ಕೋವಿಡ್ ತಂದಿಟ್ಟಿರುವಈ ಸಂಕಷ್ಟಕಾಲದಲ್ಲಿವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಲ್ಲಿ ಕೂರುವಂತಾಗಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಆರಂಭವಾಗುವ ಆನ್‌ಲೈನ್‌ಕ್ಲಾಸುಗಳು,ಕೆಲವರಿಗೆ 4 ಗಂಟೆ, ಕೆಲವರಿಗೆ 5 ಗಂಟೆಗಳ ಕಾಲ ನಡೆಯುತ್ತಿವೆ. ಕೆಲ ಮಕ್ಕಳು ಮೊಬೈಲ್ ಫೋನಿನಲ್ಲಿ, ಇನ್ನು ಕೆಲವರು ಲ್ಯಾಪ್‌ಟಾಪ್ ಮೂಲಕ ಆನ್‌ಲೈನ್ ಪಾಠವನ್ನು ಆಲಿಸುತ್ತಾರೆ, ವೀಕ್ಷಿಸುತ್ತಾರೆ. ಇಂಥ ಸಂದರ್ಭದಲ್ಲಿ ಹೊಸ ಲ್ಯಾಪ್ ಟಾಪ್ ಕೊಳ್ಳುವ ಸಲುವಾಗಿ ಪೋಷಕರು ಹುಡುಕಾಟ ನಡೆಸಿರುತ್ತಾರೆ.
ಕಡಿಮೆ ದರ, ಉತ್ತಮ ವೈಶಿಷ್ಟ್ಯವುಳ್ಳ ಅಂಥ ಒಂದು ಲ್ಯಾಪ್‌ಟಾಪ್ ಮಿ ನೋಟ್ ಬು ಕ್14 ಹಾರಿಝೋನ್. ಪೈಪೋಟಿಯ ದರದಲ್ಲಿ ಉತ್ತಮ ತಾಂತ್ರಿಕ ಅಂಶಗಳನ್ನು ಈ ಲ್ಯಾಪಾrಪ್ ಒಳಗೊಂಡಿವೆ. ಇದು ಮ್ಯಾಗ್ನಿಷಿಯಂ ಅಲ್ಯೂಮಿನಿಯಂ ಲೋಹದ ದೇಹ ಹೊಂದಿದೆ. ಸಾಮಾನ್ಯವಾಗಿ ಹೆಚ್ಚಿನ ಲ್ಯಾಪ್‌ಟಾಪ್‌ಗ್ಳು ಪ್ಲಾಸ್ಟಿಕ್ ದೇಹಹೊಂದಿರುತ್ತವೆ. ಇದು ಲೋಹದ ಕವಚ ಹೊಂದಿಯೂ ಕೇವಲ 1.4 ಕೆಜಿ ಮಾತ್ರ ತೂಕವಿದ್ದು, 14 ಇಂಚಿನ ಪರದೆ ಹೊಂದಿದೆ. ಲ್ಯಾಪ್ ಟಾಪ್‌ನ ಗಾತ್ರ ಎ4 ಅಳತೆಯಕಾಗದದಷ್ಟಿದೆ.
ಟೈಪಿಂಗ್ ಮಾಡಲು ಸುಲಭ : ಇದರ ಪರದೆ 14 ಇಂಚಿದ್ದು, ಶೇ.91ಶೇ.ರಷ್ಟು ಪರದೆ ಮತ್ತು ದೇಹದ ಅನುಪಾತ ಹೊಂದಿರುವುದರಿಂದ, ಅಳತೆಯಲ್ಲಿ ಇನ್ನಷ್ಟು ಚಿಕ್ಕದಾಗಿದೆ. ಪರದೆಯಿಂದ ಆಚೆಗೆ ಸಣ್ಣದಾದ ಅಂಚಷ್ಟೇ ಇದೆ. ಎಚ್‌ಡಿಎಂಐ ಪೋರ್ಟ್, ಒಂದು ಯುಎಸ್‌ಬಿ ಸಿ ಪೋರ್ಟ್, ಎರಡು ಯುಎಸ್‌ಬಿ 3.1 ಪೋರ್ಟ್, ಒಂದು ಯುಎಸ್‌ಬಿ 2.1 ಪೋರ್ಟ್ ಇದೆ.
