ಕೊರಟಗೆರೆ; ತಾಲೂಕಿನ ತೋವಿನಕೆರೆ ಸಂತೆಯಲ್ಲಿ ವೀಳ್ಯದೆಲೆ ಕಟ್ಟಿಗೆ 160 ರೂಗಳ ದಾಖಲೆ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದು, ಇದುವರೆಗೂ ಈ ಬೆಲೆ ತಲುಪಿರಲಿಲ್ಲ, ಮಧುಗಿರಿ ತಾಲೂಕಿನ ಲಿಂಗಸಂದ್ರದ ಬೆಳೆಗಾರ ನಟರಾಜು ಸಂತೆಗೆ ತಂದಿದ್ದ ವೀಳ್ಯೆದೆಳೆ ಇದುವರೆಗೂ ಇಷ್ಟೊಂದು ದರಕ್ಕೆ ವೀಳ್ಯದೆಲೆ ಬೆಲೆ ಏರಿಕೆ ಯಾಗಿ ಹೆಚ್ಚಿನ ಬೆಲೆಗೆ ಮಾರಾಟವಾಯಿತು.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆ ಸಂತೆಯಲ್ಲಿ ವೀಳ್ಯದೆಳೆ ಮಾರಾಟ ಹಲವು ದಶಕಗಳಿಂದ ನಡೆಯುತ್ತಿದೆ, ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ, ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳ ವೀಳ್ಯದೆಲೆ ಬೆಳೆಯುವ ರೈತರು ಪ್ರತಿ ವಾರ ತೋವಿನಕೆರೆ ಸಂತೆಗೆ ತಂದು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ, ಬೆಳೆಗಾರರು ಕಟ್ಟಿನಲ್ಲಿ ನೂರು ಎಲೆಗಳಿಗಿಂತ ಹೆಚ್ಚು ವೀಳ್ಯೆದೆಲೆ ಇಟ್ಟಿರುತ್ತಾರೆ, ಕಡಿಮೆಯಿರುವುದಿಲ್ಲ, ವೀಳ್ಯೆದೆಲೆ ಸಂಖ್ಯೆಯಲ್ಲಿ ಸುಳ್ಳು ಹೇಳಬಾರದು ಎಂದು ಬಲವಾದ ನಂಬಿಕೆ ಈ ಭಾಗದ ವೀಳ್ಯೆದೆಲೆ ಬೆಳೆಗಾರರಲ್ಲಿದೆ ಅದೇ ರೀತಿ ಇಂದಿಗೂ ನಡೆದುಕೊಂಡು ಬರುತ್ತಿದ್ದಾರೆ.
ಬೇರೆ ಮಾರುಕಟ್ಟೆಗಳಲ್ಲಿ ಕಟ್ಟಿನಲ್ಲಿ ಕಡಿಮೆ ಇಟ್ಟು ಮಾರುವುದು ಸಾಮಾನ್ಯ, ಆದರೆ ತೋವಿನಕೆರೆ ಸಂತೆಯಲ್ಲಿ ವೀಳ್ಯದೆಲೆ ಉತ್ತಮ ಹೆಸರು ಬರಲು ಮುಖ್ಯ ಕಾರಣ ಇದೇ, ಎನ್ನುತ್ತಾರೆ ಹಿರಿಯ ಕೃಷಿಕರು, ಶಿರಾ, ಮಧುಗಿರಿ, ಕೊಡಿಗೇನಹಳ್ಳಿ, ಗುಬ್ಬಿ, ತುಮಕೂರು, ಚೇಳೂರು ಹಾಗೂ ಆಂದ್ರಪ್ರದೇಶ ರಾಜ್ಯದ ಹಿಂದೂಪುರ ದಿಂದಲೂ ಖರೀದಿದಾರರು ತೋವಿನಕೆರೆ ಸಂತೆಗೆ ಬರುತ್ತಾರೆ, ಅಂಗಡಿಗಳಲ್ಲಿ ಚಿಲ್ಲದೆ ಮಾರಾಟಗಾರರು 200-220 ರೂಗಳಿಗೆ ಒಂದು ಕಟ್ಟು ಮಾರಾಟ ಮಾಡುತ್ತಿದ್ದಾರೆ, ತುಮಕೂರು ಜಿಲ್ಲೆಯ ತೋವಿನಕೆರೆ ವೀಳ್ಯೆದೆಲೆ ಸಂತೆಯಲ್ಲಿ ಬೆಳೆಗಾರರೇ ನೇರವಾಗಿ ಗ್ರಾಹಕರಿಗೆ ಮತ್ತು ಮರ್ಧವರ್ತಿಗಳಿಗೆ ಮಾರಾಟ ಮಾಡುವುದು ಹಲವು ದಶಕಗಳಿಂದ ನಡೆಯುತ್ತಿದೆ, ಇಲ್ಲಿನ ಕಟ್ಟುಗಳಲ್ಲಿ ನೂರು ಎಲೆಗಳಿಗಿಂತ ಹೆಚ್ಚು ಇರುತ್ತವೆ, ಕಡಿಮೆ ಇಟ್ಟುಮಾರಾಟ ಮಾಡುವುದಿಲ್ಲವೆಂದು ಬೇರೆ ಸ್ಥಳದ ಗ್ರಾಹಕರು ನಂಬಿದ್ದಾರೆ, ಸಂತೆಯಲ್ಲಿ ಬೆಳಿಗ್ಗೆ ೭ ಗಂಟಗೆ ಪ್ರಾರಂಭವಾಗುವ ವೀಳ್ಯದೆಲೆ ಮತ್ತೆ 10 ಗಂಟೆಗೆ ಮುಕ್ತಾಯವಾಗುತ್ತದೆ.
