Advertisement

ಇತಿಹಾಸ ಬರೆದ ಘಟಾನುಘಟಿ ಅಖಾಡ

10:18 AM Apr 06, 2019 | Vishnu Das |

ಬೆಂಗಳೂರು: ರಾಜಕೀಯ ಪಕ್ಷಗಳ ಪಾಲಿಗೆ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಒಂದು ಪ್ರಯೋಗ ಶಾಲೆ. 1977ರಿಂದ ಈವರೆಗೆ ಜನತಾ ಪಕ್ಷ ಸೇರಿದಂತೆ ಮೂರು ಪ್ರಮುಖ ಪಕ್ಷಗಳು ಒಂದಿಲ್ಲೊಂದು ಅವಧಿಯಲ್ಲಿ ಹೊಸ ಮುಖಗಳನ್ನು ಇಲ್ಲಿ ಪರಿಚಯಿಸುತ್ತಲೇ ಬಂದಿವೆ.

Advertisement

ತಮ್ಮ ಅಭ್ಯರ್ಥಿಗಳ ಗೆಲುವಿನ ನಡುವೆಯೂ ರಾಜಕೀಯ ಪಕ್ಷಗಳು ಹೊಸ ಮುಖಗಳೊಂದಿಗೇ ಅಖಾಡಕ್ಕೆ ಇಳಿದಿರುವುದು ಇಲ್ಲಿನ ವಿಶೇಷ. 1977ರಲ್ಲಿ ಮೊದಲ ಬಾರಿಗೆ ಇಲ್ಲಿಂದ ಆಯ್ಕೆಯಾದವರು ಭಾರತೀಯ ಲೋಕದಳದ ಕೆ.ಎಸ್‌. ಹೆಗ್ಡೆ. ತದನಂತರ 1980ರಲ್ಲಿ ಜನತಾ ಪಕ್ಷದಿಂದ ಅತ್ಯಂತ ಸರಳಜೀವಿ ಟಿ.ಆರ್‌.ಶಾಮಣ್ಣ ಮತ್ತು 1984ರಲ್ಲಿ ವಿ.ಕೃಷ್ಣ ಅಯ್ಯರ್‌ ಲೋಕಸಭೆಗೆ ಚುನಾಯಿತರಾದರು. ಇದಾದ ನಂತರ ಮೊದಲ ಸಲ ಇಲ್ಲಿ ಕಾಂಗ್ರೆಸ್‌ ಗೆಲುವಿನ ಸವಿ ಉಂಡಿತು. 1989ರಲ್ಲಿ ಮಾಜಿ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಆ ಗೆಲುವು ತಂದುಕೊಟ್ಟರು. ಆದರೆ, ಇದಾಗಿ ಎರಡೇ ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ಇಲ್ಲಿನ ಮತದಾರರು ಕಾಂಗ್ರೆಸ್‌ಗೆ “ಕೈ’ ಕೊಟ್ಟರು. ಆಗ
ಮೊದಲ ಸಲ ಕಮಲ ಅರಳಿತು.

ಅಪರಿಚಿತ ಅಭ್ಯರ್ಥಿ ಅರ್ಥಶಾಸOಉಜ್ಞ ಪ್ರೊ. ವೆಂಕಟಗಿರಿಗೌಡ ಆ ಅಚ್ಚರಿ ಫ‌ಲಿತಾಂಶಕ್ಕೆ ಕಾರಣರಾದರು. ಇಲ್ಲಿಂದ ಬಿಜೆಪಿ ವಿಜಯ ಯಾತ್ರೆ ಆರಂಭವಾಯಿತು. 1996ರಲ್ಲಿ ಹೊಸ ಮುಖ, 37ರ ಹರೆಯದ ಅನಂತಕುಮಾರ್‌ ಅವರನ್ನು ಬಿಜೆಪಿ ಅಖಾಡಕ್ಕಿಳಿಸಿತು. ಅಂತಹದ್ದೇ ಮತ್ತೂಂದು ಪ್ರಯೋಗ ಈಗ ತೇಜಸ್ವಿ ಸೂರ್ಯ ರೂಪದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಹೀಗೆ ಮೂಲತಃ ಜನತಾ ಪರಿವಾರದ ತೆಕ್ಕೆಯಲ್ಲಿದ್ದ ಈ ಕ್ಷೇತ್ರ, ಆ ಪಕ್ಷ ಇಬ್ಭಾಗವಾದ ನಂತರ ಕಾಲಕ್ರಮೇಣ ಬಿಜೆಪಿ ಮಡಿಲು ಸೇರಿತು. ಮೊದಲ ಐದು ಅವಧಿಯಲ್ಲಿ ಹೊಸ ಮುಖಗಳೇ ಇಲ್ಲಿ ಗೆಲುವು ಸಾಧಿಸಿದ್ದವು. 1996ರಿಂದ ಅನಂತಕುಮಾರ್‌ ನಿರಂತರವಾಗಿ ಆಯ್ಕೆಯಾಗುತ್ತಾ ಬಂದರು. ಈ ಮಧ್ಯೆ ಕೈತಪ್ಪಿದ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಲು ಕಾಂಗ್ರೆಸ್‌ ಕೂಡ ನಿರಂತರವಾಗಿ ಪ್ರಯೋಗ ನಡೆಸುತ್ತಲೇ ಇದೆ. ಇದಕ್ಕೆ ಪೂರಕವಾಗಿ ಹಳೆಯ ಮುಖವನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ 80ರ ದಶಕದಲ್ಲಿ ಅತ್ಯಂತ ಉಚ್ಛಾ†ಯ ಸ್ಥಿತಿಯಲ್ಲಿದ್ದರು. ಕ್ಷೇತ್ರಕ್ಕೆ ಪರಿಚಿತ ಮುಖವಾಗಿದ್ದು, ಕಾಂಗ್ರೆಸ್‌ನ ಹೈಕಮಾಂಡ್‌ ಜತೆ ಉತ್ತಮ ಬಾಂಧವ್ಯ ಹೊಂದಿದವರು. ಹಾಗಾಗಿ, ಬೆಂಗಳೂರು ದಕ್ಷಿಣದಲ್ಲಿರುವ ಆ ಪಕ್ಷದ ನಾಯಕರು ಕೂಡ ಹರಿಪ್ರಸಾದ್‌ರನ್ನು ಶತಾಯಗತಾಯ ಗೆಲ್ಲಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ತೇಜಸ್ವಿನಿ ಅನಂತಕುಮಾರ್‌ ಅವರನ್ನು ಕೈಬಿಟ್ಟು, ಹೊಸ ಮುಖಕ್ಕೆ ಮಣೆ ಹಾಕಿದ ಬಗ್ಗೆ ಬಿಜೆಪಿ ಹಿರಿಯ ಮುಖಂಡರಲ್ಲಿ ತುಸು ಅಸಮಾಧಾನವಿದೆ. ಈ ಬಂಡಾಯದ ಬಿಸಿಯ ಲಾಭ ಪಡೆಯಲು ಕಾಂಗ್ರೆಸ್‌ ತಂತ್ರ ಹೆಣೆಯುತ್ತಿದೆ. ಮೂಲ ಬೆಂಗಳೂರಿಗರು, ಸುಶಿಕ್ಷಿತರು ಮತ್ತು ವ್ಯಾಪಾರಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಪ್ರಯೋಗಗಳು ನಡೆಯಲು ಇದು ಕೂಡ ಕಾರಣ ಎನ್ನಲಾಗಿದೆ. ಒಕ್ಕಲಿಗರು ಮತ್ತು ಬ್ರಾಹ್ಮಣರೂ ಅಧಿಕ ಸಂಖ್ಯೆಯಲ್ಲಿದ್ದಾರೆ.

