Advertisement
ಹೊಸ ಫೋನ್ ಕೊಳ್ಳಬೇಕು. ಯಾವುದು ಚೆನ್ನಾಗಿದೆ ಎಂಬುದು ಹಲವರ ಪ್ರಶ್ನೆ. ಸಾಮಾನ್ಯವಾಗಿ ಹೆಚ್ಚಿನವರು ಕೇಳುವುದು 12 ರಿಂದ 15 ಸಾವಿರದೊಳಗಿರಲಿ ಎಂದೇ. ಭಾರತೀಯ ಮಧ್ಯಮ ವರ್ಗದ ಜನರು ಮೊಬೈಲ್ ಕೊಳ್ಳುವಾಗ ಸಾಮಾನ್ಯವಾಗಿ ಈ ಬಜೆಟ್ ನಲ್ಲೇ ಕೊಳ್ಳುತ್ತಾರೆ. ಸ್ಮಾರ್ಟ್ ಫೋನ್ ವಿಚಾರದಲ್ಲಿ ಇದೊಂಥರ ಸುರಕ್ಷಾ ವಲಯದ ಬಜೆಟ್ ಎನ್ನಬಹುದು. 10 ಸಾವಿರಕ್ಕಿಂತ ಕೆಳಗಿನ ಬಜೆಟ್ ಫೋನ್‌ಗಳಲ್ಲಿ ಆಂತರಿಕ ಸಂಗ್ರಹ ಸಾಮರ್ಥ್ಯ, ರ್ಯಾಮ್, ಕ್ಯಾಮರಾ ಗುಣಮಟ್ಟ ಎಲ್ಲವೂ ಕಡಿಮೆಯಿರುತ್ತವೆ. 20-30 ಸಾವಿರಕ್ಕಿಂತ ಮೇಲ್ಪಟ್ಟ ಬೆಲೆಯ ಮೊಬೈಲ್‌ಗಳು ಸಾಮಾನ್ಯ ಬಳಕೆದಾರನಿಗೆ ಅಗತ್ಯವಿಲ್ಲ. ಕರೆ ಮಾಡಲು, ವಾಟ್ಸಪ್ ಬಳಸಲು, ಫೇಸ್‌ಬುಕ್, ಯೂಟ್ಯೂಬ್ ನೋಡಲು, ಅಗತ್ಯದ ಫೋಟೋಗಳನ್ನು ತೆಗೆಯಲು 15 ಸಾವಿರದ ರೇಂಜಿನ ಮೊಬೈಲ್ ಸಾಕೇ ಸಾಕು. ಮೊಬೈಲ್ ಕೆಳಗೆ ಬೀಳಿಸುವುದು, ನೀರಲ್ಲಿ ಬೀಳುವುದು (ನನ್ನ ಗೆಳೆಯರೊಬ್ಬರು 5-6 ತಿಂಗಳ ಹಿಂದೆ, ಕುದಿಯುತ್ತಿದ್ದ ಸಾಂಬಾರಿನಲ್ಲಿ ಮೊಬೈಲ್ ಬೀಳಿಸಿದ್ದರು! ಮೊಬೈಲ್‌ಗಾಗಿ 2 ನಿಮಿಷ ಹುಡುಕಿದಾಗ, ಸಾಂಬಾರಿನಲ್ಲಿ ಮೊಬೈಲ್ ಬಿದ್ದಿರುವುದು ತಿಳಿಯಿತು!. ಆದರೂ ಆ ಮೊಬೈಲ್ ಏನೂ ಆಗದೇ ಈಗಲೂ ಚೆನ್ನಾಗಿ ಕೆಲಸ ಮಾಡುತ್ತಿದೆ!) ಹೀಗಿರುವಾಗ ಹೆಚ್ಚು ದರದ ಮೊಬೈಲ್ ಕೊಂಡು ಹಾಳಾದರೆ ಹೊಟ್ಟೆ ಉರಿಯುತ್ತದೆ. ಹಾಗಾಗಿ 15 ಸಾವಿರದೊಳಗಿನ ಬಜೆಟ್‌ನಲ್ಲಿರುವ ಫೋನ್‌ಗಳಿಗೆ ಹೆಚ್ಚಿನವರು ಆದ್ಯತೆ ನೀಡುತ್ತಾರೆ.
