Advertisement

ತೀವ್ರ ವಿರೋಧ; ಡಬ್ಬಿಂಗ್ ಸಿನಿಮಾ ಸತ್ಯದೇವ್ IPS ರಿಲೀಸ್ ರದ್ದು

12:09 PM Mar 03, 2017 | Sharanya Alva |

ಬೆಂಗಳೂರು:ತಮಿಳಿನಿಂದ ಕನ್ನಡಕ್ಕೆ ಡಬ್ಬಿಂಗ್ ಆದ ಸತ್ಯದೇವ್ ಐಪಿಎಸ್ ಸಿನಿಮಾ ಪ್ರದರ್ಶನಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಚಿತ್ರ ರಿಲೀಸ್ ಆಗಿಲ್ಲ.

Advertisement

ಫಿಲ್ಮ್ ಚೇಂಬರ್ ಎದುರು ಕನ್ನಡ ಸಂಘಟನೆಗಳು ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ. ಸತ್ಯದೇವ್ ಐಪಿಎಸ್ ಚಿತ್ರದ ಪೋಸ್ಟರ್ ಗಳನ್ನು ಹರಿದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಮಂಗಳೂರಿನಲ್ಲಿ ಸತ್ಯದೇವ್ ಐಪಿಎಸ್ ಬಿಡುಗಡೆ ಆಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ. ಒಂದು ವೇಳೆ ಡಬ್ಬಿಂಗ್ ಚಿತ್ರ ರಿಲೀಸ್ ಮಾಡಿದ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ನಟ ಜಗ್ಗೇಶ್, ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರು, ಚಿತ್ರದುರ್ಗ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಎಲ್ಲಿಯೂ ಸತ್ಯದೇವ್ ಐಪಿಎಸ್ ಸಿನಿಮಾ ಬಿಡುಗಡೆ ಆಗಿಲ್ಲ.  ತಮಿಳಿನ ಎನ್ನೈ ಅರಿಂದಾಲ್ ಸಿನಿಮಾದ ಕನ್ನಡ ಡಬ್ಬಿಂಗ್ ಸತ್ಯದೇವ್ ಐಪಿಎಸ್. 

ಬೆಂಗಳೂರಿನಲ್ಲಿ  “ಸತ್ಯದೇವ್‌ ಐಪಿಎಸ್‌’ ಇಲ್ಲ!
ಶುಕ್ರವಾರ ಬಿಡುಗಡೆಯಾಗಬೇಕಿದ್ದ “ಸತ್ಯದೇವ್‌ ಐಪಿಎಸ್‌’ ಚಿತ್ರವು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿಲ್ಲ. ಬೆಂಗಳೂರನ್ನು ಹೊರತುಪಡಿಸಿ, ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ನಟರಾಜ ಅಥವಾ ಸಂಪಿಗೆ ಚಿತ್ರಮಂದಿರಗಳಲ್ಲಿ  ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗಾಗಲೇ ಅಲ್ಲಿ ತಮಿಳು ಚಿತ್ರವೊಂದು ಬಿಡುಗಡೆಯಾಗುತ್ತಿರುವುದರಿಂದ, “ಸತ್ಯದೇವ್‌ ಐಪಿಎಸ್‌’ ಚಿತ್ರದ ಬಿಡುಗಡೆಯನ್ನು ಬೆಂಗಳೂರಿನಲ್ಲಿ ಮುಂದೂಡಲಾಗಿದೆ.

Advertisement

ಈ ಕುರಿತು ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, “ಇಂದು
ಡಬ್ಬಿಂಗ್‌ ಚಿತ್ರ “ಸತ್ಯದೇವ್‌ ಐಪಿಎಸ್‌’ ಸುಮಾರು 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಕಾನೂನಿನಲ್ಲೇ ಅವಕಾಶವಿದೆ. ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯಲು
ಪೊಲೀಸರ ಸಹಕಾರ ಪಡೆಯುತ್ತಿದ್ದೇವೆ.

ಬೆಂಗಳೂರಿನಲ್ಲಿ ನಾವು ಕೇಳಿದ ಚಿತ್ರಮಂದಿರದಲ್ಲಿ ಈಗಾಗಲೇ ತಮಿಳು ಚಿತ್ರವೊಂದು
ಬಿಡುಗಡೆಯಾಗಿರುವುದರಿಂದ ನಮಗೆ ಇಲ್ಲಿ ಚಿತ್ರಮಂದಿರ ಸಿಕ್ಕಿಲ್ಲ. ಆ ಬಗ್ಗೆ ಪ್ರಯತ್ನಿಸುತ್ತಿದ್ದೇವೆ’
ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next