Advertisement

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

12:44 AM Apr 20, 2024 | Team Udayavani |

ಬೆಳ್ತಂಗಡಿ: ಈ ಚುನಾವಣೆ ನಮ್ಮ ಪಾಲಿಗೆ ಖಂಡಿತಾ ಸವಾಲು. ಬಹಳ ವರ್ಷಗಳಿಂದ ಜಿಲ್ಲೆ ಯಲ್ಲಿ ಕಾಂಗ್ರೆಸ್‌ಗೆ ಅವಕಾಶ ಸಿಕ್ಕಿಲ್ಲ. ಆದರೆ ಈ ಬಾರಿ ಕಾಂಗ್ರೆಸ್‌ ಅಲೆ ಇದ್ದು ಗೆಲ್ಲಲು ಉತ್ತಮ ಅವಕಾಶವಿದೆ. ಇದಕ್ಕೆ ಕಾರ್ಯಕರ್ತರ ಪ್ರಾಮಾಣಿಕ ಶ್ರದ್ಧೆ, ನಾಯಕರ ಒಗ್ಗಟ್ಟೇ ಶಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೀಳುಮಟ್ಟದ ದ್ವೇಷದ ರಾಜಕಾರಣದಿಂದ ಬಿಜೆಪಿ ರಾಮರಾಜ್ಯದ ಬದಲು ರಾವಣ ರಾಜ್ಯವನ್ನು ಸೃಷ್ಟಿಸುತ್ತಿದೆ. ಪ್ರಧಾನಿ ಮೋದಿ ಪಕ್ಷವನ್ನು ಬೆಳೆಸದೇ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರದಿಂದ ಮಧ್ಯಮ ವರ್ಗದ ಜನರಿಗೆ ಯಾವುದೇ ಅನುಕೂಲ ದೊರಕಿಲ್ಲ ಎಂದರು.

400ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಬಿಜೆಪಿಯವರ ಅಬ್ಬರದ ಪ್ರಚಾರದಿಂದ ಕಾಂಗ್ರೆಸ್‌ನ ಆತ್ಮಸ್ಥೈರ್ಯ ಕುಗ್ಗದು. ಈ ಬಾರಿ ಬಿಜೆಪಿ 200 ಸೀಟು ಗಳನ್ನೂ ಗೆಲ್ಲದು. ಪ್ರಧಾನಿ ಮೋದಿ ಕರ್ನಾಟಕದ ಸಮಸ್ಯೆಗಳ ಬಗ್ಗೆಯಾಗಲೀ, ರಾಜ್ಯಕ್ಕೆ ನೆರವು ನೀಡುವ ಬಗ್ಗೆ ಹೇಳುತ್ತಿಲ್ಲ. ಕೇವಲ ಭಾವನಾತ್ಮಕ ವಿಷ ಯಗಳಲ್ಲಿ ಭಾಷಣ ಮಾಡುತ್ತಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಮ್‌ ಮಾತನಾಡಿ, ಎ. 21ರಂದು ನನ್ನ ಬೂತ್‌ ನನ್ನ ಜವಾಬ್ದಾರಿ ಎಂಬ ಧ್ಯೇಯದೊಂದಿಗೆ ಕಾರ್ಯಕರ್ತರು ತಮ್ಮ ಬೂತ್‌ ಮಟ್ಟದ ಮನೆ ಮನೆ ಭೇಟಿ ಮಾಡಿ ರಾಜ್ಯ ಸರಕಾರದ ಗ್ಯಾರಂಟಿಗಳ ಬಗ್ಗೆ ಮತದಾರರಿಗೆ ವಿವರಿಸಲಿದ್ದಾರೆ ಎಂದರು.

ಪಡಿತರ ಚೀಟಿ ಸಮಸ್ಯೆಯಿಂದ ಗ್ಯಾರಂಟಿ ಯೋಜನೆ ಕೈತಪ್ಪಿದ್ದು, ಸರಿಪಡಿಸಬೇಕು. ಬಸವ ವಸತಿ, ಇಂದಿರಾ ಗಾಂಧಿ ವಸತಿ ಯೋಜನೆ ಲಭ್ಯವಾಗುವಂತೆ ಮಾಡಬೇಕು. ಆದಾಯ ಪಾವತಿದಾರ ಮನೆಮಂದಿಗೆ ಗೃಹಲಕ್ಷ್ಮಿ ಯೋಜನೆ ಸಿಗದಂತಾಗಿದ್ದು, ತಾಂತ್ರಿಕ ದೋಷ ಸರಿಪಡಿಸಬೇಕು ಎಂದು ಕಾರ್ಯಕರ್ತರು ಕೋರಿದರು.

Advertisement

ಬಳಿಕ ಸಚಿವರು ಲಾೖಲ ವೆಂಕಟರಮಣ ದೇವಸ್ಥಾನ, ಬೆಳ್ತಂಗಡಿ ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಯಿ, ಗುರುವಾಯನಕೆರೆಯ ಮಸೀದಿ ಸೇರಿದಂತೆ ತುಮಕೂರಿನಲ್ಲಿ ಕೊಲೆಯಾದ ಉಜಿರೆ ನಿವಾಸಿ ಮನೆಗೆ ಭೇಟಿ ನೀಡಿದರು. ಮಾಜಿ ಶಾಸಕ ಜೆ. ಆರ್‌.ಲೋಬೋ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next