರಿ ಸೊಪ್ಪು- 2 ಕಪ್‌, ಪುದೀನಾ- 1 ಕಪ್‌, ಪಾಲಕ್‌ ಸೊಪ್ಪು- 2 ಕಪ್‌, ಉಪ್ಪು- ರುಚಿಗೆ, ಬೆಟ್ಟದ ನೆಲ್ಲಿಕಾಯಿ ರಸ- ಅರ್ಧ ಲೋಟ.
ಮಾಡುವ ವಿಧಾನ: ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ, ಸೋಸಿ, ತಂಪಾಗಿಸಿಕೊಂಡು ಸವಿಯಿರಿ.

-ಶ್ರುತಿ ಕೆ.ಎಸ್‌., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next