ವೀಳ್ಯದೆಲೆ ಬೆಳೆಗಾರ ಲಿಂಗಸಂದ್ರ ನಟರಾಜು ಬೆಲೆ ಹೆಚ್ಚಳದ ಬಗ್ಗೆ ಮಾಹಿತಿ ನೀಡಿ ಜನವರಿ ತಿಂಗಳ ಸಂತೆಯಲ್ಲಿ 100 ರೂಗಳ ಗಡಿ ದಾಟಿ ಮಾರಾಟವಾದರೆ ಫೆಬ್ರವರಿ ಮೊದಲವಾರ 160 ರೂಗಳು ತಲುಪಿದೆ, ಸಂತೆಯಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟವಾದ ವೀಳ್ಯದೆಲೆ ಎಂದರೆ 140 ರೂಗಳು, ವೀಳ್ಯೆದೆಲೆ ಬೆಲೆ ಹೆಚ್ಚಾಗಲು ಕಾರಣ ಹಬ್ಬಗಳು, ಜಾತ್ರೆಗಳು, ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದು ಈ ಸಂಪ್ರದಾಯದ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಅವಶ್ಯಕ ವಸ್ತುವಾದ ಹಿನ್ನಲೆ ಹೆಚ್ಚು ಬೇಡಿಕೆ ಇರುವುದರಿಂದ ಹಾಗೂ ಚಳಿಯ ಕಾರಣದಿಂದ ವೀಳ್ಯದೆಲೆ ಇಳುವರಿ ಕಡಿಮೆಯಾಗಿದೆ. ಕಳೆದ ವರ್ಷ ಬಿದ್ದ ಮಳೆಯು ಇಳುವಿರಿ ಮೇಲೆ ಪರಿಣಾಮ ಬೀರಿದೆ, ವೀಳ್ಯದೆಲೆ ತೋಟಗಳಲ್ಲಿ ಶೇ. 70 ರಷ್ಟು ಇಳುವರಿ ಕಡಿಮೆಯಾಗಿದೆ, 100 ಪೆಂಡಿ ಬರುವ ಜಾಗದಲ್ಲಿ ಕೇವಲ 30 ಪೆಂಡಿ ವೀಳ್ಯದೆಲೆ ಬರುತ್ತಿಲ್ಲ ಈ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದೆ ಎಂದು ಅಬಿಪ್ರಾಯತಿಳಿಸಿದರು.
ಖರೀದಿದಾರ ಹರೀಶ್ ಮಾತನಾಡಿ ರೈತರು ವೀಳ್ಯೆದೆಲೆ ಬಳ್ಳಿಯನ್ನು ಮರದಿಂದ ಇಳಿಸಿ ಭೂಮಿಗೆ ಅದಿಯುತ್ತಿದ್ದಾರೆ, ಮತ್ತೆ ಬಳ್ಳಿ ಚಿಗುರು ಬರಬೇಕು, ಇದೇ ವಾತಾವರಣ ಮುಂದುವರೆದರೆ ಚಿಗುರು ಹೊಡೆಯುವುದು ತಡವಾಗುತ್ತದೆ, ಎಲೆಗಳು ಬರುವುದು ತಡವಾದರೆ ಎಲೆಯ ಬೆಲೆ ಇನ್ನು ಹೆಚ್ಚಾಗ ಬಹುದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.
ಇದನ್ನೂ ಓದಿ: ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