ಪ್ರಸಿದ್ಧರು ಸ್ಪರ್ಧಿಸಿದ್ದ ಕ್ಷೇತ್ರ
ಮೊದಲಿನಿಂದಲೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಘಟಾನುಘಟಿಗಳ ಅಖಾಡ. ಇಲ್ಲಿಂದ ಆರ್‌.ಗುಂಡೂರಾವ್‌, ವರಲಕ್ಷ್ಮೀ
ಗುಂಡೂರಾವ್‌, ಟಿ.ಆರ್‌.ಶಾಮಣ್ಣ, ಕೃಷ್ಣ ಅಯ್ಯರ್‌, ರಾಮಕೃಷ್ಣ ಹೆಗಡೆ, ಅನಂತನಾಗ್‌, ಎಚ್‌. ಎಂ. ನಂಜೇಗೌಡ, ಸುಬ್ಟಾರೆಡ್ಡಿ (ವಿಧಾನಸಭಾ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧೆ) ಸ್ಪರ್ಧಿಸಿದ್ದರು.

90ರ ದಶಕದಲ್ಲೇ ಬಿಜೆಪಿ ಬೇರು 1991ರಲ್ಲಿ  ಇಡೀ ಕರ್ನಾಟಕದಲ್ಲಿ ಬಿಜೆಪಿ ಕೇವಲ ನಾಲ್ಕು ಸೀಟುಗಳನ್ನು ಗೆದ್ದಿತ್ತು. ಆ ನಾಲ್ಕರಲ್ಲಿ ಬೆಂಗಳೂರು ದಕ್ಷಿಣ ಕೂಡ ಒಂದಾಗಿತ್ತು. ಇದು ಆ ಕ್ಷೇತ್ರದಲ್ಲಿ ಬಿಜೆಪಿ ಹೊಂದಿರುವ ಹಿಡಿತಕ್ಕೆ ಉದಾಹರಣೆ.

Advertisement

ಐತಿಹಾಸಿಕ ಸಮಾವೇಶಕ್ಕೆ ವೇದಿಕೆ
ರಾಷ್ಟ್ರೀಯ ನಾಯಕರು ಅದರಲ್ಲೂ ವಿಶೇಷವಾಗಿ ಪ್ರತಿಪಕ್ಷದ ನಾಯಕರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಕ್ಷೇತ್ರವೂ ಬೆಂಗಳೂರು ದಕ್ಷಿಣವಾಗಿತ್ತು. ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ ಅಂತಹ ಹತ್ತು ಹಲವು ಐತಿಹಾಸಿಕ ಸಮಾವೇಶಗಳಿಗೆ ವೇದಿಕೆ ಕಲ್ಪಿಸಿದೆ. ಒಮ್ಮೆ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಇಲ್ಲಿ ಸಮಾವೇಶ ನಡೆಸಿದಾಗ ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಕೆ.ಜಾಫ‌ರ್‌ ಷರೀಫ್ ಸಹ ಸಭಿಕರ ಸಾಲಿನಲ್ಲಿ ಬಂದು ಕುಳಿತು ಭಾಷಣ ಕೇಳಿದ್ದರು!

ಪ್ರಣಾಳಿಕೆಯಲ್ಲಿ ಅನಂತಕುಮಾರ್‌ ಹೇಳಿದ್ದೇನು?
ಮಾಜಿ ಸಂಸದ ಅನಂತಕುಮಾರ್‌ 2014ರಲ್ಲಿ “ನನ್ನ ಕನಸು’ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದರು. ಅದರಲ್ಲಿ ಹಿಂದಿನ ಸಾಧನೆಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಮುಖ್ಯವಾಗಿ ಉಪನಗರ ರೈಲು, ಹಸಿರು ಬೆಂಗಳೂರು, ಮೆಟ್ರೋ ಯೋಜನೆ ಕುರಿತು ಹೇಳಿದ್ದರು. ಉಪನಗರ ರೈಲು ಯೋಜನೆಗೆ ಈಗಷ್ಟೇ ಚಾಲನೆ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next