Advertisement
ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ ವಲಯ) ರಮಣ್ ಗುಪ್ತಾ ಅವರು ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ‘ರಾತ್ರಿ 1.30 ರ( ಭಾನುವಾರ,ಆ.18 ) ವೇಳೆಗೆ ಪಾರ್ಟಿ ಮುಗಿಸಿಕೊಂಡುಹೋಗುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಅಪರಿಚಿತ ಬೈಕರ್ ಬಳಿ ಡ್ರಾಪ್ ನೀಡಲು ಕೇಳಿಕೊಂಡಿದ್ದಾಳೆ. ಆತ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಕೃತ್ಯ ಎಸಗಿದ್ದಾನೆ. ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಹೊರ ರಾಜ್ಯದ ವಿದ್ಯಾರ್ಥಿನಿ ಕೋರಮಂಗಲದಲ್ಲಿ ಗೆಟ್ ಟುಗೆದರ್ ಮುಗಿಸಿ ಹೆಬ್ಬಗೋಡಿಗೆ ಮನೆಗೆ ಮರಳುತ್ತಿದ್ದಳು. ಆಕೆ ಲಿಫ್ಟ್ ಕೇಳಿದಾಗ ವ್ಯಕ್ತಿಯೊಬ್ಬ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿ ಆಕೆಯ ಮೇಲೆ ಅ*ತ್ಯಾಚಾರ ಎಸಗಿದ್ದಾನೆ. ನಾವು ಅ*ತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ” ಎಂದು ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
Related Articles
Advertisement
ಬಿಜೆಪಿ ಖಂಡನೆಘಟನೆಯನ್ನು ಬಿಜೆಪಿ ಖಂಡಿಸಿದ್ದು ” ಆ ದಿನಗಳ ಕೊತ್ವಾಲ್ ಶಿಷ್ಯಂದಿರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರಿನಲ್ಲಿ ಸಕ್ರೀಯರಾಗಿದ್ದಾರೆ. ಕೊಲ್ಕತಾ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ರಾಜ್ಯದಲ್ಲಿ ವೈದ್ಯರು ಬೃಹತ್ ಹೋರಾಟ ಕೈಗೊಂಡ ಸಮಯದಲ್ಲಿ ಈ ಪರಿ ರಾಜಧಾನಿ ಬೆಂಗಳೂರಿನಲ್ಲಿ ಯುವತಿಯ ಅತ್ಯಾಚಾರವಾಗಿದೆ ಎಂದರೆ,ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಅರಾಜಕತೆ ಸೃಷ್ಟಿಸಿರುವುದೇ ಕಾರಣ.ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮರ್ಥ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯತೆ ಇಲ್ಲ.ಪ್ರಜಾಪ್ರಭುತ್ವ, ಸಂವಿಧಾನ, ಕಾನೂನಿಗೆ ಬೆಲೆ ಕೊಡದ ಕಾಂಗ್ರೆಸ್ಸಿನಿಂದ ರಾಜ್ಯದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಸಿಗಲು ಸಾಧ್ಯವೇ ಇಲ್ಲ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದೆ.