Advertisement

ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆ: ಬಿರಾದಾರ

05:24 PM Sep 02, 2017 | Team Udayavani |

ಶಹಾಪುರ: ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಹೊರ ಸೂಸುವಲ್ಲಿ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಪ್ರತಿಭಾನ್ವಿತರು ರಾಜ್ಯ ಮಟ್ಟದವರೆಗೆ ಮಿಂಚಲಿ ಎಂದು ಡಯಟ್‌ನ ಉಪನಿರ್ದೇಶಕ ಶ್ರೀಶೈಲ
ಬಿರಾದಾರ ಹೇಳಿದರು.

Advertisement

ಜಿಪಂ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ
ಕಾರ್ಯಾಲಯ ವತಿಯಿಂದ ನಗರದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಪ್ರತಿಭಾ ಕಾರಂಜಿ ಒಂದಾಗಿದ್ದು, ಪಠ್ಯೇತರ ಚಟುವಟಿಕೆಗೆ ಒಂದು
ಭೂಮಿಕೆಯಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಉಳಿಸಿ ಬೆಳೆಸುವಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ. ಪ್ರಾಥಮಿಕ ವಿಭಾಗದಿಂದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ
ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಂತಾಗಿದೆ. ಮಕ್ಕಳು ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ
ಪ್ರತಿಭೆಗಳಿಗೆ ಮನ್ನಣೆ ಸಿಕ್ಕಾಗ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಕೆ. ಪಾಟೀಲ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡಾಕೂಟ, ಪ್ರತಿಭಾ ಕಾರಂಜಿ ಸೇರಿದಂತೆ ಪ್ರತಿಯೊಂದರಲ್ಲಿ
ಭಾಗವಹಿಸುವ ಮೂಲಕ ನಿಮ್ಮಲ್ಲಿ ಅಡಗಿದ ಸುಪ್ತ ಪ್ರತಿಭೆ ಹೊರಸೂಸುವ ಮೂಲಕ ಪಾಲಕರ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಬೇಕು. ನಮ್ಮ ತಾಲೂಕಿನ ಪ್ರತಿಭೆಗಳು ಒಂದೆಡೆ ಕಾಣುತ್ತಿರುವುದು ಅವರಲ್ಲಿ ಉತ್ಸಾಹ
ಮತ್ತು ಶಿಕ್ಷಕರ ಪರಿಶ್ರಮ ಎದ್ದು ಕಾಣುತ್ತಿದೆ ಎಂದರು.

ಜಿಪಂ ಸದಸ್ಯ ಭೀಮಾಬಾಯಿ ಎಂ. ಪೂಜಾರಿ, ಶರಣಮ್ಮ ಕಾಶೀರಾಜ, ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿ ಕಾರಿ
ವೆಂಕಯ್ಯ, ಕ್ಷೇತ್ರ ಸಮನ್ವಯ ಅಧಿಕಾರಿ ಸಿದ್ದಣ್ಣ ಮಾನಸುಣಗಿ, ಶಿಕ್ಷಕರ ಸಂಘದ ಬೀಮಣ್ಣಗೌಡ, ನೌಕರರ ಸಂಘದ ಸುಧಾಕರ ಗುಡಿ, ಬಸವರಾಜ ಯಾಳಗಿ, ಚಂದಪ್ಪ ಇತರರು ಇದ್ದರು.

Advertisement

ಶಿಕ್ಷಣ ಸಂಯೋಜಕ ಲಾಲ ಅಹ್ಮದ ನಿರೂಪಿಸಿದರು. ಬಿ.ಆರ್‌.ಪಿ ರಾಮಣ್ಣ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next