Advertisement

ಯುವಜನತೆಯ ಸನ್ಮಾರ್ಗಕ್ಕೆ ಯುವವಾಹಿನಿ ಅತ್ಯುತ್ತಮ ವೇದಿಕೆ: ಚಂದ್ರಶೇಖರ ನಾನಿಲ್‌

08:53 PM Apr 08, 2019 | Team Udayavani |

ಹಳೆಯಂಗಡಿ: ಯುವಜನತೆಯನ್ನು ಸನ್ಮಾರ್ಗದಲ್ಲಿ ಸಾಗಲು ಸಮಾಜದ ಪ್ರೇರಣಾ ಶಕ್ತಿಯಾಗಿರುವ ಯುವವಾಹಿನಿ ಉತ್ತಮ ವೇದಿಕೆಯಾಗಿದೆ. ನಾಯಕತ್ವದ ಪ್ರೌಢತೆಯಿಂದ ಯುವಜನರು ಬೆಳೆಯಲು ಅವಕಾಶ ನೀಡಲಾಗುತ್ತಿದೆ ಎಂದು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್‌ ಅವರು ಹೇಳಿದರು.

Advertisement

ಹಳೆಯಂಗಡಿ ವಿದ್ಯಾ ವಿನಾಯಕ ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ಹಳೆಯಂಗಡಿಯ ಯುವವಾಹಿನಿ ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ ಆಳ್ವಾಸ್‌ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರಮೋದಾ ಅವರು ಮಾತ ನಾಡಿ, ಯುವ ಮನಸ್ಸಿನ ತುಮುಲಗಳನ್ನು ಅರ್ಥೈಸಿಕೊಂಡು ಸವಾಲುಗಳ ನಡುವೆ ಬದುಕುವುದೇ ಒಂದು ಸಾಧನೆಯಾಗಿದೆ. ನಮ್ಮ ನಮ್ಮ ಜೀವನದ ಅನುಭವಗಳನ್ನೇ ವೇದಿಕೆಯನ್ನಾಗಿ ಮಾಡಿ ಕೊಂಡು ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡಿರಿ ಎಂದರು.

ಹಳೆಯಂಗಡಿ ಯುವವಾಹಿನಿಯ ಅಧ್ಯಕ್ಷ ಹೇಮನಾಥ್‌ ಬಿ. ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ, ನೂತನ ಅಧ್ಯಕ್ಷ ಅರುಣ್‌ಕುಮಾರ್‌ ಅವರ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಮ್ಮಾನ
ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾನಿಲ್‌, ಜಿಲ್ಲಾ ಯುವ ಪ್ರಶಸ್ತಿ ಪಡೆದಿರುವ ದಿವ್ಯಶ್ರೀ ರಮೇಶ್‌ ಕೋಟ್ಯಾನ್‌, ಉಪನ್ಯಾಸಕಿ ಪ್ರಮೋದಾ, ಘಟಕದ ಅಧ್ಯಕ್ಷ ಹೇಮನಾಥ್‌ ಬಿ. ಕರ್ಕೇರ, ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಪಿ. ಕೋಟ್ಯಾನ್‌, ಕೋಶಾಧಿಕಾರಿ ಚೇತನ್‌ ಎಸ್‌. ಸುವರ್ಣ ಅವರನ್ನು ಸಮ್ಮಾನಿಸಲಾಯಿತು.ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್‌ ಜಿ. ಬಂಗೇರ ಉಪಸ್ಥಿತರಿದ್ದರು.

Advertisement

ರಮೇಶ್‌ ಬಂಗೇರ ಸ್ವಾಗತಿಸಿದರು, ಎಚ್‌. ಭಾಸ್ಕರ ಸಾಲ್ಯಾನ್‌ ಪ್ರಸ್ತಾವನೆಗೈದರು, ಸಹ ಕಾರ್ಯದರ್ಶಿ ಹರೀಶ್‌ ಆರ್‌. ಅಮೀನ್‌ ವರದಿ ವಾಚಿಸಿದರು, ಚುನಾವಣಾಧಿಕಾರಿ ಶರತ್‌ಕುಮಾರ್‌ ಮತ್ತು ಬ್ರಿಜೇಶ್‌ಕುಮಾರ್‌ ಪರಿಚಯಿ ಸಿದರು. ನೂತನ ಕಾರ್ಯದರ್ಶಿ ರಾಜೇಶ್ವರೀ ರಾಮನಗರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next