Advertisement

Baking soda; ಅಡುಗೆ ಸೋಡಾ…ಅಡುಗೆಗೆ ಮಾತ್ರವಲ್ಲ..ಇದರಿಂದ ಎಷ್ಟೊಂದು ಪ್ರಯೋಜನಗಳಿವೆ…

12:01 PM Jul 04, 2023 | Team Udayavani |

• ಮೊಟ್ಟೆಯ ಹಳದಿ ಭಾಗಕ್ಕೆ ಸ್ವಲ್ಪ ನೀರು ಬೆರೆಸಿ ಅದು ಮೃದುವಾಗುವವರೆಗೆ ಕಲಕಿ ಅನಂತರ ಅಡುಗೆ ಮನೆಯ ಕಟ್ಟೆ ಹಾಗೂ ಗಾಜಿನ ಪಾತ್ರೆಗಳನ್ನು ತಿಕ್ಕಿ ತೊಳೆಯುವುದರಿಂದ ಫ‌ಳ ಫ‌ಳ ಹೊಳಪು ಪಡೆಯುತ್ತದೆ.

Advertisement

• ಅಡುಗೆ ಮಾಡುವಾಗ ಏಪ್ರನ್‌ ಧರಿಸಿದರೆ ಬಟ್ಟೆ ಕೊಳೆಯಾಗುವುದಿಲ್ಲ.

• ಅಡುಗೆ ಕೆಲಸ ಆರಂಭಕ್ಕೂ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಸುಲಭವಾಗಿ ಮತ್ತು ವೇಗವಾಗಿ ಅಡುಗೆ ಮಾಡಬಹುದು.

• ಪಾತ್ರೆಗಳ ಮೇಲೆ ಸುಟ್ಟ ಕಲೆಗಳಾಗಿದ್ದರೆ ಸ್ವಲ್ಪ ನಿಂಬೆ ರಸವನ್ನು ಬಳಸಿ ಸುಲಭವಾಗಿ ತೆಗೆಯಬಹುದು.

• ಅಡುಗೆ ಸೋಡಾ ಬಳಸಿ ಕಿಚನ್‌ ರೂಮ್‌ನ ಕಟ್ಟೆ, ಸಿಂಕ್‌, ಗ್ಯಾಸ್‌ ಸ್ಟೌವ್‌ ಅನ್ನು ಸುಲಭವಾಗಿ ಕ್ಲೀನ್‌ ಮಾಡಬಹುದು.

Advertisement

• ಸ್ಟೌವ್‌ ಬರ್ನರ್‌ನಲ್ಲಿ ಸಂಗ್ರಹಗೊಂಡ ಜಿಡ್ಡು ಮತ್ತು ಅಡುಗೆಯ ಇತರ ಅಂಶಗಳನ್ನು ನಿವಾರಿಸಲು ಅಮೋನಿಯಾವನ್ನು ಬಳಸಬಹುದು.

• ಕಸದ ತೊಟ್ಟಿ ಮತ್ತು ಜಿಡ್ಡುಗಟ್ಟಿದ ಅಡುಗೆ ಕಟ್ಟೆಯನ್ನು ಲಿಂಬೆ, ವಿನೇಗರ್‌ ಮತ್ತು ಸೋಡಾದ ಮಿಶ್ರಣವನ್ನು ಬಳಸಿ ಇದನ್ನು ನಿವಾರಿಸಿಕೊಳ್ಳಬಹುದು. ಇದರಿಂದ ಮನೆಯೂ ಸ್ವಚ್ಛವಾಗುತ್ತದೆ, ಮನೆಯೊಳಗೆ ಸುವಾಸನೆಯೂ ಹರಡುತ್ತದೆ.

• ಮೈಕ್ರೋವೇವ್‌ನ ಸ್ವಚ್ಛತೆ ಸವಾಲಿನ ಕೆಲಸ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಲಿಂಬೆ ರಸವನ್ನು ಹಿಂಡಿ. ಈ ನೀರಿನಿಂದ ಮೈಕ್ರೊವೇವ್‌ ನ ಒಳಭಾಗವನ್ನು ತೊಳೆಯಿರಿ. ಇದರಿಂದ ಮೈಕ್ರೊವೇವ್‌ ಒಳಭಾಗದಲ್ಲಿರುವ ಜಿಡ್ಡು, ಗ್ರೀಸ್‌ ಸ್ವಚ್ಛವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next