Advertisement

ಬೆಟಗೇರಿ: ನಾಳೆಯಿಂದ ಓಕುಳಿ

01:44 PM Jun 06, 2019 | Team Udayavani |

ಬೆಟಗೇರಿ: ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಜೂ. 7ರಿಂದ 11 ರವರೆಗೆ ನಡೆಯಲಿದೆ.

Advertisement

ಇಷ್ಟಾರ್ಥ ಈಡೇರಿಸುವ ಜಾಗೃತ ಹನುಮಂತ ದೇವರ ಜಾತ್ರೆಗೆ ಗ್ರಾಮದ ಎಲ್ಲ ಸಮುದಾಯದ ಜನರು ವಂತಿಗೆ ಹಣ ಸಂಗ್ರಹಿಸಿ ಅದ್ಧೂರಿಯಾಗಿ ಓಕುಳಿ ಹಬ್ಬ ಆಚರಣೆ ಮಾಡುವ ಪ್ರತೀತಿ ಇದೆ. ಹೀಗಾಗಿ ಊರಿನಲ್ಲಿ ಜರುಗುವ ಅತ್ಯಂತ ದೊಡ್ಡದಾದ ಧಾರ್ಮಿಕ ಕಾರ್ಯಕ್ರಮ ಇದಾಗಿದೆ.

ಕಡೆ ಓಕುಳಿ ದಿನ ಕುದುರೆ, ನವಿಲು, ಗರುಡ, ಕರಡಿ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳ ಸೋಗಿನ ಐದಾರು ಗುಂಪುಗಳ ಯುವಕರು ಕಾಲಿಗೆ ಮರಗಾಲು ಕಟ್ಟಿಕೊಂಡು ವಾದ್ಯಮೇಳಗಳ ತಾಳಕ್ಕೆ ತಕ್ಕಂತೆ ದಣಿವೇ ಇಲ್ಲದಂತೆ ಕುಣಿಯುವ ಕುಣಿತ ನೋಡುಗರ ಕಣ್ಮನ ತಣಿಸುತ್ತದೆ. ಪ್ರತಿ ಓಣಿಯ ಎಲ್ಲ ಮನೆಯವರು ಸಾಮೂಹಿಕವಾಗಿ ಮಾರುತಿ ದೇವರ ದೇವಾಲಯಕ್ಕೆ ತೆರಳಿ ನೈವೇದ್ಯ, ಪೂಜೆ, ಪುನಸ್ಕಾರ, ಹರಕೆ ಸಮರ್ಪಿಸುತ್ತಾರೆ. ಓಕುಳಿ ಪ್ರಯುಕ್ತ ರಂಗಭೂಮಿ ಕಲೆಯ ವಿವಿಧ ನಾಟಕ ಸೇರಿದಂತೆ ಮನರಂಜನೆಯ ಹಲವಾರು ಕಾರ್ಯಕ್ರಮ ಗ್ರಾಮದಲ್ಲಿ ಆಯೋಜಿಸಲಾಗಿರುತ್ತದೆ.

ಜೂ.11 ರಂದು ಕೊನೆಯ ದಿನ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯ, ಮಹಾರಾಷ್ಟ್ರ ಸೇರಿದಂತೆ ಹಲವಡೆಯಿಂದ ಕುಸ್ತಿ ಪಟುಗಳು ಆಗಮಿಸಿ ತಮ್ಮ ಕಸರತ್ತು ತೊರಿಸುವ ಪ್ರದರ್ಶನ ನಡೆಯುತ್ತದೆ.

ಜೂ. 8ರಂದು ಬೆಳಗ್ಗೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಲಿದೆ.

Advertisement

9ರಂದು ಬೆಳಗ್ಗೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 5ಗಂಟೆಗೆ ನಡು ಓಕುಳಿ. 10 ರಂದು 8ಗಂಟೆಯಿಂದ ಪುರಜನರಿಂದ ಪೂಜೆ-ಪುನಸ್ಕಾರ, ನೈವೇದ್ಯ, ಹರಕೆ ಸಮರ್ಪಣೆ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರ‌ ಪಲ್ಲಕ್ಕಿ ಪ್ರದಕ್ಷಿಣೆ ಬಳಿಕ ಕಡೆ ಓಕಳಿ ನಡೆಯಲಿದೆ. ಜೂ. 11ರಂದು ಬೆಳಗ್ಗೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 4 ಗಂಟೆಗೆ ಜಂಗಿ ಕುಸ್ತಿಗಳು ನಡೆದ ಬಳಿಕ ಸಂಜೆ ಮಾರುತಿ ದೇವರ ದೇವಾಲಯಕ್ಕೆ ಪಲ್ಲಕ್ಕಿ ಪ್ರದಕ್ಷಿಣೆ ನಡೆಯಲಿದೆ ಎಂದು ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next