Advertisement

ಬೆಸ್ತರ ಸಂಘ ಬಲವರ್ಧನೆಗೆ ಒಗ್ಗಟ್ಟಾಗಿ

02:33 PM Feb 19, 2022 | Team Udayavani |

ಬಂಗಾರಪೇಟೆ: ಸಂಘಟನೆ ಮೂಲ ಉದ್ದೇಶ ತಳಮಟ್ಟದಿಂದ ನಾಯಕರನ್ನು ಸೃಷ್ಟಿಸುವುದು ಆಗಿದೆ.ಒಂದು ಸಂಘ ಉತ್ತಮ ಹಾದಿಯಲ್ಲಿ ಸಾಗಬೇಕಾದರೆಹೋಬಳಿ ಮಟ್ಟದಿಂದ ಬೆಳೆಸಿ ಎಲ್ಲರೂ ಒಗ್ಗಟಾಗಿರಬೇಕು ಎಂದು ಗಂಗಾಮತಸ್ಥ ಮುಖಂಡ ಡಾ.ಯೋಗೇಶ್‌ ಹೇಳಿದರು.

Advertisement

ಪಟ್ಟಣದ ಎಲೆಮಲ್ಲಪ್ಪ ರಸ್ತೆಯಲ್ಲಿ ನೂತನವಾಗಿ ಗಂಗಾಮತಸ್ಥ ಬೆಸ್ತರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಎಲ್ಲಾ ಸಮುದಾಯದಂತೆ ನಮ್ಮಸಮಾಜಕ್ಕೂ ಇತಿಹಾಸವಿದೆ. ಸರ್ಕಾರ ಸಂಘ-ಸಂಸ್ಥೆಗಳಿಗೆ ಬಹಳಷ್ಟು ಅನುದಾನ ನೀಡುತ್ತಿದೆ. ಅದನ್ನುಸದ್ಬಳಕೆ ಮಾಡಿಕೊಂಡು ಸ್ವಂತ ಕಚೇರಿ ಅಥವಾ ಭವನ ನಿರ್ಮಿಸಿ ಸಮುದಾಯ ಗಟ್ಟಿಗೊಳಿಸಲು ಎಲ್ಲರೂಕೈಜೋಡಿಸಿ ಹಂತವಾಗಿ ಗುರಿ ಮುಟ್ಟಬೇಕೆಂದು ಹೇಳಿದರು.

ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಮುನಿಕೃಷ್ಣ ಮಾತನಾಡಿ, ನಮ್ಮ ಮುಖಂಡರ ಸೂಚನೆಯಂತೆ ಎಲ್ಲರನ್ನೂಒಗ್ಗೂಡಿಸಿಕೊಂಡು ಚದುರಿ ಹೋಗಿರುವ ಸಮುದಾಯ ಒಗ್ಗೂಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಯೋಗೇಶ್‌ಗೆ ಜಿಲ್ಲೆಯಿಂದ ಅತಿ ಹೆಚ್ಚು ಮತ ನೀಡಬೇಕು ಎಂದು ಹೇಳಿದರು.

ವಾರದಲ್ಲಿ ಎರಡು ದಿನ ಕೋಲಾರದಲ್ಲಿ ಸಭೆನಡೆಸಲಾಗುತ್ತದೆ. ಮುಖಂಡರು ಸಭೆಗೆ ಬಂದುಚರ್ಚೆ ಆಗಿರುವ ವಿಷಯಗಳನ್ನು ಸಮಾಜದಎಲ್ಲರಿಗೂ ತಿಳಿಸಬೇಕು. ಮುಖ್ಯವಾಗಿ ಸದಸ್ಯತ್ವವನ್ನುಪ್ರತಿಯೊಬ್ಬರು ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಫಿಶರಿಂಗ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಶಿವಣ್ಣ ಮಾತನಾಡಿ, ಬಂಗಾರಪೇಟೆಯಲ್ಲಿ ಶುರುವಾಗಿಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಆರು ತಾಲೂಕಿನಲ್ಲೂ ನಮ್ಮ ಕಚೇರಿ ಪ್ರಾರಂಭವಾಗಬೇಕು.ಇದರಿಂದ ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿಬೆಳೆಯಬೇಕು, ಜಿಲ್ಲೆಯಲ್ಲಿ ನಮ್ಮ ಸಮುದಾಯದವರುಮೂವತ್ತು ಸಾವಿರ ಇದ್ದೇವೆ. ಆದರೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಇದರ ವಿರುದ್ಧ ನಾವು ಧ್ವನಿ ಎತ್ತಬೇಕು ಎಂದರು.

Advertisement

ರಾಜ್ಯ ಮುಖಂಡ ಜಿ.ಟಿ.ವೆಂಕಟೇಶ್‌, ಕೋಲಾರಶಿವು, ವಿಜಯ್‌ಕುಮಾರ್‌, ಎಪಿಎಂಸಿ ವೆಂಕಟೇಶ್‌,ಆಂಜಿನಪ್ಪ, ಕೃಷ್ಣಪ್ಪ, ಕೆ.ಆರ್‌.ನಾಗರಾಜ್‌, ವೇಣು,ಮಂಜು, ಗಣೇಶ್‌, ಪ್ರಭಾಕರ್‌ ಮುಂತಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next