10ನೇ ತಲೆಮಾರಿನ ಇಂಟೆಲ್ ಕೋರ್ ಐ7 ಪೊ›ಸೆಸರ್ ವೇಗವಾಗಿ ಕೆಲಸ ಮಾಡುತ್ತದೆ. ಕೇವಲ 10ರಿಂದ 15 ಸೆಕೆಂಡ್ ನಲ್ಲಿ ಆನ್ ಆಗುತ್ತದೆ. ಅಪ್ಲಿಕೇಷನ್‌ಗಳ ತೆರೆದುಕೊಳ್ಳುವಿಕೆ, ನೆಟ್ ಸರ್ಫಿಂಗ್, ಚಿತ್ರಗಳು, ವಿಡಿಯೊಗಳ ಓಪನ್, ಜಿಮೇಲ್ ಇತ್ಯಾದಿ ವೇಗವಾಗಿ ಕಾರ್ಯಾಚರಿಸುತ್ತವೆ. ಲ್ಯಾಪ್‌ಟಾಪ್ ವಿಂಡೋಸ್10 ಹೋಮ್ ಎಡಿಷನ್ ಹೊಂದಿದೆ. ಲ್ಯಾಪ್‌ಟಾಪ್‌ನ ಕೀಬೋರ್ಡ್‌ಗಳು ಬಹಳ ಅನುಕೂಲಕರವಾಗಿವೆ. ಬೆರಳುಗಳನ್ನಿಡುವ ಸ್ಥಳಾವಕಾಶ ತೃಪ್ತಿಕರವಾಗಿದೆ. ಹೀಗಾಗಿ ವೇಗವಾಗಿ ಟೈಪಿಂಗ್ ಮಾಡಲು ಸುಲಭ. ಆದರೆ ಟ್ರಾಫಿಕ್ ಪ್ಯಾಡ್ ಅಗಲ ಕಡಿಮೆ.
ಬ್ಯಾಟರಿ ಸಾಮರ್ಥ್ಯ ಚೆನ್ನಾಗಿದೆ : ಪರದೆ ಫುಳ್ ಎಚ್‌ಡಿ ಆಗಿದ್ದು ಚಿತ್ರ, ವಿಡಿಯೊಗಳು ಬಹಳ ಚೆನ್ನಾಗಿ ಕಾಣುತ್ತವೆ. ಪರದೆಯ ನೇರಕ್ಕೆ ನೋಡಿದರೆ ಮಾತ್ರ ಚಿತ್ರ ಕಾಣುತ್ತವೆ. ಅಚೀಚೆ ನೋಡಿದರೆ ಮಸುಕಾಗಿರುತ್ತದೆ. ಆದರೆ ಎಫ್ಎಚ್‌ಡಿ ಪರದೆಯಲ್ಲಿ ಆ ಸಮಸ್ಯೆಯಿಲ್ಲ. ಯಾವ ಕೋನದಲ್ಲಿ ನೋಡಿದರೂ ಚಿತ್ರ ಸ್ಪಷ್ಟವಾಗಿ ಶ್ರೀಮಂತವಾಗಿ ಕಾಣುತ್ತದೆ. ಇದರ ಬ್ಯಾಟರಿ ಸಾಮರ್ಥ್ಯ ಚೆನ್ನಾಗಿದೆ. 7ರಿಂದ 8 ಗಂಟೆಗಳ ಕಾಲ ಬರುತ್ತದೆ. ಡಿಟಿಎಸ್ ಆಡಿಯೋ ಸೌಲಭ್ಯ ಹೊಂದಿವೆ. ಮಿ ಕ್ವಿಕ್ ಶೇರ್ ಮೂಲಕ ಅಂಡ್ರಾಯx… ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್ ನಡುವೆ ಫೈಲ್‌ಗಳನ್ನು ಹಂಚಿ ಕೊಳ್ಳಬಹುದಾಗಿದೆ. ಅಂಚನ್ನು ಸಣ್ಣ ಮಾಡುವ ಉದ್ದೇಶದಿಂದ ವೆಬ್‌ಕ್ಯಾಮ್ ಅನ್ನು ಅಂತರ್ಗತವಾಗಿ ನೀಡಿಲ್ಲ.
– ಕೆ.ಎಸ್. ಬನಶಂಕರ ಆರಾಧ್ಯ