ಉಡುಪಿ: ಬೆರ್ಮಣ್ಣೆ ವ್ಯಕ್ತಿಯಲ್ಲ ಅವರೊಬ್ಬ ಸಮಾಜದ ಶಕ್ತಿಯಾಗಿದ್ದಾರೆ. ಸೇವಾ ಮನೋಧರ್ಮ ಮತ್ತು ತ್ಯಾಗದಿಂದ ಆದರ್ಶಮಯ ಜೀವನವನ್ನು ನಡೆಸಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಅವರ ಜೀವನ ಶೈಲಿ ನಮಗೆಲ್ಲರಿಗೆ ಮಾದರಿಯಾಗಿದೆ ಎಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಮಾಜಿ ಅಧ್ಯಕ್ಷ ದಯಾನಂದ ಬಂಗೇರ ಹೇಳಿದರು.
ಶನಿವಾರ ಕಟಪಾಡಿ ನಿತ್ಯಾನಂದ ಸಭಾಗೃಹದಲ್ಲಿ ನಡೆದ ಮುಂಬಯಿ ಪ್ರಸಿದ್ಧ ಉದ್ಯಮಿ ಬೆರ್ಮು ಕೃಷ್ಣ ಪೂಜಾರಿ ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿ ನುಡಿ ನಮನ ಸಲ್ಲಿಸಿದರು.
ಉದ್ಯಾವರ ನಾರಾಯಣಗುರು ಮಂದಿರದ ಅರ್ಚಕ ಲೋಕನಾಥ್ ಶಾಂತಿ, ಊರಿನ ಪ್ರಮುಖರಾದ ದೇವಪ್ಪ ಪೂಜಾರಿ, ರಾಮಚಂದ್ರ ಕಿದಿಯೂರು ಅವರು ಮಾತನಾಡಿ ಬೆರ್ಮು ಪೂಜಾರಿ ಅವರ ತ್ಯಾಗ ಸೇವೆ, ಮತ್ತು ಕರ್ತವ್ಯ ಬದ್ಧªತೆ, ಎಲ್ಲರನ್ನು ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ರೀತಿ ಅಪಾರವಾದುದು. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಬೆರ್ಮು ಪೂಜಾರಿ ಅವರ ಪತ್ನಿ ಮೀರಾ ಪೂಜಾರಿ, ಮಕ್ಕಳಾದ ಗಣೇಶ್, ರಮೇಶ್, ಸುರೇಶ್, ಸವಿತಾ ತಾರಾನಾಥ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಕೋಟ್ಯಾನ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.