Related Articles
Advertisement
ರೆಡ್‌ಮಿ ನೋಟ್ 6 ಪ್ರೊ: (ರೆಡ್‌ಮಿ 6 ಪ್ರೊ ಬೇರೆ, ರೆಡ್‌ಮಿ ನೋಟ್ 6 ಪ್ರೊ ಬೇರೆ ಎಂಬುದನ್ನು ಗಮನಿಸಿ.) 64+4 ಜಿಬಿ ಸಂಗ್ರಹ. 12 ಮೆ.ಪಿ. ಮತ್ತು 5 ಮೆಪಿ. ಡುಯಲ್ ಕ್ಯಾಮರಾ, 20 ಮೆ.ಪಿ. ಮತ್ತು 2 ಮೆ.ಪಿ. ಡುಯಲ್ ಸೆಲ್ಫೀ ಕ್ಯಾಮರಾ, ಸ್ನಾಪ್‌ಡ್ರಾಗನ್ 636 ಪ್ರೊಸೆಸರ್, 4000 ಎಂಎಎಚ್ ಬ್ಯಾಟರಿ, 6.26 ಇಂಚಿನ ಫುಲ್‌ಎಚ್‌ಡಿ ಪ್ಲಸ್ ಡಿಸ್‌ಪ್ಲೇ, ನಾಚ್ ಡಿಸೈನ್. ಅಂಡ್ರಾಯ್ಡ 8.1 ಓರಿಯೋ. ಮಿಯೂಐ ಓ.ಎಸ್. ದರ 14 ಸಾವಿರ ರೂ., ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯ.
ಆ್ಯಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ2: 64+4 ಜಿಬಿ ಸಂಗ್ರಹ. 12 ಮೆ.ಪಿ. ಮತ್ತು 5 ಮೆ.ಪಿ. ಹಿಂಬದಿ ಕ್ಯಾಮರಾ, 13 ಮೆಪಿ ಸೆಲ್ಫೀ ಕ್ಯಾಮರಾ, ಸ್ನಾಪ್‌ಡ್ರಾಗನ್ 660 ಪ್ರೊಸೆಸರ್. 5000 ಎಂಎಎಚ್ ಬ್ಯಾಟರಿ, 6.26 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, ನಾಚ್ ಡಿಸೈನ್, ಶುದ್ಧ ಆಂಡ್ರಾಯ್ಡ 8.1 ಓರಿಯೋ. 15 ಸಾವಿರ ರೂ., ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯ.
ರಿಯಲ್ ಮಿ 2 ಪ್ರೊ: 64+4 ಜಿಬಿ ಸಂಗ್ರಹ. 16 ಮೆ.ಪಿ. ಪ್ಲಸ್ 2 ಮೆ.ಪಿ. ಹಿಂಬದಿ ಮತ್ತು 16 ಮೆ.ಪಿ. ಮುಂಬದಿ ಕ್ಯಾಮರಾ. ಸ್ನಾಪ್‌ಡ್ರಾಗನ್ 660 ಪ್ರೊಸೆಸರ್, 3500 ಎಂಎಚ್ ಬ್ಯಾಟರಿ. 6.3 ಇಂಚಿನ ಎಫ್ಎಚ್‌ಡಿ, ವಾಟರ್ ಡ್ರಾಪ್ ಡಿಸೈನ್ ಡಿಸ್‌ಪ್ಲೇ, ಅಂಡ್ರಾಯ್ಡ ಓರಿಯೋ 8.1, ಕಲರ್ ಓ.ಎಸ್. ದರ 14 ಸಾವಿರ ರೂ. ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯ.
ಮೊಟೊರೊಲಾ ಒನ್ ಪವರ್: 64+4 ಜಿಬಿ ಸಂಗ್ರಹ. 16 ಮೆ.ಪಿ. ಪ್ಲಸ್ 5 ಮೆ.ಪಿ. ಹಿಂಬದಿ ಕ್ಯಾಮರಾ ಮತ್ತು 12 ಮೆ.ಪಿ. ಮುಂಬದಿ ಕ್ಯಾಮರಾ, ಸ್ನಾಪ್‌ಡ್ರಾಗನ್ 636 ಪ್ರೊಸೆಸರ್, 5000 ಎಂಎಎಚ್ ಬ್ಯಾಟರಿ, 6.2 ಇಂಚಿನ ಎಫ್ಎಚ್‌ಡಿ ಪ್ಲಸ್, ನಾಚ್ ಡಿಸ್‌ಪ್ಲೇ, ಆಂಡ್ರಾಯ್ಡ 9.0 ಪೈ. ದರ 15 ಸಾವಿರ ರೂ. ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯ.
ನೋಕಿಯಾ 6.1 ಪ್ಲಸ್: 64+4 ಜಿಬಿ ಸಂಗ್ರಹ. 16+5 ಮೆ.ಪಿ. ಹಿಂಬದಿಯ ಮತ್ತು 16 ಮೆ.ಪಿ. ಮುಂಬದಿಯ ಕ್ಯಾಮರಾ, ಸ್ನಾಪ್‌ಡ್ರಾಗನ್ 636 ಪ್ರೊಸೆಸರ್, 5.8 ಇಂಚಿನ ಎಫ್ಎಚ್‌ಡಿ ಪ್ಲಸ್ ನಾಚ್ ಡಿಸ್‌ಪ್ಲೇ, 3060 ಎಂಎಎಚ್ ಬ್ಯಾಟರಿ, ಅಂಡ್ರಾಯ್ಡ ಒನ್ ಓರಿಯೋ 8.1. ದರ 15 ಸಾವಿರ ರೂ. ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತದೆ.
ರಿಯಲ್ ಮಿ ಯು 1: 64+4 ಜಿಬಿ ಸಂಗ್ರಹ. 13+2 ಮೆ.ಪಿ. ಹಿಂಬದಿ ಕ್ಯಾಮರಾ, 25 ಮೆ.ಪಿ. ಮುಂಬದಿ ಕ್ಯಾಮರಾ, ಮೀಡಿಯಾ ಟೆಕ್ ಹೀಲಿಯೋ ಪಿ.70 ಪ್ರೊಸೆಸರ್, 3500 ಎಂಎಎಚ್ ಬ್ಯಾಟರಿ, ಫುಲ್ ಎಚ್‌ಡಿ ಎಲ್‌ಟಿಪಿಎಸ್, ವಾಟರ್‌ಡ್ರಾಪ್ ಡಿಸ್‌ಪ್ಲೇ, ಆಂಡ್ರಾಯ್ಡ 8.1 ಓರಿಯೋ ಕಲರ್ ಓಎಸ್. ದರ 14500 ರೂ. ಅಮೆಜಾನ್‌ನಲ್ಲಿ ಲಭ್ಯ.
ಆನರ್ 8 ಎಕ್ಸ್: 64+4 ಜಿಬಿ, 20+2 ಮೆ.ಪಿ. ಹಿಂಬದಿ ಕ್ಯಾಮರಾ, 16 ಮೆ.ಪಿ. ಸೆಲ್ಫೀ ಕ್ಯಾಮರಾ, ಕಿರಿನ್ 710 ಪ್ರೊಸೆಸರ್, 3750 ಎಂಎಚ್ಎಚ್ ಬ್ಯಾಟರಿ, 6.5 ಇಂಚಿನ ಎಫ್ಎಚ್‌ಡಿ ಪ್ಲಸ್, ಎಲ್‌ಟಿಪಿಎಸ್ ನಾಚ್ ಡಿಸ್‌ಪ್ಲೇ, ಆ್ಯಂಡ್ರಾಯ್ಡ ಓರಿಯೋ 8.1 ಇಎಂಯುಐ ಓಎಸ್. ದರ 15 ಸಾವಿರ ರೂ. ಅಮೆಜಾನ್ ನಲ್ಲಿ ಲಭ್ಯ.
ವಿವೋ ವಿ9 ಪ್ರೊ: 64+4 ಜಿಬಿ. ಸಂಗ್ರಹ. 13+2 ಮೆ.ಪಿ. ಹಿಂಬದಿ ಮತ್ತು 16 ಮೆ.ಪಿ. ಮುಂಬದಿ ಕ್ಯಾಮರಾ. ಸ್ನಾಪ್‌ಡ್ರಾಗನ್ 660 ಪ್ರೊಸೆಸರ್. 3260 ಎಂಎಎಚ್ ಬ್ಯಾಟರಿ, 6.3 ಇಂಚಿನ ಎಫ್ಎಚ್‌ಡಿ ಪ್ಲಸ್ ನಾಚ್ ಡಿಸ್ ಪ್ಲೇ, ಅಂಡ್ರಾಯ್ಡ 8.1 ಫನ್‌ಟಚ್ ಓ.ಎಸ್. 15 ಸಾವಿರ ರೂ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ. (ವಿವೋ ಫೋನೊಂದು 15 ಸಾವಿರ ರೂ.ಗಳೊಳಗೆ ಇಷ್ಟೆಲ್ಲ ಫೀಚರ್‌ಗಳಲ್ಲಿ ದೊರೆಯುತ್ತಿರುವುದು ಅಚ್ಚರಿಯ ಸಂಗತಿಯೇ. ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಮಾರಾಟಕ್ಕೆ ಬಿಟ್ಟಿರುವುದರಿಂದ ಈ ದರಕ್ಕೆ ದೊರಕುತ್ತಿದೆ. ಇದೇ ಫೋನು ಆಫ್ಲೈನ್ (ಅಂಗಡಿ) ಮಾರಾಟವಾಗಿದ್ದರೆ 20 ಸಾವಿರ ರೂ. ದರ ಇಡಲಾಗುತ್ತಿತ್ತು.
ಇವು 15 ಸಾವಿರದೊಳಗೆ ಈಗ ಭಾರತದಲ್ಲಿ ದೊರಕುತ್ತಿರುವ ಬೆಸ್ಟ್ ಫೋನ್‌ಗಳು. ಇವುಗಳಲ್ಲಿ ಯಾವುದನ್ನು ಕೊಂಡರೂ ನಿಮ್ಮ ಹಣಕ್ಕೆ ತಕ್ಕ ಮೌಲ್ಯದವು. ಬ್ಯಾಟರಿ, ಕ್ಯಾಮರಾ ಆದ್ಯತೆಗಳನ್ನು ನೋಡಿಕೊಂಡು ಇವುಗಳಲ್ಲಿ ಚಾಯ್ಸ ಮಾಡಿ. ಆಯ್ಕೆ ನಿಮ್ಮದು!•
•ಕೆ. ಎಸ್. ಬನಶಂಕರ ಆರಾಧ್ಯ