ಬರ್ಮಿಂಗ್‌ಹ್ಯಾಮ್: ಈ ಮ್ಯಾಚ್ ವಿನ್ನಿಂಗ್ ಸೆಂಚುರಿ ತನ್ನ ಕ್ರಿಕೆಟ್ ಬಾಳ್ವೆಯಲ್ಲೇ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ ಎಂಬುದಾಗಿ ಪಾಕಿಸ್ಥಾನದ ಬ್ಯಾಟ್ಸ್‌ಮನ್ ಬಾಬರ್ ಆಜಂ ಹೇಳಿದ್ದಾರೆ.
ಬುಧವಾರ ನ್ಯೂಜಿಲ್ಯಾಂಡ್ ಎದುರಿನ ಬರ್ಮಿಂಗ್‌ಹ್ಯಾಮ್ ಪಂದ್ಯದಲ್ಲಿ ಬಾಬರ್ 127 ಎಸೆತಗಳಿಂದ ಅಜೇಯ 101 ರನ್ ಮಾಡಿ ಪಾಕಿಸ್ಥಾನವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದ್ದರು (11 ಬೌಂಡರಿ).
“ಲಾಕಿ ಫರ್ಗ್ಯುಸನ್ ಅವರನ್ನು ಟಾರ್ಗೆಟ್ ಮಾಡುವುದು ನಮ್ಮ ಆರಂಭದ ಯೋಜನೆಯಾಗಿತ್ತು. ಮಿಚೆಲ್ ಸ್ಯಾಂಟ್ನರ್ ದಾಳಿಗೆ ಇಳಿದಾಗ ಇವರಿಗೆ ವಿಕೆಟ್ ಒಪ್ಪಿಸದಿರಲು ನಿರ್ಧರಿಸಿದೆವು. ಕೊನೆಯಲ್ಲಿ ಮತ್ತೆ ವೇಗಿಗಳು ದಾಳಿಗಿಳಿದಾಗ ಮೊತ್ತವನ್ನು ಸರಿದೂಗಿಸಿಕೊಳ್ಳುವ ಯೋಜನೆ ಹಾಕಿಕೊಂಡೆವು’ ಎಂದು ಬಾಬರ್ ಗೇಮ್‌ಪ್ಲ್ರಾನ್ ವಿವರಿಸಿದರು.
“ಪಾಕಿಸ್ಥಾನದ ಬೌಲರ್‌ಗಳು ಕರಾರುವಾಕ್ ದಾಳಿ ಮೂಲಕ ನಮ್ಮನ್ನು ಕಟ್ಟಿಹಾಕಿದರು ಎಂಬುದು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಪ್ರತಿಕ್ರಿಯೆ.
“ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್. ಇದು ಬ್ಯಾಟಿಂಗಿಗೆ ಕಠಿನವಾದ ಟ್ರ್ಯಾಕ್ ಆಗಿತ್ತು. ದ್ವಿತೀಯಾರ್ಧ ದಲ್ಲಂತೂ ಸಿಕ್ಕಾಪಟ್ಟೆ ತಿರುವು ಪಡೆಯುತ್ತಿತ್ತು. ಕೊನೆಯ ತನಕ
ಕ್ರೀಸ್‌ನಲ್ಲಿ ಉಳಿದು ನೂರು ಪ್ರತಿಶತ ಪ್ರದರ್ಶನ ನೀಡುವುದು ನನ್ನ ಯೋಜನೆ ಯಾಗಿತ್ತು’
-ಬಾಬರ್