ಶಿರಸಿ: ನಾನು ಎಂದಿಗೂ ಕವಿ, ಸಾಹಿತಿ ಆಗ್ತೀನಿ ಎಂದುಕೊಂಡಿರಲಿಲ್ಲ ಎಂದು ಹಿರಿಯ ಸಾಹಿತಿ, ಕವಿ ಅಬ್ದುಲ್ ರಶೀದ್ ಮನಬಿಚ್ಚಿ ಹೇಳಿದರು.
ವಿಶ್ವ ವಿದ್ಯಾಲಯದಲ್ಲಿ ಮಾತ್ರ ಜ್ಞಾನ ಇದೆ ಎಂದುಕೊಂಡು ಜ್ಞಾನವಂತರು ಗುಂಪು ಮಾಡಿಕೊಂಡು ಚರ್ಚೆ ನಡೆಸುತ್ತಾರೆ. ಇದರಿಂದ ಲೇಖಕರು ಅಲ್ಪ ಸಂಖ್ಯಾತರಾಗಿ ಜಗತ್ತಿನಲ್ಲಿ ಹಾಸ್ಯಾಸ್ಪದ ಆಗುವ ಸಾಧ್ಯತೆ ಇದೆ. ಬದುಕು ಪುಸ್ತಕ, ಗ್ರಂಥಾಲಯಗಳಲ್ಲಿ ಇರಲ್ಲ. ಪ್ರಪಂಚ ಬೇರೆನೇ ಇದೆ ಎಂಬ ಆತಂಕ ಉಂಟಾಗುತ್ತದೆ. ನಾವು ಕಂಡ ಪ್ರಪಂಚವನ್ನು ತೋರಿಸಿ ಮುಚ್ಚುಮರೆ ಇಲ್ಲದೇ ಬರೆದಾಗ ಉತ್ತಮ ಕಥೆಗಾರ ಆಗಬಹುದು ಎಂದರು.
ಸಾಹಿತಿ ಡಾ| ರಾಜೇಂದ್ರ ಚೆನ್ನಿ, ಬ್ರಿಟಿಷ್ ಮಾದರಿಯ ಶಿಕ್ಷಣದಿಂದ ಸರಳ ಸತ್ಯಗಳನ್ನು ನಾವು ಮರೆಯುತ್ತಿದ್ದೇವೆ. ಕನ್ನಡಕ್ಕೆ ಗಡಿ ರೇಖೆ ಎಂಬುದಿಲ್ಲ. ಹಲವರು ಆಧುನಿಕ ಶಿಕ್ಷಣದ ಸ್ವಾತಂತ್ರ್ಯವನ್ನು ಬಳಸಿಕೊಂಡು ಕನ್ನಡವನ್ನು ನಿರ್ಲಕ್ಷಿಸುವ ಕಾರ್ಯ ಆಗುತ್ತಿದೆ. ಕನ್ನಡ ಬರಹಗಾರನ್ನು ಕನ್ನಡಕ್ಕೆ ಮಾತ್ರ ಸೀಮಿತಗೊಳಿಸಿ ಅವರನ್ನು ಕುಬ್ಜಗೊಳಿಸಿ ನಾವೂ ಕುಬ್ಜರಾಗಿದ್ದೇವೆ. ಕನ್ನಡ ಹಳಸಲು ವಾಸನೆ ತುಂಬಿದ ಹಳೆಯ ಬಾವಿ ಎಂದಿಗೂ ಅಲ್ಲ ಎಂದೂ ಹೇಳಿದರು.
ಸಿ.ಆರ್. ಶಾನಭಾಗ್ ಸ್ವಾಗತಿಸಿದರು. ಬಿಎಚ್ಶ್ರೀ ಶಿಕ್ಷಣ ಪ್ರಶಸ್ತಿಯನ್ನು ಪ್ರಜ್ವಲ ಶೇಟ್ ಅವರಿಗೆ ನೀಡಲಾಯಿತು. ಡಾ| ಎಂ.ಜಿ. ಹೆಗಡೆ ಮಾತನಾಡಿದರು. ಕಿರಣ ಭಟ್ಟ ನಿರ್ವಹಿಸಿಸಿದರು. ರಾಜಶೇಖರ ಹೆಬ್ಟಾರ ವಂದಿಸಿದರು.
Advertisement
ನಗರದಲ್ಲಿ ಬಿಎಚ್ ಶ್ರೀಧರ ಸಾಹಿತ್ಯ ಸಮಿತಿ ನೀಡುವ ಬಿಎಚ್ಶ್ರೀ ಸಾಹಿತ್ಯ ಪ್ರಶಸ್ತಿಯನ್ನು ಮಂಗಳವಾರ ಸ್ವೀಕರಿಸಿ ಅವರು ಮಾತನಾಡಿದರು. ಬಾಲ್ಯದಲ್ಲಿ ಶಿಕ್ಷಕರಿಂದ ಪ್ರೋತ್ಸಾಹ ಸಿಕ್ಕಿದೆ. ಕವನ ಬರೆದರೆ ಜನ ಇಷ್ಟ ಪಡುತ್ತಾರೆ ಎಂಬುದನ್ನು ಅರಿತುಕೊಂಡೆ. ನಾವು ಬರೆದಿದ್ದು ನಮಗೆ ತೃಪ್ತಿ ನೀಡಬೇಕು. ಆಗ ಜನಕ್ಕೂ ನಮ್ಮ ಬರಹ ಇಷ್ಟವಾಗುತ್ತದೆ. ಅತ್ಯುತ್ತಮ ಪುಸ್ತಕಗಳನ್ನು ಓದುವುದೂ ಭಾಗ್ಯ. ನಾವು ಬರೆದ್ದರ ಬಗ್ಗೆ ನಮಗೇ ಅತೃಪ್ತಿ ಇದ್ದರೆ ಓದುವ ಮನೋಭಾವ ಬೆಳೆಯುತ್ತದೆ ಎಂದ ಅವರು, ಸಾಮಾನ್ಯ ವ್ಯಕ್ತಿಯಲ್ಲೂ ಜ್ಞಾನ, ಸಾಹಿತ್ಯ ಜ್ಞಾನ ಇರುತ್ತದೆ ಎಂದರು.
Related Articles
Advertisement